ತನ್ನ ಎಕ್ಸ್‌ ಪ್ರಿಯಕರನ ವರ್ತನೆ ಬಗ್ಗೆ ರಿವೀಲ್‌ ಮಾಡಿದ ಸಂಜಯ್ ದತ್ ಪುತ್ರಿ!

First Published Feb 6, 2021, 12:27 PM IST

ಸಂಜಯ್ ದತ್ ಪುತ್ರಿ ತ್ರಿಶಲಾ ದತ್ ವೈಯಕ್ತಿಕ ಜೀವನ ಆಗಾಗ್ಗೆ ಚರ್ಚೆಯಲ್ಲಿರುತ್ತದೆ. ಇಟಾಲಿಯನ್ ಮೂಲದ ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್‌ ನಂತರ ತ್ರಿಶಲಾ ತನ್ನ ಸಂಬಂಧದ ಬಗ್ಗೆ ಅನೇಕ ಬಾರಿ ನೋವು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತ್ರಿಶಲಾ ಪ್ರಶ್ನೋತ್ತರ ಸೆಶನ್‌ ನಡೆಸಿದರು. ಇದರಲ್ಲಿ ಅವರು ತನ್ನ ಮಾಜಿ ಗೆಳೆಯನ ವರ್ತನೆ ಬಗ್ಗೆ ಮೌನ ಮುರಿದಿದ್ದಾರೆ. ಈ ಕುರಿತು ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.