ಕಷ್ಟಗಳೆಂದ್ರೆ ಗಣಪತಿಯ ಇಲಿಯಂತೆ ಚಿಕ್ಕದು..! ಅಪ್ಪನ ರಿಲೀಸ್ ನಂತ್ರ ಶಿಲ್ಪಾ ಮಗನ ಭಾವುಕ ಪೋಸ್ಟ್
- ಪೋರ್ನ್ ವಿಡಿಯೋ ಕೇಸ್‌ನಲ್ಲಿ ಬೇಲ್ ಪಡೆದ ಉದ್ಯಮಿ ರಾಜ್ ಕುಂದ್ರಾ
- ಅಪ್ಪನ ಬಿಡುಗಡೆ ನಂತ್ರ ಮೊದಲ ಪೋಸ್ಟ್ ಶೇರ್ ಮಾಡಿದ ಶಿಲ್ಪಾ ಶೆಟ್ಟಿ ಮಗ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಗ ವಿಯಾನ್ ರಾಜ್ ಕುಂದ್ರಾ ಅಮ್ಮನಂತೆಯೇ ತುಂಬಾ ಸ್ಟ್ರಾಂಗ್. ಅಪ್ಪನಿಗೆ ಬೇಲ್ ಸಿಗುತ್ತಿದ್ದಂತೆ ಈ ಪುಟ್ಟ ಬಾಲಕ ಒಂದು ಪೋಸ್ಟ್ ಶೇರ್ ಮಾಡಿದ್ದು, ನೋಡೋರಿಗೆ ಅಬ್ಬಾ ಎಷ್ಟೊಂದು ಪ್ರಭುದ್ಧತೆ ಅಲ್ವಾ ಎನಿಸುವಂತಿದೆ. ಏನಿದೆ ಅದರಲ್ಲಿ ?
ನಟಿ ಶಿಲ್ಪಾ ಶೆಟ್ಟಿ ಅವರ ಪುತ್ರ ವಿಯಾನ್ ರಾಜ್ ಕುಂದ್ರಾ, ಈ ತಿಂಗಳ ಆರಂಭದಲ್ಲಿ ಕುಟುಂಬದ ಗಣೇಶ ಚತುರ್ಥಿ ಆಚರಣೆಯ ಫೊಟೋವನ್ನು ಹಂಚಿಕೊಂಡಿದ್ದಾರೆ. ಅವರ ತಂದೆ ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜಾಮೀನು ಪಡೆದ ಕೆಲವೇ ಗಂಟೆಗಳಲ್ಲಿ 50,000 ಖಾತರಿಯ ಮೇಲೆ ಬೇಲ್ ಪಡೆದಿದ್ದಾರೆ.
ವಿಯಾನ್ ಹಂಚಿಕೊಂಡ ಫೋಟೋದಲ್ಲಿ ಅಮ್ಮ ಶಿಲ್ಪಾ ಮತ್ತು ತಂಗಿ ಸಮೀಷಾ ಜೊತೆಗೆ ದೊಡ್ಡ ಗಣೇಶನ ವಿಗ್ರಹದ ಮುಂದೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ಮೂವರೂ ಹೂವಿನ ವಿನ್ಯಾಸವಿರುವ ಮ್ಯಾಚಿಂಗ್ ಡ್ರೆಸ್ ಧರಿಸಿದ್ದರು. ಗಣೇಶನ ಸೊಂಡಿಲಿನಷ್ಟುದ್ದ ಜೀವನ, ಅವನ ಇಲಿಯಷ್ಟು ಚಿಕ್ಕ ತೊಂದರೆ, ಮೋದಕಗಳಂತೆ ಕ್ಷಣಗಳು ಸಿಹಿಯಾಗಿರುತ್ತವೆ. ಗಣಪತಿ ಬಪ್ಪ ಮೋರೆಯಾ ಎಂದು ಫೋಟೋಗೆ ಕ್ಯಾಪ್ಶನ್ ಕೊಡಲಾಗಿದೆ.
ಅಶ್ಲೀಲ ವಿಡಿಯೋ ದಂಧೆಯಲ್ಲಿ ಪ್ರಮುಖ ಆರೋಪಿ ಎಂದು ಆರೋಪಿಸಿ ರಾಜ್ ಅವರನ್ನು ಜುಲೈನಲ್ಲಿ ಬಂಧಿಸಲಾಗಿತ್ತು. ಅವರು ಪೋರ್ನ್ ವಿಡಿಯೋ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರ ಹಾಟ್ ಶಾಟ್ಸ್ ಆಪ್ ಮೂಲಕ ಸ್ಟ್ರೀಮಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಕೊನೆಗೂ ರಾಜ್ ಕುಂದ್ರಾಗೆ ಜಾಮೀನು.. ಯಾವ ಪಾಯಿಂಟ್ ನೆರವಿಗೆ ಬಂತು?
ಸೋಮವಾರ ಸೆ.20ರಂದು ಮುಂಬೈ ನ್ಯಾಯಾಲಯವು ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರಿಗೆ ಜಾಮೀನು ನೀಡಿದೆ. ಶಿಲ್ಪಾ ಕಳೆದ ತಿಂಗಳು ರಾಜ್ ಬಂಧನದ ಕುರಿತು ಹೇಳಿಕೆ ನೀಡಿದ್ದರು.
ಇದು ತನ್ನ ಕುಟುಂಬಕ್ಕೆ ಸವಾಲಿನ ಸಮಯ ಆದರೆ ಮುಂಬೈ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದರು.
ವಿಯಾನ್ ಮತ್ತು ಸಮೀಶಾ ಸಲುವಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ಅವರು ಒತ್ತಾಯಿಸಿದ್ದರು. ಅವರು ತಮ್ಮನ್ನು ತಾವು ಕಾನೂನು ಪಾಲಿಸುವ ಹೆಮ್ಮೆಯ ಭಾರತೀಯ ನಾಗರಿಕಳು ಎಂದು ಸಮರ್ಥಿಸಿಕೊಂಡಿದ್ದಾರೆ.