ಮಂದಿರ-ಮಸೀದಿ ಭೇಟಿಯಲ್ಲಿ ವೆಕೇಷನ್ ಕಳೆಯುತ್ತಿದ್ದಾರೆ ಸೈಫ್ ಮಗಳು ಸಾರಾ
- ದೇವಾಲಯ, ಮಸೀದಿಗಳಲ್ಲಿ ಸಾರಾ ಅಲಿ ಖಾನ್
- ವೆಕೇಷನ್ ಸಂದರ್ಭ ಧಾರ್ಮಿಕ ಕೇಂದ್ರಗಳಲ್ಲಿ ಸೈಫ್ ಮಗಳು
ಬಾಲಿವುಡ್ ಟಾಪ್ ನಟಿ ಸಾರಾ ಅಲಿ ಖಾನ್ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚೆಚ್ಚು ಹೋಗೋದ್ಯಾರು ಎಂದು ಕೇಳಿದರೆ ಕಣ್ಮುಂದೆ ಬರೋದು ಸಾರಾ ಅಲಿ ಖಾನ್ ಮುಖ. ಟೈಂ ಸಿಕ್ಕಾಗೆಲ್ಲ ಸಾರಾ ಧಾರ್ಮಿಕ ಕೇಂದ್ರಗಳಿಗೆ ಹೋಗುತ್ತಾರೆ
ಸಾರಾ ಅಲಿ ಖಾನ್ ಕಳೆದ ಸ್ವಲ್ಪ ಸಮಯದಿಂದ ವೆಕೇಷನ್ ಮೂಡ್‌ನಲ್ಲಿದ್ದಾರೆ. ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿದ ನಂತರ ನಟಿ ಕಾಶ್ಮೀರದಲ್ಲಿ ಸ್ವಲ್ಪ ಪ್ರಶಾಂತವಾದ ಸಮಯವನ್ನು ಕಳೆಯುತ್ತಿದ್ದಾರೆ.
ಸೆ.22ರಂದು ನಟಿ ಹಲವು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ ವಿಡಿಯೋ, ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಮಸೀದಿ, ಮಂದಿರಗಳಿಗೆ ಭೇಟಿ ನೀಡಿದ ನಟಿ ಸರ್ವ ಧರ್ಮ ಸಂಭವ ಎನ್ನುವ ಚಂದದ ಮೆಸೇಜ್ ಕೊಟ್ಟಿದ್ದಾರೆ.
ನಟಿಯ ಫೋಟೋಗಳು ಈಗ ವೈರಲ್ ಆಗಿದ್ದು, ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಸಾರಾ ಅಲಿ ಖಾನ್ ಕಾಮಾಕ್ಯ ದೇವಾಲಯಕ್ಕೆ ಭೇಟಿ ಕೊಟ್ಟಾಗ ತೆಗೆಸಿಕೊಂಡ ಫೋಟೋ. ಬಿಳಿ ಬಣ್ಣದ ಸಿಂಪಲ್ ಕುರ್ತಾದಲ್ಲಿ ಕಾಣಿಸಿಕೊಂಡ ನಟಿ
ಸಾರಾ ಅಲಿ ಖಾನ್ ಮಾಲ್ಡೀವ್ಸ್‌ನಲ್ಲಿ ಸೂರ್ಯ, ಸಮುದ್ರ ಮತ್ತು ಮರಳನ್ನು ನೋಡಿ ಎಂಜಾಯ್ ಮಾಡಿದ್ದರು. ಈಗ ನಟಿ ಕಾಶ್ಮೀರ ರಜೆಯಲ್ಲಿ ಸ್ವಲ್ಪ ಶಾಂತಿಯನ್ನು ಬಯಸುತ್ತಿದ್ದಾರೆ. ನಟಿ ವಿವಿಧ ಆರಾಧನಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಫೋಟೋಗಳು ಮತ್ತು ವೀಡಿಯೊಗಳನ್ನು Instagramನಲ್ಲಿ ತಮ್ಮ ಅಭಿಮಾನಿಗಳು ಮತ್ತು ಫಾಲೋವರ್ಸ್ ಜೊತೆಗೆ ಹಂಚಿಕೊಂಡಿದ್ದಾರೆ. ಭೂಮಿಯ ಮೇಲೆ ಸ್ವರ್ಗವಿದ್ದರೆ, ಅದು ಇದು, ಸರ್ವಧರ್ಮ ಸಂಭವ ಮೇರಾಭಾರತಮಹಾನ್ ಎಂದು ಸಾರಾ ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ
ಸಾರಾ ಅಲಿ ಖಾನ್ ತನ್ನ ಕಾಶ್ಮೀರ ಪ್ರವಾಸದ ಅಪ್‌ಡೇಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶೇಷನಾಗ್ ಸರೋವರಕ್ಕೆ ಭೇಟಿ ನೀಡಿದ ನಂತರ, ಅವರು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಬಿಸಿಲು ಕಿರಣಗಳು ಮತ್ತು ನಕ್ಷತ್ರ ರಾತ್ರಿಗಳು ಬೆಳದಿಂಗಳಿಗಾಗಿ ಕ್ಯಾಂಪ್ ಫೈರ್ ಎಂದು ನಟಿ ಪೋಸ್ಟ್‌ಗೆ ಕ್ಯಾಪ್ಶನ್ ಬರೆದಿದ್ದಾರೆ. ಮಸೀದಿ ಹಿನ್ನೆಲೆ ಇರುವ ಸ್ಥಳದಲ್ಲಿ ಪ್ರಾರ್ಥಿಸುತ್ತಿರುವ ಸೈಫ್ ಅಲಿ ಖಾನ್ ಮಗಳು
ಕೆಲಸದ ವಿಚಾರವಾಗಿ ಸಾರಾ ಅಲಿ ಖಾನ್ ಅಟ್ರಂಗಿ ರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವನ್ನು ಆನಂದ್ ಎಲ್ ರೈ ನಿರ್ದೇಶಿಸಿದ್ದಾರೆ. ಸಾರಾ ಮುಂಬರುವ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.