ಶತ್ರುಘ್ನಾ ಜೊತೆ ಮಗಳ ಮದುವೆ ಮಾಡಲು ತಿರಸ್ಕರಿಸಿದ್ದರು ಸೋನಾಕ್ಷಿ ಅಜ್ಜಿ !
First Published Dec 9, 2020, 5:01 PM IST
ಶಾಟ್‌ಗನ್ ಎಂದು ಕರೆಯಲ್ಪಡುವ ಬಾಲಿವುಡ್ ನಟ ಶತ್ರುಘನ್ ಸಿನ್ಹಾಗೆ 75 ವರ್ಷಗಳ ಸಂಭ್ರಮ. ಡಿಸೆಂಬರ್ 9, 1945ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಶತ್ರುಘನ್ ಸಿನ್ಹಾ ಅವರು 'ಪ್ಯಾರ್ ಹೈ ಪ್ಯಾರ್' (1969) ಚಿತ್ರದೊಂದಿಗೆ ಬಾಲಿವುಡ್‌ಗೆ ಪ್ರವೇಶ ಪಡೆದರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಶತ್ರುಘನ್ ಸಿನ್ಹಾರ ಪರ್ಸನಲ್ ಲೈಫ್ ಸಹ ಸಖತ್ ಇಂಟರೆಸ್ಟಿಂಗ್ ಆಗಿದೆ. ಪೂನಂ ಚಂದ್ರಮಣಿ ಜೊತೆ ಮದುವೆ ಅಥವಾ ರೀನಾ ರೈ ಜೊತೆಯ ರಿಲೆಷನ್‌ಶಿಪ್ ಆಗಲಿ ಎರಡೂ ವಿಷಯಗಳು ಬಾಲಿವುಡ್‌ನಲ್ಲಿ ಬಹಳ ಸುದ್ದಿಯಾಗಿತ್ತು. ಸಿನ್ಹಾ ಜುಲೈ 1980ರಲ್ಲಿ ಪೂನಂ ಚಂದ್ರಮಣಿಯನ್ನು ವಿವಾಹವಾದರು. ಆದರೆ, ಮೊದಲಿಗೆ ಸೋನಾಕ್ಷಿಯ ಅಜ್ಜಿ ಇವರ ಮುಖ ನೋಡಿ ಮದುವೆಯನ್ನು ತಿರಸ್ಕರಿಸಿದ್ದರಂತೆ. ವಿವರ ಇಲ್ಲಿ.

ಶತ್ರುಘನ್ ಸಿನ್ಹಾ ಮತ್ತು ಅವರ ಪತ್ನಿ ಕೆಲವು ವರ್ಷಗಳ ಹಿಂದೆ ಕಪಿಲ್ ಶರ್ಮಾ ಶೋಗೆ ಆಗಮಿಸಿದಾಗ ಅವರ ಮೊದಲ ಭೇಟಿಯ ಕಥೆಯನ್ನು ವಿವರಿಸಿದರು.

ಶತ್ರುಘನ್ ಸಿನ್ಹಾ ಮತ್ತು ಪೂನಂ ಚಂದ್ರಮಣಿ ಮೊದಲ ಬಾರಿಗೆ ರೈಲಿನಲ್ಲಿ ಭೇಟಿಯಾದರು. 'ಪಾಟ್ನಾದಿಂದ ಮುಂಬೈಗೆ ಟ್ರೈನ್ ಜರ್ನಿಯಲ್ಲಿ ನಾವು ಮೊದಲ ಬಾರಿಗೆ ಪರಸ್ಪರ ಭೇಟಿಯಾದೆವು. ನಮ್ಮ ಸೀಟ್‌ಗಳು ಮುಖಾಮುಖಿಯಾಗಿದ್ದವು,' ಎಂದು ಪೂನಂ ಹೇಳಿದ್ದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?