ಸಮಂತಾರಂತೆ Ex ಫೋಟೋಸ್ ಡಿಲಿಟ್ ಮಾಡಿದ ಸೆಲೆಬ್ರಿಟಿಗಳು!
ಕಳೆದ ವಾರ, ಸಮಂತಾ ರುತ್ ಪ್ರಭು (Samantha Ruth Prabhu) ಅವರು ತಮ್ಮ ಮಾಜಿ ಪತಿ (Ex Husband) ನಾಗ ಚೈತನ್ಯ (Naga Chaitanya) ಜೊತೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಿಂದ ಡಿಲಿಟ್ (Delete) ಮಾಡಿದ್ದಾರೆ. ಆದರೆ ಸಮಂತಾ ಈ ರೀತಿ ಮಾಡಿದ ಮೊದಲ ಸೆಲೆಬ್ರೆಟಿ ಅಲ್ಲ. ಇದೇ ರೀತಿ ಅನೇಕ ಇತರ ಪ್ರಸಿದ್ಧ ವ್ಯಕ್ತಿಗಳು ತಮ್ಮ ಬ್ರೇಕಪ್ ನಂತರ ಸೋಶಿಯಲ್ ಮೀಡಿಯಾದಿಂದ ಪೋಟೋಗಳನ್ನು ಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅವರು ಯಾರಾರು ನೋಡಿ ಇಲ್ಲಿದೆ.

ಟಾಲಿವುಡ್ ಚೆಲುವೆ ಸಮಂತಾ ರುತ್ ಪ್ರಭು ಅವರು ಡಿವೋರ್ಸ್ ನಂತರ ತಮ್ಮ ಸಾಮಾಜಿಕ ಮಾಧ್ಯಮ ಪುಟದಿಂದ 80 ಕ್ಕೂ ಹೆಚ್ಚು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ರೀತಿ ಬ್ರೇಕಪ್ ನಂತರ EXನ ಫೋಟೋ ಡಿಲಿಟ್ ಮಾಡಿರುವುದು ಸಮಂತಾ ಒಬ್ಬರೇ ಅಲ್ಲ. ಅನೇಕ ಇತರ ಸೆಲೆಬ್ರೆಟಿಗಳು ಈ ಲಿಸ್ಟ್‌ನಲ್ಲಿದ್ದಾರೆ.
ಪ್ರಸ್ತುತ ಸಮಂತಾ ದುಬೈನಲ್ಲಿ ತನ್ನ ಹಾಲಿಡೇ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ನಾಗಚೈತನ್ಯ ಅವರೊಂದಿಗಿನ ಅದ್ಭುತ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ.
ಇಲಿಯಾನಾ ಡಿಕ್ರೂಜ್ ( Ileana D'Cruz ) ತನ್ನ ಛಾಯಾಗ್ರಾಹಕ ಗೆಳೆಯ ಆಂಡ್ರ್ಯೂ ನೀಬೋನ್‌ನೊಂದಿಗೆ ( Andrew Kneebone) ಬೇರ್ಪಟ್ಟಾಗ, ಅವರು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಫಾಲೋ ಮಾಡುವುದನ್ನು ನಿಲ್ಲಿಸಿದರು. ಅಷ್ಟೇ ಅಲ್ಲ ಆಂಡ್ರ್ಯೂ ಕ್ಲಿಕ್ಕಿಸಿದ ತನ್ನ ಎಲ್ಲಾ ಅದ್ಭುತ ಫೋಟೋಗಳನ್ನೂ ಇಲಿಯಾನಾ ಡಿಲೀಟ್ ಮಾಡಿದರು.
ಟಿವಿ ನಟಿ ಜೆನ್ನಿಫರ್ ವಿಂಗೆಟ್ (Jennifer Winget ) ಅವರು ತಮ್ಮ ಮಾಜಿ ಪತಿ ಕರಣ್ ಸಿಂಗ್ ಗ್ರೋವರ್ ( Karan Singh Grover) ಜೊತೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕಿದ್ದಾರೆ. ಕರಣ್ ಈಗ ಬಿಪಾಶಾ ಬಸು ಅವರನ್ನು ಮದುವೆಯಾಗಿದ್ದಾರೆ. ಜೆನ್ನಿಫರ್ ಮತ್ತು ಕರಣ್ 2014 ರಲ್ಲಿ ಬೇರೆಯಾದರು.
ಟೇಲರ್ ಸ್ವಿಫ್ಟ್ (Taylor Swift) ತನ್ನ ಎಕ್ಸ್ ಕ್ಯಾಲ್ವಿನ್ ಹ್ಯಾರಿಸ್ (Calvin Harris) ಅವರೊಂದಿಗಿನ ಚಿತ್ರಗಳನ್ನು Instagram ನಿಂದ ಅಳಿಸಿದ್ದಾರೆ. ಹ್ಯಾರಿಸ್ ಕೂಡ ಅದೇ ರೀತಿ ಮಾಡಿದರು ಮತ್ತು ಅವರ ಬ್ರೇಕಪ್ ಉದ್ದೇಶಿಸಿ ತಮ್ಮ ಟ್ವೀಟ್ ಅನ್ನು ಸಹ ಡಿಲೀಟ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾರ ಪತಿ ನಿಕ್ ಜೋನಾಸ್ (Nick Jonas) ಅವರು ತಮ್ಮ ಎಕ್ಸ್ ಗರ್ಲ್‌ಫ್ರೆಂಡ್ ಮಿಸ್ ಯೂನಿವರ್ಸ್ ಒಲಿವಿಯಾ ಕಲ್ಪೋ (Olivia Culpo) ಅವರ ಫೋಟೋಗಳನ್ನು ತಮ್ಮ Instagram ಫೀಡ್‌ನಿಂದ ಅಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದಿ ವಿಕೆಂಡ್ (The Weekend ) Instagram ನಿಂದ ಅವರ ಎಕ್ಸ್ ಸೆಲೆನಾ ಗೊಮೆಜ್ ಅವರ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಈ ಜೋಡಿ ಸುಮಾರು 10 ತಿಂಗಳ ಕಾಲ ಡೇಟಿಂಗ್ ಮಾಡಿತ್ತು. ಅವರು ಸುಮಾರು ಹತ್ತು ತಿಂಗಳ ಕಾಲ ಡೇಟಿಂಗ್ ಮಾಡಿದರು ಮತ್ತು 2017 ರಲ್ಲಿ ಬೇರ್ಪಟ್ಟರು.ಈ ಕಪಲ್ PDA ಮತ್ತು ರೋಮ್ಯಾಂಟಿಕ್ Instagram ಸ್ಟೋರಿಗೆ ಹೆಸರುವಾಸಿಯಾಗಿದ್ದರು.