ನೀಲಿ ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ಶನಯಾ ಕಪೂರ್ ಗ್ಲಾಮರ್ಸ್ ಫೋಟೋ ವೈರಲ್!
ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಅವರ ಪುತ್ರಿ ಶನಯಾ ಕಪೂರ್ (Shanaya Kapoor) ಇನ್ನೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡದಿರಬಹುದು, ಆದರೆ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ ಅಂತೆಯೇ ಗುರುವಾರವೂ ಶನಾಯಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅ ಫುಲ್ ಫಿದಾ ಆಗಿದ್ದಾರೆ.

ಶನಯಾ ಕಪೂರ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಕಿಲ್ಲರ್ ಲುಕ್ ನೀಡುತ್ತಿದ್ದಾರೆ. ಶನಯಾರ ಫೋಟೋಗಳು ಸಖತ್ ವೈರಲ್ ಆಗಿವೆ.
ವಾಸ್ತವವಾಗಿ ಶನಯಾ ಇತ್ತೀಚೆಗೆ ಪ್ರಸಿದ್ಧ ಐಷಾರಾಮಿ ಶೂಗಳು ಮತ್ತು ಬ್ಯಾಗ್ ಬ್ರ್ಯಾಂಡ್ ಜಿಮ್ಮಿ ಚೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ನೀಲಿ ಬಣ್ಣದ ಶಾರ್ಟ್ ಡ್ರೆಸ್ ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.
ನೀಲಿ ಬಣ್ಣದ ಶಾರ್ಟ್ ಡ್ರೆಸ್‌ನೊಂದಿಗೆ ತಿಳಿ ನೀಲಿ ಬಣ್ಣದ ಬ್ಲೇಜರ್ ಅನ್ನು ಪೇರ್ ಮಾಡಿಕೊಂಡಿದ್ದ ಶನಯಾ ಇದರೊಂದಿಗ ಗೋಲ್ಡನ್ ಹೀಲ್ಸ್ ಧರಿಸಿ ಹ್ಯಾಂಡ್‌ಬ್ಯಾಗ್ ಹಿಡಿದಿದ್ದಾರೆ .
ಈ ಫೋಟೋಗಳನ್ನು ಹಂಚಿಕೊಂಡ ಶನಯಾ, 'ಪ್ರತಿ ಹುಡುಗಿಗೂ ಬ್ಲ್ಯೂ ಶೆಡ್ ಇದೆ' ಎಂದು ಬರೆದಿದ್ದಾರೆ. ತಾಯಿ ಮಹೀಪ್ ಕಪೂರ್ ಶನಾಯಾ ಅವರ ಈ ಫೋಟೋಗೆ ನೀಲಿ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ, ಶನಾಯಾ ಅವರ ಬಾಲ್ಯದ ಗೆಳತಿ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಈ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿ, 'ಸ್ಟನ್ನಿಂಗ್' ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಇದಲ್ಲದೆ ನೀಲಂ ಕೊಠಾರಿ, ಅಂಜಿನಿ ಧವನ್ ಮತ್ತು ಶೆಹ್ಲಾ ಖಾನ್ ಕೂಡ ಶನಾಯಾ ಅವರು ಪ್ರತಿಕ್ರಿಯಿಸಿದ್ದಾರೆ.
ಶನಯಾ ಶೀಘ್ರದಲ್ಲೇ 'ಬೇಧಡಕ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ .ಇದರಲ್ಲಿ ಅವರ ಎದುರು ಗುರ್ಫತೆ ಮತ್ತು ಲಕ್ಷ್ಯ ಲಾಲ್ವಾನಿ ಮುಂತಾದ ನಟರು ಕಾಣಿಸಿಕೊಳ್ಳಲಿದ್ದಾರೆ. ಶಶಾಂಕ್ ಖೈತಾನ್ ನಿರ್ದೇಶನದ ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.