- Home
- Entertainment
- Cine World
- ಬಿಡುಗಡೆಯಾಗಿದ್ದರೆ ಬ್ಲಾಕ್‌ಬಸ್ಟರ್ ಆಗುತ್ತಿತ್ತಾ?: ಸಲ್ಮಾನ್ ಖಾನ್ ಈ 11 ಸಿನಿಮಾಗಳನ್ನು ಕೈ ಬಿಟ್ಟಿದ್ಯಾಕೆ?
ಬಿಡುಗಡೆಯಾಗಿದ್ದರೆ ಬ್ಲಾಕ್‌ಬಸ್ಟರ್ ಆಗುತ್ತಿತ್ತಾ?: ಸಲ್ಮಾನ್ ಖಾನ್ ಈ 11 ಸಿನಿಮಾಗಳನ್ನು ಕೈ ಬಿಟ್ಟಿದ್ಯಾಕೆ?
ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಮುಂಬರುವ 'ಗಂಗಾ ರಾಮ್' ಸಿನಿಮಾವನ್ನು ಕೈಬಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಜೊತೆ ನಟಿಸಬೇಕಿತ್ತು. ಸಲ್ಮಾನ್ ಖಾನ್ರ ರಿಲೀಸ್ ಆಗದ 11 ಸಿನಿಮಾಗಳ ಬಗ್ಗೆ ತಿಳಿಯಿರಿ...

1. ಇನ್ಶಾಅಲ್ಲಾ (2018): ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ಸಲ್ಮಾನ್ ಖಾನ್ ಮತ್ತು ಆಲಿಯಾ ಭಟ್ ಜೊತೆ ಘೋಷಿಸಿದ್ದರು. ಆದರೆ ಸಲ್ಮಾನ್ ಬನ್ಸಾಲಿ ಜೊತೆ ಭಿನ್ನಾಭಿಪ್ರಾಯದಿಂದ ಚಿತ್ರ ಬಿಟ್ಟರು.
2. ಸಾಹೇಬ್ ಬೀವಿ ಔರ್ ಗುಲಾಮ್ (2007): ದೀಪಾ ಮೆಹ್ತಾ ಈ ಚಿತ್ರ ನಿರ್ದೇಶಿಸಬೇಕಿತ್ತು. ಸಲ್ಮಾನ್ ಜೊತೆ ಐಶ್ವರ್ಯಾ ನಟಿಸಬೇಕಿತ್ತು. ಆದರೆ ಚಿತ್ರ ನಿರ್ಮಾಣವಾಗಲೇ ಇಲ್ಲ.
3. ರಾಮಾಯಣ (2003): ಸಲ್ಮಾನ್ ಖಾನ್ ರಾಮನಾಗಿ, ಸೋಹೆಲ್ ಖಾನ್ ಲಕ್ಷ್ಮಣನಾಗಿ ನಟಿಸಬೇಕಿತ್ತು. ಆದರೆ ಚಿತ್ರ ನಿರ್ಮಾಣವಾಗಲೇ ಇಲ್ಲ.
4. ದಸ್ (1997): ಸಲ್ಮಾನ್ ಜೊತೆ ಸಂಜಯ್ ದತ್ ನಟಿಸಬೇಕಿತ್ತು. ನಿರ್ದೇಶಕ ಮುಕುಲ್ ಆನಂದ್ ಸಾವಿನಿಂದ ಚಿತ್ರ ನಿಂತಿತು. 'ಸುನೋ ಗೌರ್ ಸೆ' ಹಾಡು ರಿಲೀಸ್ ಆಗಿತ್ತು.
5. ಚೋರಿ ಮೇರಾ ಕಾಮ್ (1995): ಸಲ್ಮಾನ್ ಜೊತೆ ಸುನಿಲ್ ಶೆಟ್ಟಿ, ಕಾಜೋಲ್, ಶಿಲ್ಪಾ ಶೆಟ್ಟಿ ನಟಿಸಬೇಕಿತ್ತು. ಮೊದಲ ಶೆಡ್ಯೂಲ್ ಶೂಟಿಂಗ್ ಆದ್ಮೇಲೆ ಚಿತ್ರ ನಿಂತಿತು.
6. ಖಾಮೋಶಿ (1994): ರಾಕೇಶ್ ರೋಶನ್ ನಿರ್ದೇಶನದಲ್ಲಿ ಸಲ್ಮಾನ್ ಜೊತೆ ಐಶ್ವರ್ಯಾ ರೈ ನಟಿಸಬೇಕಿತ್ತು. ಆದರೆ ಚಿತ್ರ ಮುಂದುವರೆಯಲಿಲ್ಲ.
7. ಆಂಖ್ ಮಿಚೋಲಿ (1992): ಅನೀಸ್ ಬಜ್ಮಿ ನಿರ್ದೇಶನದಲ್ಲಿ ಸಲ್ಮಾನ್ ಡಬಲ್ ರೋಲ್ ಮಾಡಬೇಕಿತ್ತು. ಆದರೆ ಸಲ್ಮಾನ್ಗೆ ಪಾತ್ರದ ಬಗ್ಗೆ ಸಂದೇಹ ಬಂದು ಚಿತ್ರ ನಿಂತಿತು.
8. ಕಾನೂನ್ (1991): ಸಲ್ಮಾನ್ ಜೊತೆ ವಿನೋದ್ ಖನ್ನಾ, ನಗ್ಮಾ, ನೂತನ್, ನಟಿಸಬೇಕಿತ್ತು. ಮಹೇಶ್ ಭಟ್ ನಿರ್ದೇಶನ ಮಾಡಬೇಕಿತ್ತು. ಚಿತ್ರ ಘೋಷಣೆಯಾದ ನಂತರ ನಿಂತಿತು.
9. ರಣಕ್ಷೇತ್ರ (1990): 'ಮೈನೆ ಪ್ಯಾರ್ ಕಿಯಾ' ನಂತರ ಸಲ್ಮಾನ್ ಮತ್ತು ಭಾಗ್ಯಶ್ರೀ ಮತ್ತೆ ಒಟ್ಟಿಗೆ ನಟಿಸಬೇಕಿತ್ತು. ಆದರೆ ಭಾಗ್ಯಶ್ರೀ ಮದುವೆಯಾದ್ದರಿಂದ ಚಿತ್ರ ನಿಂತಿತು.
10. ಘೇರಾವ್ (1991): ರಾಜ್ಕುಮಾರ್ ಸಂತೋಷಿ ನಿರ್ದೇಶನದಲ್ಲಿ ಸಲ್ಮಾನ್ ಮತ್ತು ಮನೀಷಾ ಕೊಯಿರಾಲಾ ನಟಿಸಬೇಕಿತ್ತು. ಮುಹೂರ್ತ ಆದ್ಮೇಲೆ ಚಿತ್ರ ನಿಂತಿತು.
11. ಹ್ಯಾಂಡ್ಸಮ್: ಸಲ್ಮಾನ್ ಖಾನ್ ಸಂಗೀತಾ ಬಿಜ್ಲಾನಿ ಮತ್ತು ನಗ್ಮಾ ಜೊತೆ ನಟಿಸಬೇಕಿತ್ತು. ಘೋಷಣೆಯಾದ ನಂತರ ಚಿತ್ರ ಮುಂದುವರೆಯಲಿಲ್ಲ.