Samantha goes skiing: ಇವರಿಬ್ಬರಿಂದಲೇ ಬದುಕಿದ್ದೇನೆ ಎಂದ ನಟಿ
- Samantha Ruth Prabhu in Switzerland: ಸ್ಕೀಯಿಂಗ್ ಫನ್‌ನಲ್ಲಿ ಸೌತ್ ನಟಿ
- ಮತ್ತೊಂದು ವೆಕೇಷನ್ ಎಂಜಾಯ್ ಮಾಡುತ್ತಿರುವ ಸಮಂತಾ
ಪ್ರಸ್ತುತ ಸ್ವಿಟ್ಜರ್ಲೆಂಡ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ಸಮಂತಾ ರುತ್ ಪ್ರಭು ಶನಿವಾರ ತನ್ನ Instagram ಸ್ಟೋರಿಯಲ್ಲಿ ತಮ್ಮ ಸ್ಕೀಯಿಂಗ್ ಅನುಭವದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಸ್ನೇಹಿತರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
=
ಫೊಟೋದಲ್ಲಿ, 'ದಿ ಫ್ಯಾಮಿಲಿ ಮ್ಯಾನ್' ನಟಿ ಕಪ್ಪು ಮತ್ತು ಬಿಳಿ ಸ್ವೆಟರ್ ಮೇಲೆ ಕಪ್ಪು ಪಫರ್ ಜಾಕೆಟ್ ಅನ್ನು ಧರಿಸಿದ್ದರು. ಹೆಡ್ಬ್ಯಾಂಡ್ ಅನ್ನು ಸೇರಿಸಿದ್ದಾರೆ. ನಟಿ ತನ್ನ ಸ್ಕೀಯಿ ಕೋಚ್ ಜೊತೆ ರೆಸ್ಟೋರೆಂಟ್‌ನಲ್ಲಿ ಪೋಸ್ ನೀಡಿದ್ದಾರೆ.
ಪೋಸ್ಟ್ ಅನ್ನು ಹಂಚಿಕೊಂಡ ಸಮಂತಾ ತನ್ನ ಕೋಚ್‌ಗೆ ಧನ್ಯವಾದಗಳನ್ನು ಅರ್ಪಿಸಿದರು. ಅವರಿಂದಲೇ ತಾನು ಜೀವಂತವಾಗಿದ್ದೇನೆ ಎಂದು ಅಭಿಮಾನಿಗಳಿಗೆ ಬಹಿರಂಗಪಡಿಸಿದ್ದಾರೆ.
ಚಿತ್ರವನ್ನು ಹಂಚಿಕೊಂಡಿರುವ ಸಮಂತಾ, ಈ ಇಬ್ಬರಿಂದಾಗಿ ನಾನು ಇನ್ನೂ ಜೀವಂತವಾಗಿದ್ದಾರೆ ಎಂದು ಬ್ಲಶಿಂಗ್ ಮತ್ತು ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಕೋಚ್ ಕೇಟ್ ಮೆಕ್‌ಬ್ರೈಡ್ ಮತ್ತು ಆಂಥೋನಿಯನ್ನು ಟ್ಯಾಗ್ ಮಾಡಿದ್ದಾರೆ.
ತನ್ನ ಅನುಭವದಿಂದ ಅತೀವ ಸಂತೋಷಗೊಂಡಿದ್ದ ಸಮಂತಾ, 'ಸ್ಕೀಯಿಂಗ್ ಈಸ್ ಬಿಲೀವಿಂಗ್' ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದಳು. ಇದಲ್ಲದೆ, ಸಮಂತಾ ಅವರು ಹಿಮ ಕ್ರೀಡೆಯನ್ನು ಪ್ರದರ್ಶಿಸುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ಈ ಹಿಂದೆ, ಇದೇ ರೀತಿಯ ಪೋಸ್ಟ್‌ನಲ್ಲಿ, ಸಮಂತಾ ಸ್ವಿಟ್ಜರ್ಲೆಂಡ್‌ನ ಹಿಮಭರಿತ ಪರ್ವತಗಳಿಂದ ತಮ್ಮ ಫೊಟೋ ಹಂಚಿಕೊಂಡಿದ್ದರು. ನಟಿ ಹಳದಿ ಪಫರ್ ಜಾಕೆಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು.