ಕಾಜೋಲ್ - ಶಿಲ್ಪಾ ಗರ್ಭಪಾತದ ನೋವು ಅನುಭವಿಸಿದ ನಟಿಯರು
ತಾಯ್ತನ ಪ್ರತಿಯೊಬ್ಬ ಮಹಿಳೆಯ ಜೀವನದ ಪ್ರಮುಖ ಘಟ್ಟ. ಮಗುವಿನ ಜೊತೆ ತಾಯಿಗೂ ಮರುಹುಟ್ಟು ನೀಡುವ ಘಳಿಗೆ ಇದು. ಕೆಲವರ ಜೀವನದಲ್ಲಿ ತಾಯಿಯಾಗಲು ಕಷ್ಟಗಳನ್ನೂ ಎದುರಿಸಬೇಕಾಗುತ್ತದೆ. ಶಿಲ್ಪಾ ಶೆಟ್ಟಿಯಿಂದ ಹಿಡಿದು ಕಾಜೋಲ್ ಹಾಗೂ ಶಾರುಖ್ ಖಾನ್ ಹೆಂಡತಿ ಗೌರಿಯವರೆಗೆ ಗರ್ಭದಲ್ಲಿಯೇ ಮಕ್ಕಳನ್ನು ಕಳೆದುಕೊಂಡ ನೋವನ್ನು ಅನುಭವಿಸಿದ್ದಾರೆ. ಜೀವನದಲ್ಲಿ ಮಿಸ್‌ಕ್ಯಾರೇಜ್ ನೋವು ಅನುಭವಿಸಿದ ಸೆಲೆಬ್ರೆಟಿಗಳು ಇವರು.

ಕಾಜೋಲ್ ಮದುವೆಯಾದ ಎರಡು ವರ್ಷಗಳ ನಂತರ ಗರ್ಭಿಣಿಯಾಗಿದ್ದರು, ಆದರೆ ಗರ್ಭಪಾತದ ಕಾರಣದಿಂದಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಲಿಲ್ಲ ಎಂದಿದ್ದರು ಒಮ್ಮೆ.

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡ ಈ ನೋವನ್ನು ಅನುಭವಿಸಿದ್ದಾರೆ. ಗೌರಿ 1997 ರಲ್ಲಿ ಗರ್ಭಪಾತವಾಗಿದ್ದರ ಬಗ್ಗೆ ಶಾರುಖ್ ಚಾಟ್ ಶೋವೊಂದರಲ್ಲಿ ತಿಳಿಸಿದ್ದರು. ಇದರ ನಂತರ, ಅವರ ಮಗ ಅರ್ಯಾನ್ ಜನಿಸಿದ್ದು.

ಶಿಲ್ಪಾ ಶೆಟ್ಟಿ 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾರನ್ನು ವಿವಾಹವಾದರು. ಶಿಲ್ಪಾ 2012ರಲ್ಲಿ ಮಗ ವಿಯಾನ್‌ಗೆ ಜನ್ಮ ನೀಡುವ ಮೊದಲು ಒಂದು ಮಗುವನ್ನು ಶಿಲ್ಪಾ ಗರ್ಭಪಾತದಲ್ಲಿ ಕಳೆದುಕೊಂಡಿದ್ದಾರೆ.

ಕಾಜೋಲ್ ಕಭಿ ಖುಷಿ ಕಭಿ ಗಮ್ ಸಿನಿಮಾ ಹಿಟ್ ಆದ ಸಮಯದಲ್ಲಿ, ಮಿಸ್‌ಕ್ಯಾರೇಜ್ ಕಾರಣದಿಂದ ಆಸ್ಪತ್ರೆಯಲ್ಲಿದ್ದರು.

ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಅವರು 2009ರಲ್ಲಿ ತಾಯಿಯಾಗಲು ಹೊರಟಿದ್ದರು. ಆದರೆ ಅವರೂ ಗರ್ಭಪಾತವಾದ ನೋವನ್ನು ಅನುಭವಿಸಿದ್ದರು. ನಂತರ 2011 ರಲ್ಲಿ, ಐವಿಎಫ್ ಸೆರೊಗಸಿ ಸಹಾಯದಿಂದ, ಮಗುವನ್ನು ಪಡೆದರು.

ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು 1972 ರಲ್ಲಿ ಗರ್ಭಿಣಿಯಾದರು, ಆದರೆ 8 ತಿಂಗಳ ನಂತರ ಗರ್ಭಪಾತವಾಗಿ ತಮ್ಮ ಮಗುವನ್ನು ಕಳೆದುಕೊಂಡರು. ಇದರ ನಂತರ ಆಕೆ ಎಂದಿಗೂ ತಾಯಿಯಾಗಲಿಲ್ಲ. ಇಂದು ಸೈರಾರಿಗೆ 75 ವರ್ಷ ವಯಸ್ಸು. ಇವತ್ತಿಗೂ ಅವರಿಗೆ ಮಕ್ಕಳಿಲ್ಲದ ಕೊರಗಿದೆ.

2012 ರಲ್ಲಿ ನಂದೀಶ್ ಸಂಧುರನ್ನು ಮದುವೆಯಾದ ರಶ್ಮಿ ದೇಸಾಯಿ ಕೆಲವೇ ತಿಂಗಳಲ್ಲಿ ಗರ್ಭಿಣಿಯಾಗಿದ್ದರು. ಆದರೆ ಮಿಸ್‌ಕ್ಯಾರೇಜ್ ಮೂಲಕ ಆ ಮಗುವನ್ನು ಕಳೆದುಕೊಂಡರು. ಈ ಆಘಾತವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ವತಃ ಅವರು ಹೇಳಿದ್ದರು. ಆಗಲೂ ಅವರು ಕೆಲಸ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.

ಕರಣ್ ಪಟೇಲ್‌ರನ್ನು ವಿವಾಹವಾಗಿರುವ ನಟಿ ಅಂಕಿತಾ ಭರದವ 2018ರಲ್ಲಿ ಗರ್ಭಿಣಿಯಾದರು. ಆದರೆ ಐದನೇ ತಿಂಗಳಲ್ಲಿ ಗರ್ಭಪಾತವಾಯಿತು. ಅಂಕಿತಾ ನಂತರ ಮಗಳಿಗೆ ಜನ್ಮ ನೀಡಿದರು.