ಶೂಟಿಂಗ್‌ನಲ್ಲಿ ಅಕ್ಷಯ್ ಕುಮಾರನನ್ನು ಫಾಲೋ ಮಾಡ್ತಿದ್ದ ಸೈಫ್ ಅಲಿ ಖಾನ್ ಮಗಳು

First Published Mar 29, 2021, 4:24 PM IST

ಬಾಲಿವುಡ್‌ ನಟಿ  ಸಾರಾ ಅಲಿ ಖಾನ್ ಇತ್ತೀಚೆಗೆ ತಮ್ಮ 'ಅತ್ರಂಗಿ ರೇ'  ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ತಮಿಳು ನಟ ಧನುಷ್  ಜೊತೆ ಸಾರಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್‌ ನಂತರ  ಈ ಚಿತ್ರದ ತಂಡಕ್ಕೆ ನಟಿ  ಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಸಾರಾ ಚಿತ್ರಕರಣದ ವೇಳೆಯಲ್ಲಿ ಅಕ್ಷಯ್‌ ಕುಮಾರ್‌ ಅವರನ್ನು ಸ್ಟಾಕ್‌ ಮಾಡಿದ್ದಾಗಿ ಬಹಿರಂಗ ಪಡಿಸಿದ್ದಾರೆ.