ಆನ್‌ಲೈನ್ ಪ್ರಿಯಳಾದ ಶಿಲ್ಪಾ ಶೆಟ್ಟಿ, ಮಗನಿಗಾಗಿ ಆಫ್‌ಲೈನ್ ಶಾಪಿಂಗ್, ಫೋಟೋ ವೈರಲ್!
ಆನ್‌ಲೈನ್ ಶಾಪಿಂಗ್ ಪ್ರಿಯರಾದ ಶಿಲ್ಪಾ ಶೆಟ್ಟಿ ಮಗ ವಿಹಾನ್ ಜೊತೆ ಆಫ್‌ಲೈನ್ ಶಾಪಿಂಗ್ ಮಾಡ್ತಾ ಕಾಣಿಸಿಕೊಂಡ್ರು. ಬಿಳಿ ಬ್ಲೇಜರ್ ಮತ್ತು ನೀಲಿ ಡೆನಿಮ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಶಿಲ್ಪಾ, ಮಕ್ಕಳಿಗೆ ಆಫ್‌ಲೈನ್ ಶಾಪಿಂಗ್ ಅಗತ್ಯ ಅಂತ ಹೇಳಿದ್ರು.

ಶಿಲ್ಪಾ ಶೆಟ್ಟಿ ಮಗ ವಿಹಾನ್ ರಾಜ್ ಕುಂದ್ರಾ ಜೊತೆ ಮುಂಬೈನಲ್ಲಿ ಆಫ್‌ಲೈನ್ ಶಾಪಿಂಗ್ ಮಾಡ್ತಾ ಕಾಣಿಸಿಕೊಂಡ್ರು. ಅರೆ ಇದೇನಪ್ಪ ಸಾಮಾನ್ಯರಂತೆ ಮಗನೊಂದಿಗೆ ಬಂದಿದ್ದಾರಲ್ಲ ಎಂದು ಫ್ಯಾನ್ ಆಶ್ಚರ್ಯಗೊಂಡರು.
ಕಾರಿನಿಂದ ಮೊದಲು ಇಳಿದ ಶಿಲ್ಪಾ ಶೆಟ್ಟಿ,, ಮಗನೊಂದಿಗೆ ನಗುತ್ತಾ ಶಾಪಿಂಗ್ ಒಳಗೆ ಹೋದರು. ಕೆಲಹೊತ್ತಿನಲ್ಲಿ ತಮ್ಮ ಮಗ ವಿಹಾನ್ ರಾಜ್ ಕುಂದ್ರಾ ಜೊತೆ ಶಾಪಿಂಗ್ ಬ್ಯಾಗ್‌ಗಳನ್ನು ಹಿಡಿದುಕೊಂಡು ಕಾಣಿಸಿಕೊಂಡ್ರು.
ಬಿಳಿ ಬ್ಲೇಜರ್ ಮತ್ತು ನೀಲಿ ಡೆನಿಮ್‌ನಲ್ಲಿ ಶಿಲ್ಪಾ ಶೆಟ್ಟಿ ತುಂಬಾ ಆಕರ್ಷಕವಾಗಿ ಕಾಣ್ತಾ ಇದ್ರು. ವಯಸ್ಸಾದ್ರೂ ಒಂದಿನಿತು ಕಾಣಿಸುವುದಿಲ್ಲ ಯಂಗ್ ಅಂಡ್ ಎನರ್ಜೆಟಿಕ್ ಆಗಿರುವ ಶಿಲ್ಪಾಶೆಟ್ಟಿ.
ಶಿಲ್ಪಾ ಶೆಟ್ಟಿಗೆ ಆನ್‌ಲೈನ್ ಶಾಪಿಂಗ್ ಇಷ್ಟವಾದರೂ, ಆಗಾಗ ಮಕ್ಕಳಿಗಾಗಿ ಆಫ್‌ಲೈನ್‌ನಲ್ಲೂ ಶಾಪಿಂಗ್ ಮಾಡ್ತಾರೆ. ಬಾಲಿವುಡ್ ನಟಿಯರು ಈ ರೀತಿ ಸಾರ್ವಜನಿಕವಾಗಿ ಶಾಪಿಂಗ್ ಮಾಡುವುದು ಕಡಿಮೆ ಆದರೆ ಶಿಲ್ಪಾಶೆಟ್ಟಿ ಮೊದಲಿನಿಂದಲೂ ಡೌನ್ ಟು ಅರ್ಥ್ ನಟಿ.
ಬಾಜಿಗರ್ ನಟಿ ಶಿಲ್ಪಾ ಶೆಟ್ಟಿ ಆಲ್ಪಿನೋ ಹೆಲ್ತ್ ಫುಡ್ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಇಗಲೂ ಕ್ರಿಯಾಶೀಲವಾಗಿರುವ ನಟಿಯಾಗಿದ್ದಾರೆ.
ಶಿಲ್ಪಾ ಶೆಟ್ಟಿ ಮಗ ಕೂಡ ತಾಯಿಗೆ ಸಾಥ್ ನೀಡಿದ್ರು.
ಇದನ್ನೂ ಓದಿ: ಪತಿಯ ಫೋಟೋ ನೋಡನೋಡುತ್ತಲೇ ಬೆಚ್ಚಿ ಬಿದ್ದ ಶಿಲ್ಪಾ ಶೆಟ್ಟಿ! ಎಲ್ಲಾ ನೀಲಿ ಚಿತ್ರದ ಮಹಿಮೆ ಎನ್ನೋದಾ ನೆಟ್ಟಿಗರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.