- Home
- Entertainment
- Cine World
- Shivarajkumar's Bhairathi Ranagal: ಐಬೊಮ್ಮಾದಲ್ಲಿ ಶಿವಣ್ಣನ ಹವಾ: ಭೈರತಿ ರಣಗಲ್‌ಗೆ ಉಘೇ ಉಘೇ ಎಂದ ಟಾಲಿವುಡ್ ಮಂದಿ!
Shivarajkumar's Bhairathi Ranagal: ಐಬೊಮ್ಮಾದಲ್ಲಿ ಶಿವಣ್ಣನ ಹವಾ: ಭೈರತಿ ರಣಗಲ್‌ಗೆ ಉಘೇ ಉಘೇ ಎಂದ ಟಾಲಿವುಡ್ ಮಂದಿ!
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವಣ್ಣನ ಭೈರತಿ ರಣಗಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ನರ್ತನ್ ಡೈರೆಕ್ಟ್ ಮಾಡಿದ್ದ ಈ ಸಿನಿಮಾ ಮೈನಿಂಗ್, ನೀರಿನ ಸಮಸ್ಯೆ ಬಗ್ಗೆ ತೋರಿಸಿತ್ತು.

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವಣ್ಣನ ಭೈರತಿ ರಣಗಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ನರ್ತನ್ ಡೈರೆಕ್ಟ್ ಮಾಡಿದ್ದ ಈ ಸಿನಿಮಾ ಮೈನಿಂಗ್, ನೀರಿನ ಸಮಸ್ಯೆ ಬಗ್ಗೆ ತೋರಿಸಿತ್ತು. ನವೆಂಬರ್‌ನಲ್ಲಿ ರಿಲೀಸ್ ಆಗಿ ಥಿಯೇಟರ್‌ನಲ್ಲಿ ಕಮಾಲ್ ಮಾಡಿತ್ತು.
ಈಗ ಸಿನಿಮಾ ಓಟಿಟಿಗೂ ಬಂದ್ಬಿಟ್ಟಿದೆ. ತೆಲುಗು ವರ್ಷನ್ ಆಹಾ ಓಟಿಟಿಯಲ್ಲಿ ಫೆಬ್ರವರಿ 13 ರಿಂದ ಸ್ಟ್ರಿಮಿಂಗ್ ಆಗಿದೆ. ರುಕ್ಮಿಣಿ ವಸಂತ್ ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಓಟಿಟಿಗೆ ಬಂದ ತಕ್ಷಣ ಐಬೊಮ್ಮಾದಲ್ಲೂ ಲೀಕ್ ಆಗಿ ಟ್ರೆಂಡಿಂಗ್‌ನಲ್ಲಿದೆ.
ಚಿಕ್ಕಂದಿನಲ್ಲಿ ಊರಿನ ಜನ ನೀರಿಗಾಗಿ ಪಡುವ ಕಷ್ಟ ನೋಡಿ ಭೈರತಿ ರಣಗಲ್ ತಡೆದುಕೊಳ್ಳೋಕೆ ಆಗಲ್ಲ. ಆಫೀಸರ್‌ಗಳಿಗೆ ಎಷ್ಟು ಹೇಳಿದ್ರೂ ಪ್ರಯೋಜನ ಆಗಲ್ಲ. ಅದಕ್ಕೆ ಸರ್ಕಾರಿ ಆಫೀಸ್‌ಗೆ ಬಾಂಬ್ ಇಟ್ಟು ಜೈಲಿಗೆ ಹೋಗ್ತಾನೆ. ಜೈಲಿನಲ್ಲೇ ಓದಿ ವಕೀಲನಾಗಿ ಊರಿಗೆ ವಾಪಸ್ ಬರ್ತಾನೆ.
ಆಗ ವಿಲನ್ ಮಾಡುವ ಅಕ್ರಮ ಮೈನಿಂಗ್‌ನಿಂದ ಊರಿನ ಜನ ಸಾಯ್ತಾರೆ. ವಕೀಲನಾದ ಭೈರತಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾನೆ ಅನ್ನೋದು ಉಳಿದ ಕಥೆ. ರಾಹುಲ್ ಬೋಸ್, ದೇವರಾಜ್, ಅವಿನಾಶ್ ಕೂಡ ಈ ಸಿನಿಮಾದಲ್ಲಿದ್ದಾರೆ.