ಸಮಂತಾ ಮತ್ತು ನಾಗ ಚೈತನ್ಯ ಲವ್ ಶುರವಾಗಿದ್ದು ವಿದೇಶದಲ್ಲಿ!
ದಕ್ಷಿಣದ ಕ್ಯೂಟ್ ಕಪಲ್ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿಚ್ಛೇದನದ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದುವರೆಗೆ ಇಬ್ಬರೂ ನಟರು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಮೌನವಾಗಿದ್ದಾರೆ. ಅವರ ವಿಚ್ಛೇದನದ ವದಂತಿಗಳ ಮಧ್ಯೆ, ಅವರ ಪ್ರೇಮ ಕಥೆ ಹೇಗೆ ಶುರುವಾಯಿತು ನೋಡೋಣ. ಅಂದ ಹಾಗೆ ಇವರಿಬ್ಬರ ಲವ್‌ಸ್ಟೋರಿ ಆರಂಭವಾದ ಸ್ಥಳ ಭಾರತ ಅಲ್ಲ. ಮತ್ತೆ ಯಾವುದು?
ಬಹಳ ದಿನಗಳಿಂದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ನಡುವಿನ ದಾಂಪತ್ಯದಲ್ಲಿ 'ಎಲ್ಲವೂ ಸರಿಯಿಲ್ಲ' ಎಂಬ ವರದಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಸಮಂತಾ ಅಕ್ಕಿನೇನಿ ತಮ್ಮ ಹೆಸರಿನಿಂದ 'ಅಕ್ಕಿನೇನಿ' ಸರ್‌ನೇಮ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಿಂದ ಕೈಬಿಟ್ಟ ನಂತರ ಈ ವದಂತಿಗಳು ಹುಟ್ಟಿ ಕೊಂಡಿವೆ.
ಇದರ ಜೊತೆಗೆ ಮಾವ ನಾಗಾರ್ಜುನ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ಸಮಂತಾ ಅಕ್ಕಿನೇನಿ ಅವರು ತಪ್ಪಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋದಲ್ಲಿ ಇಡೀ ಕುಟುಂಬದ ಜೊತೆ ಸಮಂತಾ ಮಾತ್ರ ಕಾಣೆಯಾಗಿದ್ದರು.
ಫಿಲ್ಮ್ ಕಂಪ್ಯಾನಿಯನ್ ಜೊತೆಗಿನ ಸಂದರ್ಶನದಲ್ಲಿ, ಸಮಂತಾ ವಿಚ್ಛೇದನ ಪ್ರಶ್ನೆಯ ಬಗ್ಗೆ ಮಾತಾನಾಡಲು ಬಯಸಲಿಲ್ಲ ಮತ್ತು ತನಗೆ ಅನಿಸದ ಹೊರತು ಯಾವುದೇ ವದಂತಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಬಹಿರಂಗಪಡಿಸಿದರು. ಆದರೆ ಸಮಂತಾ ಈ ವಂದತಿಯನ್ನು ನಿರಾಕರಿಸಲಿಲ್ಲ ಕೂಡ.
.
ಆದಾಗ್ಯೂ, ನಟಿ ತನ್ನ ವೃತ್ತಿ ಜೀವನದ ಕಳೆದ ಹತ್ತು ವರ್ಷಗಳ ನಂತರ ಯಾವುದೇ ವಿರಾಮ ತೆಗೆದುಕೊಳ್ಳದ ಕಾರಣ ವಿರಾಮ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು. ಮತ್ತೊಂದೆಡೆ, ಅವರು ನಾಗ ಚೈತನ್ಯ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ನೀಡಿದರು ಮತ್ತು ಅದನ್ನು 'ವಿನ್ನರ್' ಎಂದು ಕರೆದರು, ನಾಗಾ ಟ್ವಿಟ್ಟರ್‌ನಲ್ಲಿ ಅವರಿಗೆ ಧನ್ಯವಾದವನ್ನೂ ಅರ್ಪಿಸಿದರು.
ಆದರೆ ಅವರು ಬೇರೆಯಾಗುವ ಬಗ್ಗೆ ಯಾವುದೇ ಅಧಿಕೃತ ಮಾತುಗಳಿಲ್ಲ. ಇವರಿಬ್ಬರು 2017ರಲ್ಲಿ ವಿವಾಹವಾದರು ಮತ್ತು ಎರಡು ಸಂಪ್ರದಾಯಗಳೊಂದಿಗೆ ಅದ್ಧೂರಿಯಾಗಿ ವಿವಾಹವಾದರು. 2018 ರಲ್ಲಿ, ಸಮಂತಾ ಅಕ್ಕಿನೇನಿ ನಾಗನ ಜೊತೆ ಹಾಲಿಡೇಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಅವರ ಮತ್ತು ನಾಗರ ಫೇರಿ ಟೇಲ್ ಲವ್ ಸ್ಟೋರಿ ಶುರುವಾಗಿದ್ದು ಯಾವ ಸ್ಥಳದಿಂದ ಎಂಬುದನ್ನು ಎಲ್ಲಿಯೂ ಈ ಜೋಡಿ ಬಹಿರಂಗಪಡಿಸಿತ್ತು. ಆ ಸ್ಥಳವು ಸೆಂಟ್ರಲ್ ಪಾರ್ಕ್ ಆಗಿತ್ತು. 'ಸಾಮಾನ್ಯವಾಗಿ ಸೆಲ್ಫಿಗಳನ್ನು ದ್ವೇಷಿಸುತ್ತೇನೆ. ಆದರೆ ಇದನ್ನು ಮಾಡಬೇಕಿತ್ತು ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್. ಎಂಟು ವರ್ಷಗಳ ಹಿಂದೆ ಎಲ್ಲವೂ ಶುರುವಾಯಿತು. ಮ್ಯಾಜಿಕ್‌ಗೆ ಧನ್ಯವಾದಗಳು .. ಥ್ಯಾಂಕ್ಯೂ ಎಂದು ಹೇಳಲು ಇಲ್ಲಿಗೆ ಮತ್ತೆ ಮರಳಿ ಬರಬೇಕಾಗಿತ್ತು,' ಎಂದು ಸಮಂತಾ ಬರೆದು ಕೊಂಡಿದ್ದರು
ಈಗ ವಿಚ್ಛೇದನ ವದಂತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರ ನಡುವೆ, ಸಮಂತಾ ಒಂದು ಸುಂದರ ಕೆಂಪು ಸೀರೆ ಧರಿಸಿ ಮದುಮಗಳ ಲುಕ್‌ನಲ್ಲಿ ಶೂಟಿಂಗ್‌ಗಾಗಿ ರೆಡಿಯಾಗಿದ್ದಾರೆ. ಅದೇ ಸಮಯದಲ್ಲಿ, ನಾಗ ಚೈತನ್ಯ ಲವ್ ಸ್ಟೋರಿ 2021 ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.