ಈ ನಟನ ಬಂಗಲೆ ಅಮಿತಾಬ್‌ ಬಚ್ಚನ್‌ ಬಂಗಲೆಗಿಂತ ದುಬಾರಿ !

First Published Dec 10, 2020, 4:04 PM IST

ಬಾಲಿವುಡ್‌ ಹಿರಿಯ ನಟ ಶತ್ರುಘನ್‌  ಸಿನ್ಹಾ  2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ 131 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದರು. ಶತ್ರುಘನ್ ಮುಂಬೈನಿಂದ ಪುಣೆ, ದೆಹಲಿ, ಗುರುಗ್ರಾಮ್ ಮತ್ತು ಪಾಟ್ನಾ ಸೇರಿ  9 ಫ್ಲಾಟ್ ಹಾಗೂ ಬಂಗಲೆಗಳನ್ನು ಖರೀದಿಸಿದ್ದಾರೆ. ಅವರ ಒಟ್ಟು ಮೌಲ್ಯ 25.75 ಕೋಟಿ. ಇದಲ್ಲದೇ, ಮುಂಬೈನ ಜುಹುನಲ್ಲಿ ನಿರ್ಮಿಸಲಾದ ಅವರ ಬಂಗಲೆ 'ರಾಮಾಯಣ', ಕೋಟ್ಯಂತರ ಮೌಲ್ಯದ್ದಾಗಿದೆ. ಶತ್ರುಘನ್ ಸಿನ್ಹಾ ಈ ಬಂಗಲೆಯನ್ನು ವಸತಿ ಮತ್ತು ಆಫೀಸ್‌ ಎರಡಕ್ಕೂ ಬಳಸುತ್ತಾರೆ. ಅವರು 48 ವರ್ಷಗಳ ಹಿಂದೆ 1972ರಲ್ಲಿ  ಖರೀದಿಸಿದ ಈ ಬಂಗಲೆ ಕೋಟಿ ಮೌಲ್ಯದ್ದಾಗಿದೆ.

ಮದುವೆಗೆ ಕೇವಲ 8 ವರ್ಷಗಳ ಮೊದಲು ಶತ್ರುಘನ್ ಸಿನ್ಹಾ ಮೊದಲ ಮನೆಯನ್ನು ಖರೀದಿಸಿದರು.

ಅವರು ಬಂಗಲೆ ಖರೀದಿಸಿದ 8 ವರ್ಷಗಳ ನಂತರ 1980ರಲ್ಲಿ ಸೋನಾಕ್ಷಿಯ ತಾಯಿ ಪೂನಮ್ ಅವರನ್ನು ವಿವಾಹವಾದರು.

ಜುಹಿವಿನ ಜೆವಿಪಿಡಿ ಸ್ಕೀಮ್‌ನಲ್ಲಿರುವ ಈ ಬಂಗಲೆ ಅಮಿತಾಬ್ ಬಚ್ಚನ್ ಮನೆಗಿಂತ ಹಲವು ಪಟ್ಟು ಹೆಚ್ಚು ದುಬಾರಿಯಾಗಿದೆ. ವಾಸ್ತವವಾಗಿ, ಅಮಿತಾಬ್ ಅವರು ಫೆಬ್ರವರಿ 18, 1975 ರಂದು ಜುಹುವಿನಲ್ಲಿ 'ಪ್ರತೀಕ್' ಎಂಬ ಬಂಗಲೆ ಖರೀದಿಸಿದರು, ಅದು ಆ ಅವಧಿಯಲ್ಲಿ ಸುಮಾರು 8 ಲಕ್ಷ ರೂಪಾಯಿಗಳಷ್ಟಿತ್ತು, ಆದರೆ ಶತ್ರುಘನ್ ಅವರ ಬಂಗಲೆ  ಆ ಅವಧಿಯಲ್ಲೇ ಕೋಟಿ ಮೌಲ್ಯದ್ದಾಗಿತ್ತು.

ಹೀರೋ ಆಗಿ ಯಾವತ್ತೂ ಗುರುತಿಸಿಕೊಳ್ಳದ ಶತ್ರುಘ್ನಾ ಸಿನ್ಹ ಖಳನಾಯಕನಾಗಿಯೇ ಜನಮನ ಗೆದ್ದವರು. ಹಾಗೆಯೇ ಕೈ ತುಂಬಾ ಸಂಭಾವನೆ ಪಡೆಯುತ್ತಿದ್ದರು.

ಜನವರಿ 2018ರಲ್ಲಿ ಬಿಎಂಸಿ ಶತ್ರುಘ್ನ ಸಿನ್ಹಾ ಅವರ ಬಂಗಲೆ 'ರಾಮಾಯಣ'ದ  ಅಕ್ರಮ ನಿರ್ಮಾಣದ ವಿರುದ್ಧ ಕ್ರಮ ಕೈಗೊಂಡಿತ್ತು. ಛಾವಣಿಯ ಮತ್ತು ನೆಲ ಮಹಡಿಯಲ್ಲಿ ಅವರು ಅನುಮತಿಯಿಲ್ಲದೆ ಶೌಚಾಲಯ ಮತ್ತು ಪೂಜಾ ಗೃಹವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಅವರಿಗೆ ಎರಡು ಬಾರಿ ನೋಟಿಸ್ ಸಹ ನೀಡಿದರೂ  ಉತ್ತರ ಸಿಗದಿದ್ದಾಗ ಸರ್ಕಾರ ಅಕ್ರಮ ಭಾಗವನ್ನು ಕೆಡವಿದೆ.

ಮಾಧ್ಯಮ ವರದಿಗಳ ಪ್ರಕಾರ, ಪಾಟ್ನಾದ ಲವ್-ಕುಶ್ ಟವರ್‌ನಲ್ಲಿ ಶತ್ರುಘನ್ ಸಿನ್ಹಾ 1.25 ಕೋಟಿ ಮೌಲ್ಯದ ಫ್ಲಾಟ್ ಹೊಂದಿದ್ದಾರೆ. ಅವರು ಅದನ್ನು ಕಚೇರಿಯಾಗಿ ಬಳಸುತ್ತಾರೆ. ಇದಲ್ಲದೆ ಅವರು ಪುಣೆಯಲ್ಲಿ 5 ಕೋಟಿಯ ಮೌಲ್ಯದ ಗೋಡಾನ್‌ ಹೊಂದಿದ್ದಾರೆ.

ಬಿಹಾರದ ಮೂಲದ ಸಿನ್ಹಾ ಬಿಜೆಪಿ ಎಂಪಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆದರೀಗ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ.

ನಟ 1989 ರಲ್ಲಿ ಮುಂಬೈನ ಮಾಧ್ ದ್ವೀಪದಲ್ಲಿ 9.8 ಕೋಟಿ ರೂ ಭೂಮಿ ಖರೀದಿಸಿದ್ದರೆ,. ಅದೇ ಸಮಯದಲ್ಲಿ, ಅವರ ಪತ್ನಿ ಪೂನಮ್ 2004 ರಲ್ಲಿ ಪುಣೆಯಲ್ಲಿ 15 ಕೋಟಿ ರೂ ಬೆಲೆಯ ಜಾಗ ಕೊಂಡರು. ಇದಲ್ಲದೆ ಡೆಹ್ರಾಡೂನ್‌ನಲ್ಲಿಯೂ  60 ಲಕ್ಷ ರೂಪಾಯಿ ಮೌಲ್ಯದ ಭೂಮಿಯನ್ನು ಹೊಂದಿದ್ದಾರೆ.

ಕಾರುಗಳ ಬಗ್ಗೆ ಒಲವು ಹೊಂದಿರುವ ಸಿನ್ಹಾ ರ ಸಂಗ್ರಹದಲ್ಲಿ 26 ಸಾವಿರ ರೂಪಾಯಿಗಳ ಹಳೆಯ ಅಂಬಾಸಡರ್‌ನಿಂದ ಹಿಡಿದು 2013ರಲ್ಲಿ  ಪೂನಮ್ ಖರೀದಿಸಿದ 57 ಮಿಲಿಯನ್ ಮರ್ಸಿಡಿಸ್‌ ಕಾರುಗಳು ಸೇರಿವೆ. ಇದಲ್ಲದೆ ಟೊಯೋಟಾ ಫಾರ್ಚೂನರ್, ಟೊಯೋಟಾ ಕ್ಯಾಮ್ರಿ, ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೋ, ಹೋಂಡಾ ಅಕಾರ್ಡ್ ಮತ್ತು ಹೋಂಡಾ ಸಿಟಿಗಳು ಸಹ ಇವೆ.

ಹಿಂದೆ ಹಲವಾರು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದ ಸಿನ್ಹಾಗೆ  1971 ರಲ್ಲಿ 'ಮೇರೆ ಅಪ್ನೆ' ಚಿತ್ರದ ಮೂಲಕ ಯಶಸ್ಸು ಸಿಕ್ಕಿತು. ಅವರ ಎರಡನೆಯ ಹಿಟ್‌ ಸಿನಿಮಾ  1973 ರ 'ಸಬ್ಕಾ',  ಪೂನಮ್ ಅವರೊಂದಿಗೆ ನಟಿಸಿದರು, ನಂತರ ಇಬ್ಬರೂ ಮದುವೆಯಾದರು.

'ದೋಸ್ತ್', 'ಕಾಲಿಚರಣ್', 'ವಿಶ್ವನಾಥ್', 'ದೋಸ್ತಾನಾ', 'ಕ್ರಾಂತಿ', 'ಸಾಫ್ಟ್ ಗರಂ', 'ಆನ್'  ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಇವರು ಅಭಿನಯದ ಜೊತೆ ದೊಡ್ಡ ಧ್ವನಿ ಹಾಗೂ ಡೈಲಾಗ್‌ಗಳಿಗೆ ಫೇಮಸ್‌ ಆಗಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?