Asianet Suvarna News Asianet Suvarna News

ಸಿನಿಮಾದಲ್ಲಿ ಶಕೀಲಾ ಬೆತ್ತಲಾಗಿ ನಟಿಸಲು ಕಾರಣವೇನು ಗೊತ್ತಾ? ಹೊರಬಿತ್ತು ಅಸಲಿ ಸತ್ಯ!

ಭಾರತದ ಮೊದಲ ಅಧಿಕೃತ ನೀಲಿಚಿತ್ರ ತಾರೆಯಾಗಿ ನಟಿಸಿದ ಶಕೀಲಾ ಅವರು ವಯಸ್ಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಅಸಲಿ ಕಾರಣ ಏನೆಂಬುದು ಬಹುರಂಗವಾಗಿದೆ.

Indian first adult movie Heroine Actress Shakeela faced very sad Life history sat
Author
First Published Jun 9, 2024, 5:14 PM IST

ನಟಿ ಶಕೀಲಾ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅರೆನಗ್ನ ಹಾಗೂ ಅಶ್ಲೀಲ ಸಿನಿಮಾಗಳನ್ನು ನಟಿಸಿ ಮೊದಲ ನೀಲಿಚಿತ್ರ ತಾರೆ ಅವರಾಗಿದ್ದಾರೆ. ಆದರೆ, ಶಕೀಲಾ ಅವರ ಕರುಣಾಜನಕ ಜೀವನದ ಕಥೆ ಕೇಳಿದರೆ ಎಂಥಹ ಕಲ್ಲು ಮನಸ್ಸೂ ಕೂಡ ಕರಗುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಶಕೀಲಾ ಅವರು ಮನೆಗೆ ಹಿರಿಮಗಳಾಗಿದ್ದರು. ಹೀಗಾಗಿ, 6 ಮಕ್ಕಳು ಇದ್ದಂತಹ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕುಟುಂಬ ನಿರ್ವಹಣೆ ಮಾಡುವುದಕ್ಕಾಗಿ ಯಾವುದೇ ತರಹದ ದುಡಿಮೆಗೂ ಸಿದ್ಧರಾಗಿದ್ದರು.

ಇನ್ನು ತನ್ನ ಜೀವನದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಟನೆಗೆ ಮುಂದಾದರು. ಈ ವೇಳೆ ಪ್ರತಿದಿನ ದುಡಿಮೆ ಮಾಡಲೇಬೇಕಾದ ಅನಿವಾರ್ಯತೆ ಶಕೀಲಾ ಅವರಿಗೆ ಹೆಗಲಿಗೆ ಬಿದ್ದಿತ್ತು. ಹೀಗಾಗಿ, ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಿದರೂ ಹೆಚ್ಚು ಹಣ ಸಿಗುತ್ತಿರಲಿಲ್ಲ. ಕುಟುಂಬ ನಿರ್ವಹಣೆಗೆ ಹೆಚ್ಚು ಹಣ ಹೊಂದಿರುವ ಅನಿವಾರ್ಯತೆಯಿಂದ 1994ರಲ್ಲಿ ಮೊಟ್ಟ ಮೊದಲ ಬಾರಿಗೆ ಅರೆನಗ್ನ ಸಿನಿಮಾಗಳಲ್ಲಿ ನಟಿಸಲು ಮುಂದಾದರು. ಇದರ ನಂತರ ನಗ್ನ ಚಿತ್ರಗಳಲ್ಲಿಯೂ (ಬ್ಲೂ ಫಿಲಂ) ನಟಿಸಲು ಮುಂದಾದರು. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಧಿಕೃತವಾಗಿ ಅರೆನಗ್ನ ಮತ್ತು ನಗ್ನ ಚಿತ್ರಗಳಲ್ಲಿ ಕಾಣಿಸಿಕೊಂಡ ಮೊದಲ ನಟಿ ಶಕೀಲಾ ಎಂಬ ಅಪಖ್ಯಾತಿಯನ್ನೂ ಗಳಿಸಿದ್ದಾರೆ. ಇದಾದ ನಂತರ ತಮ್ಮ ಕುಟುಂಬ ಒಂದು ಸಹಜ ಸ್ಥಿತಿಗೆ ತಲುಪಿದೆ ಎನ್ನುವಷ್ಟರಲ್ಲಿ ಅವರಿಗಿದ್ದ ಮರ್ಯಾದೆ ಯಾವ ಮಟ್ಟಿಗೆ ಹಳಾಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಾಗಿರಲಿಲ್ಲ.

ಬಾಲಕಿಯಾಗಿದ್ದಾಗಲೇ ಗೆಳೆಯನಿಂದ ಬಸುರಾಗಿದ್ದ ನಟಿ ಶಕೀಲಾ ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ನಡುಗಿಸಿದ್ದು ಹೇಗೆ?

ತಾನು ಹೆಚ್ಚೆಚ್ಚು ಹಣದ ದುಡಿಮೆಯ ಆಸೆಯಿಂದಾಗಿ ತಮ್ಮ ಮರ್ಯಾದೆ ಕಳೆದುಕೊಂಡ ಶಕೀಲಾ ತಾನು ಕಳೆದುಕೊಂಡಿದ್ದ ಮರ್ಯಾದೆ ಮತ್ತು ಗೌರವವನ್ನು ಅದೇ ಚಿತ್ರರಂಗದಲ್ಲಿ ಮರಳಿ ಪಡೆಯಬೇಕು ಎಂದು ಕೆಲವು ಸಾಂಪ್ರದಾಯಿಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ, ಅವರಿಗೆ ಇಂತಹ ಚಿತ್ರಗಳಲ್ಲಿಯೂ ಅಶ್ಲೀಲಕ್ಕೆ ಹೋಲಿಕೆ ಆಗುವಂತಹ ಪಾತ್ರಗಳನ್ನೇ ನೀಡಲಾಗುತ್ತಿತ್ತು. ಆದರೆ, ಬದಲಾದ ಜಗತ್ತಿನಲ್ಲಿ ತನ್ನನ್ನು ಸಿನಿಮಾ ಜಗತ್ತು ಯಾವ ರೀತಿಯಾಗಿ ಕಾಣುತ್ತಿದೆ ಎಂಬುದು ಮನವರಿಕೆ ಮಾಡಿಕೊಂಡರು. ಕೆಲವು ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೂ, ಅವರ ಜೀವನಕ್ಕಾಗಿ ಸಿನಿಮಾ ರಂಗದ ನಂಟನ್ನು ಈಗಲೂ ಬಿಡಲು ಸಾಧ್ಯವಾಗಿಲ್ಲ.

ಅಂದು ಫ್ಯಾಮಿಲಿಗಾಗಿ ಹೋರಾಡಿ ಒಬ್ಬಂಟಿಯಾದ್ರು, ಮಿಲ್ಲಾ ದತ್ತು ಪಡೆದು ಸದ್ಯ ಜಂಟಿಯಾದ್ರು ನಟಿ ಶಕೀಲಾ!

ಸಿನಿಮಾ ಮತ್ತು ಕಿರುತೆರೆಯಿಂದ ದೂರವಾಗಿದ್ದ ಶಕೀಲಾ ಅವರಿಗೆ ಮರಳಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲು ಅವಕಾಶ ನೀಡಿದ್ದು ಕನ್ನಡ ಬಿಗ್‌ಬಾಸ್ ಮನೆ ಎಂದರೆ ತಪ್ಪಾಗುವುದಿಲ್ಲ. ಕನ್ನಡದ ಬಿಗ್‌ಬಾಸ್ 2ನೇ ಸೀಸನ್‌ನಲ್ಲಿ (2014ರಲ್ಲಿ) ಸ್ಪರ್ಧಿಯಾಗಿ ಬಂದ ಶಕೀಲಾ ಅಭಿಮಾನಿಗಳ ಮುಂದೆ ಬಹುದಿನಗಳ ನಂತರ ಕಾಣಿಸಿಕೊಂಡಿದ್ದರು. ಆದರೆ, ಸಮಾಜದಲ್ಲಿ ತನ್ನನ್ನು ಕೀಳಾಗಿ ಕಾಣುತ್ತದೆ ಎಂಬ ಮನಸ್ಥಿತಿಯಿಂದಲೇ ಬಿಗ್‌ಬಾಸ್ ಮನೆಗೆ ಬಂದ ಶಕೀಲಾಗೆ ಇತರೆ ಸ್ಪರ್ಧಾಳುಗಳು ಮತ್ತು ಅಭಿಮಾನಿಗಳಿಂದ ತುಂಬಾ ಧನಾತ್ಮಕ ಪ್ರೀತಿ ಸಿಕ್ಕಿತ್ತು. ಇದರಿಂದ ಶಕೀಲಾ ತುಂಬಾ ಸಂತಸಗೊಂಡು ಚಿತ್ರರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದರು. ಇನ್ನು ಶಕೀಲಾಗೆ ಸಿನಿಮಾ ರಂಗಕ್ಕೆ ಕಾಲಿಟ್ಟು ಮೂವತ್ತು ವರ್ಷಗಳಲ್ಲಿ ಸಿಗದ ಪ್ರೀತಿ, ಪ್ರೇಮ, ಅನುರಾಗ, ಅನುಕಂಪ, ಬಾಂಧವ್ಯ, ಅಭಿಮಾನಿಗಳ ಪ್ರೀತಿ ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದರು. ಆದರೆ, ಬಿಗ್‌ಬಾಸ್ ಮನೆಯಿಂದ ಕೇವಲ 3ನೇ ವಾರಕ್ಕೆ ಮನೆಯಿಂದ ಹೊರಬಂದ ಶಕೀಲಾ  ನನ್ನ ಬಗ್ಗೆ ಹೀಗೇ ಇರಲಿ ನಿಮ್ಮ ಅಭಿಮಾನ ಎಂದು ವೀಕ್ಷಕರನ್ನು ಕೇಳಿಕೊಂಡರು.

 
 
 
 
 
 
 
 
 
 
 
 
 
 
 

A post shared by avaniyana (@avaniyana)

Latest Videos
Follow Us:
Download App:
  • android
  • ios