ಅಮೇಜಾನ್ ಪ್ರೈಮ್ನಲ್ಲಿ ಡಿ.9 ಸಮಂತಾ ಯಶೋದ ರಿಲೀಸ್!
ತೆಲುಗ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಯಶೋದ ಸಿನಿಮಾ ಬಿಡುಗಡೆ. ಓಟಿಟಿ ಎಂಟ್ರಿ ಯಾಕೆ?
ತೆಲುಗು ಚಿತ್ರರಂಗ ಬ್ಯೂಟಿ ಸಮಂತಾ ರುತ್ ಪ್ರಭು ಅಭಿನಯಿಸಿರುವ ಯಶೋದ ಸಿನಿಮಾ ಡಿಸೆಂಬರ್ 9ರಂದು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದೆ.
ಹರೀಶ್ ನಾರಾಯಣ್ ಮತ್ತು ಹರಿ ಶಂಕರ್ ಸಹ ನಿರ್ದೇಶನ ಮತ್ತು ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಸಿನಿಮಾ ಇದಾಗಿದ್ದು ಸಮಂತಾ, ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್ಕುಮಾರ್, ಸಂಪತ್ ರಾಜ್ ಮತ್ತು ಮುರಳಿ ಶರ್ಮಾ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.
240ಕ್ಕೂ ದೇಶಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಇದಾಗಿದ್ದು ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
ಯಶೋದ ಸಿನಿಮಾದ ವಿಶೇಷ ಡಿಜಿಟಲ್ ಪ್ರೀಮಿಯರ್ ಅನ್ನು ಹೈದರಾಬಾದ್ನಲ್ಲಿ ಡಿಸೆಂಬರ್ 6ರಂದು ಬಿಡುಗಡೆ ಮಾಡಲಾಗುತ್ತಿದೆ. ಯಶೋದ ಪಾತ್ರದಲ್ಲಿ ಸಮಂತಾ ಮಿಂಚಲಿದ್ದಾರೆ.
' ಯಶೋದ ಹೆಣ್ಣಿನ ಶಕ್ತಿ ಮತ್ತು ಶಕ್ತಿಯ ಕಥೆ. ಚಿತ್ರವು ಇಲ್ಲಿಯವರೆಗೆ ನೋಡಿದ ಪ್ರೀತಿಯಿಂದ ನಾವು ವಿನಮ್ರರಾಗಿದ್ದೇವೆ, ದೇಶದಾದ್ಯಂತ ಪ್ರೇಕ್ಷಕರು ಚಿತ್ರದ ಅದ್ಭುತ ಕಥೆ ಮತ್ತು ಸಮತಾದ ಶಕ್ತಿಶಾಲಿ ಅಭಿನಯವನ್ನು ಮೆಚ್ಚಿದ್ದಾರೆ.' ಎಂದು ನಿರ್ಮಾಪಕ ಶಿವಲೆಂಕ ಕೃಷ್ಣ ಪ್ರಸಾದ್ ಹೇಳಿದ್ದಾರೆ.
ವಿಶೇಷ ಎಂದರೆ ಸಮಂತಾ ಈ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಸಮಂತಾಗೆ ಗರ್ಭಿಣಿ ಎಂದು ಹೇಳುವ ಮೂಲಕ ಪ್ರಾರಂಭವಾಗುವ ಟೀಸರ್ ಭಾರಿ ಕುತೂಹಲ ಸೃಷ್ಟಿಮಾಡಿದೆ. ಹೀಗಾಗಿ ನಿರೀಕ್ಷೆ ಹೆಚ್ಚಿಸಿದೆ.