ಎಷ್ಟೇ ಕಷ್ಟ ಬಂದರೂ ಸಿನಿಮಾ ಪ್ರೀತಿ ಕಳೆದುಕೊಂಡಿಲ್ಲ; ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಕಣ್ಣೀರಿಟ್ಟ ಸಮಂತಾ
ಎಷ್ಟೇ ಕಷ್ಟ ಬಂದರೂ ಸಿನಿಮಾ ಪ್ರೀತಿ ಕಳೆದುಕೊಂಡಿಲ್ಲ ಎಂದು ನಟಿ ಸಮಂತಾ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಕಣ್ಣೀರಿಟ್ಟಿದ್ದಾರೆ.
ಸಮಂತಾ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಮ್ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕೇವಲ ಫಸ್ಟ್ ಲುಕ್ ಮೂಲಕವೇ ಭಾರಿ ಕುತೂಹಲ ಮೂಡಿಸಿದ್ದ ಶಾಕುಂತಲಂ ಸಿನಿಮಾ ಈಗಾಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ.
ಇಂದು ನಡೆದ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಸ್ಯಾಮ್ ಕೂಡ ಭಾಗಿಯಾಗಿದ್ದರು. ಅನಾರೋಗ್ಯದ ಬಳಿಕ ಸ್ಯಾಮ್ ಕಾಣಿಸಿಕೊಂಡ ಮೊದಲ ಪ್ರೆಸ್‌ಮೀಟ್ ಇದಾಗಿದೆ. ಸದ್ಯ ಚೇತರಿಸಿಕೊಂಡಿರುವ ಸಮಂತಾ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೇಲರ್ ಅಭಿಮಾನಿಗಳ ಹೃದಯ ಗೆದ್ದಿದೆ. ಸಮಂತಾ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಸಮಂತಾ ಕಣ್ಣೀರಿಟ್ಟಿದ್ದಾರೆ. ಕಷ್ಟದಲ್ಲೂ ಒಂದೊಳ್ಳೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ಸಮಂತಾ ದುಃಖದ ಜೊತೆ ಸಂತೋಷದ ಕಣ್ಣೀರು ಹಾಕಿದ್ದಾರೆ. ನಿರ್ದೇಶಕ ಗುಣಶೇಖರ್ ಸಮಂತಾ ಅವರ ಬಗ್ಗೆ ಮಾತನಾಡುವಾಗ ಸಮಂತಾ ಕಣ್ಣೀರು ಹಾಕಿದರು. ನಿರ್ದೇಶಕ ಗುಣ ಶೇಖರ್ ಅವರು ಸಮಂತಾ ಅವರನ್ನು ಈ ಸಿನಿಮಾದ ರಿಯಲ್ ಹೀರೋ ಎಂದು ಹೇಳಿದರು.
ಶಾಕುಂತಲಂ ಸಿನಿಮಾಗಾಗಿ ಅನೇಕ ನಾಯಕಿಯರನ್ನು ಪ್ರಯತ್ನ ಪಟ್ಟೆವು. ಕೊನೆಗೆ ನಿರ್ಮಾಪಕಿ ನೀಲಿಮಾ ಅವರೇ ಸಮಂತಾ ಅವರ ಹೆಸರು ಹೇಳಿದರು. ಆಗ ವೇದಿಕೆ ಮೇಲೆ ಕುಳಿತಿದ್ದಸಮಂತಾ ಅಳಲು ಪ್ರಾರಂಭಿಸಿದರು.
ಸಮಂತಾ ಮಾತನಾಡಿ, ಈ ಕ್ಷಣಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದ. ನಿರೀಕ್ಷೆಯಂತೆ ಚಿತ್ರ ಬಿಡುಗಡೆಯಾಗಲಿ ಎಂಬುದು ಎಲ್ಲರ ಆಶಯ. ಆದರೆ ಕೆಲವೊಮ್ಮೆ ಕೆಲವು ಮ್ಯಾಜಿಕ್ ನಡೆಯುತ್ತದೆ. ಶಾಕುಂತಲಂ ವಿಷಯದಲ್ಲೂ ಅದೇ ಆಯಿತು. ಎಷ್ಟೇ ಕಷ್ಟಗಳು ಬಂದರೂ ಸಿನಿಮಾ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಸಿನಿಮಾ ನನ್ನನ್ನು ಪ್ರೀತಿಸುತ್ತಿದೆ ಎಂದು ಸಮಂತಾ ಹೇಳಿದರು.
ಅಂದಹಾಗೆ ಬಹನಿರೀಕ್ಷೆಯ ಶಾಕುಂತಲಂ ಸಿನಿಮಾ ಫೆಬ್ರವರಿ 17ರಂದು ತೆರೆಗೆ ಬರುತ್ತಿದೆ. ಈ ಬಗ್ಗೆ ಸಿನಿಮಾತಂಡ ಹೊಸ ವರ್ಷಕ್ಕೆ ಅನೌನ್ಸ್ ಮಾಡುವ ಮೂಲಕ ಸಂತಸದ ಸುದ್ದಿ ನೀಡಿದ್ದರು. 'ಎಪಿಕ್ ಲವ್ ಸ್ಟೋರಿ ಶಾಕುಂತಲಂ ಅನ್ನು ಫೆಬ್ರವರಿ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ' ಎಂದು ಹೇಳಿದ್ದರೆು. ವಿಶೇಷ ಎಂದರೆ ಈ ಸಿನಿಮಾ 3 ಡಿಯಲ್ಲೂ ಬರ್ತಿದೆ.