ಶಾರುಖ್ ಖಾನ್ನಿಂದ ಸಲ್ಮಾನ್ ಖಾನ್ ವರೆಗೆ XYZಭದ್ರತೆ ಪಡೆದ 7 ಸೆಲೆಬ್ರಿಟಿಗಳು!
ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಅವರಿಗೆ ಪಠಾಣ್, ಜವಾನ್ ಯಶಸ್ಸಿನ ಬೆನ್ನಲ್ಲೇ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದ್ದು, ಅವರ ದೂರಿನ ಮೇಲೆ ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಈ ರೀತಿ ಸಿನಿಮಾ ನಟರಿಗೆ ಭದ್ರತೆ ನೀಡುತ್ತಿರವುದು ಇದೇ ಮೊದಲಲ್ಲ. ವಿವೇಕ್ ಅಗ್ನಿಹೋತ್ರಿಯಿಂದ ಕಂಗನಾ ರಣಾವತ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅನುಪಮ್ ಖೇರ್ ಮುಂತಾದ ನಟರು ಈ ಪಟ್ಟಿಯಲ್ಲಿ ಇದ್ದಾರೆ ಸರ್ಕಾರವು ಭದ್ರತೆಯನ್ನು ನೀಡಿರುವ ಬಾಲಿವುಡ್ ಸೆಲೆಬ್ರೆಟಿಗಳು ಇವರುಗಳು.
ಅಮಿತಾಬ್ ಬಚ್ಚನ್ Y ಯಿಂದ X ಭದ್ರತೆ:
ಮಿತಾಬ್ ಬಚ್ಚನ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದ ನಂತರ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಅವರ ಭದ್ರತೆಯನ್ನು ವೈಯಿಂದ ಎಕ್ಸ್ ಕ್ಯಾಟಗರಿಗೆ ವರ್ಗಾಯಿಸಲಾಯಿತು.
ಕಂಗನಾ ರಣಾವತ್ Y+ ಭದ್ರತೆ:
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದಾಗ ಕಂಗನಾ ರಣಾವತ್ ಅವರಿಗೆ ಬೆದರಿಕೆಗಳು ಬಂದವು. ಅವರ ಹೇಳಿಕೆಯು ಶಿವಸೇನಾ ನಾಯಕರನ್ನು ಕೆರಳಿಸಿತು, ಆ ಸಮಯದಲ್ಲಿ ನಟಿಗೆ ವೈ ಪ್ಲಸ್ ಭದ್ರತೆಯನ್ನು ನೀಡಲಾಯಿತು.
ವಿವೇಕ್ ರಂಜನ್ ಅಗ್ನಿಹೋತ್ರಿ Y ಭದ್ರತೆ:
ಕಾಶ್ಮೀರ ಫೈಲ್ಸ್ ನಂತರ ವಿವೇಕ್ ರಂಜನ್ ಅಗ್ನಿಹೋತ್ರಿ ಅವರಿಗೆ ಅನೇಕ ಕೊಲೆ ಬೆದರಿಕೆಗಳು ಬಂದವು ಮತ್ತು ಬೆದರಿಕೆಯಿಂದಾಗಿ ಅವರಿಗೆ Y ವರ್ಗದ ಭದ್ರತೆಯನ್ನು ನೀಡಲಾಯಿತು.
ಅನುಪಮ್ ಖೇರ್ X ಸೆಕ್ಯುರಿಟಿ:
ಕಾಶ್ಮೀರ್ ಫೈಲ್ಸ್ ಚಲನಚಿತ್ರ ಬಿಡುಗಡೆ ನಂತರ ಬಂದ ಬೆದರಿಕೆಗಳ ಹಿನ್ನೆಲೆಯಲ್ಲಿ ನಟ ಅನುಪಮ್ ಖೇರ್ ಅವರಿಗೆ X ವರ್ಗದ ಭದ್ರತೆ ನೀಡಲಾಗಿದೆ.
ಅಕ್ಷಯ್ ಕುಮಾರ್ X ಸೆಕ್ಯುರಿಟಿ:
ಈ ಪಟ್ಟಿಯಲ್ಲಿರುವ ಇನ್ನೊಬ್ಬ ಬಾಲಿವುಡ್ ನಟ ಅಕ್ಷಯ್ಕುಮಾರ್ ಅವರು. ಮಹಾರಾಷ್ಟ ಸರ್ಕಾರ ನಟ ಅಕ್ಷಯ್ ಕುಮಾರ್ X+ ಭದ್ರತೆ ನೀಡಿದೆ.
ಶಾರುಖ್ ಖಾನ್ Y+ ಭದ್ರತೆ:
ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸರ್ಕಾರವು ನಟನ ಭದ್ರತೆಯನ್ನು Y + ವರ್ಗಕ್ಕೆ ಬದಲಾಯಿಸಿದೆ.
ಸಲ್ಮಾನ್ ಖಾನ್ Y+ ಭದ್ರತೆ:
ಸಲ್ಮಾನ್ ಖಾನ್ ಅವರು ಈ ಹಿಂದೆ X ಭದ್ರತೆಯನ್ನು ಹೊಂದಿದ್ದರು. ಇತ್ತೀಚೆಗಷ್ಟೇ ಬಿಷೋನಿ ಗ್ಯಾಂಗ್ನಿಂದ ನಟನಿಗೆ ಹಲವಾರು ಕೊಲೆ ಬೆದರಿಕೆಗಳು ಬಂದಿದ್ದವು. ಅದರ ನಂತರ ಮುಂಬೈ ಪೋಲೀಸರು ಅದನ್ನು Y+ ಗೆ ಅಪ್ಗ್ರೇಡ್ ಮಾಡಬೇಕೆಂದು ನಿರ್ಧರಿಸಿದರು.