Salman ,ShahRukh - Kangana: ಎಲ್ಲರಿಗೂ ಒಂದಲ್ಲೊಂದು ಕಾರಣಕ್ಕೆ ಬಂದಿದೆ ಕೊಲೆ ಬೆದರಿಕೆ
ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ (Salman Khan) ಭಾನುವಾರ ಜೀವ ಬೆದರಿಕೆ ಬಂದಿತ್ತು. ಇದರ ಹೊರತಾಗಿಯೂ ಸೋಮವಾರ ಅವರು ತಮ್ಮ ಚಿತ್ರದ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ತೆರಳಿದ್ದಾರೆ. ಸೋಮವಾರ ಸಂಜೆ ಅವರು ಬಿಗಿ ಭದ್ರತೆಯ ನಡುವೆ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯಲ್ಲದೆ, ಶಸ್ತ್ರಸಜ್ಜಿತ ಪೊಲೀಸ್ ಭದ್ರತಾ ಸಿಬ್ಬಂದಿ ಕೂಡ ಅವರ ಸುತ್ತಲೂ ಇದ್ದರು. ಆದರೆ ಈ ರೀತಿ ಜೀವ ಬೆದರಿಕೆ ಎದುರಿಸಿತ್ತಿರುವ ನಟರಲ್ಲಿ ಸಲ್ಮಾನ್ ಖಾನ್ ಮೊದಲನೇ ಅವರಲ್ಲ. ಇದಕ್ಕೂ ಮೊದಲು ಬಾಲಿವುಡ್ ನ ಹಲವು ಸೆಲಬ್ರೆಟಿಗಳು ಈ ರೀತಿ ಬೆದರಿಕೆಗೆ ಗುರಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಯಾರಾರಿದ್ದಾರೆ ನೋಡೋಣ? ಈ ಹಿಂದೆ ಕೊಲೆ ಬೆದರಿಕೆಗೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.
ಮುಂಬೈನ ಬಾಂದ್ರಾ ಪೊಲೀಸರು ನಟ ಸಲ್ಮಾನ್ ಖಾನ್ ಮತ್ತು ಅವರ ಚಿತ್ರ ಕಥೆಗಾರ-ತಂದೆ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದಕ್ಕಾಗಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿ-ಟೌನ್‌ನ ಸೆಲೆಬ್ರಿಟಿಗೆ ಜೀವ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಹಿಂದಿ ಚಿತ್ರರಂಗದ ಹಲವಾರು ತಾರೆಯರು ಈ ಹಿಂದೆ ಬೆದರಿಕೆ ಎದುರಿಸಿದ್ದಾರೆ. ಈ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟರಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಕೂಡ ಸೇರಿದ್ದಾರೆ.
ಸಲ್ಮಾನ್ ಖಾನ್:
ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಸಾವಿನ ಹೊಣೆಯನ್ನು ಹೊತ್ತುಕೊಂಡಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು 2018 ರಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ದರೋಡೆಕೋರ ಸಂಪತ್ ನೆಹ್ರಾ ಅವರನ್ನು ಬಂಧಿಸಿದ್ದ ಹರಿಯಾಣ ಪೊಲೀಸರ ಎಸ್‌ಟಿಎಫ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಶಾರ್ಪ್ ಶೂಟರ್ ಈ ಕೆಲಸ ನಡೆಸಿದ್ದರು ಎಂದು ತಿಳಿದಿದೆ. ಈ ಮಾಹಿತಿಯ ನಂತರ ಪೊಲೀಸರು ಸಲ್ಮಾನ್ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಶಾರುಖ್ ಖಾನ್:
'ಹ್ಯಾಪಿ ನ್ಯೂ ಇಯರ್' ಚಿತ್ರೀಕರಣದ ಸಮಯದಲ್ಲಿ, ಶಾರುಖ್ ಖಾನ್ ಶೂಟಿಂಗ್ ಸ್ಥಳದಲ್ಲಿ 'ಎಸ್ಆರ್‌ಕೆ ಮುಂದಿನ ಗುರಿಯಾಗುತ್ತಾನೆ' ಎಂದು ಬರೆದ ಬೆದರಿಕೆಯ ಮೆಸೇಜ್ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಕೆಲವು ದಿನಗಳ ನಂತರ, ಅಲಿ ಮತ್ತು ಕರೀಂ ಮೊರಾನಿ ಅವರೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಶಾರುಖ್‌ಗೆ ಅವರ ಕಚೇರಿಗೆ ಕರೆ ಬಂದಿತು. ಇದೇ ಅವಧಿಯಲ್ಲಿ ಶಾರುಖ್ ಅವರ ಸಹ ನಟರಾದ ಸೋನು ಸೂದ್ ಮತ್ತು ಬೊಮನ್ ಇರಾನಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ವರದಿಯಾಗಿದೆ.
ಅಕ್ಷಯ್ ಕುಮಾರ್:
ಗ್ಯಾಂಗ್‌ಸ್ಟರ್ ರವಿ ಪೂಜಾರಿ ಒಮ್ಮೆ ನಟ ಅಕ್ಷಯ್ ಕುಮಾರ್‌ಗೆ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. 2013 ರಲ್ಲಿ ನಟನಿಂದ ಕೆಲಸದಿಂದ ವಜಾಗೊಂಡ ತನ್ನ ಮನೆಯ ಸಹಾಯಕನಿಗೆ ಸಂಬಂಧಿಸಿದಂತೆ ಪೂಜಾರಿ ಅಕ್ಷಯ್‌ಗೆ ಕೊಲೆ ಬೆದರಿಕೆ ಕರೆ ಮಾಡಿದ್ದರು ಎಂದು ವರದಿಯಾಗಿದೆ.
ಅಮಿತಾಬ್ ಬಚ್ಚನ್:
ಬಿಗ್ ಬಿ ಅನಾಮಧೇಯ ಬ್ಲಾಗರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ವರದಿಗಳ ಪ್ರಕಾರ, ಹಿರಿಯ ನಟನಿಗೆ ಕಿರುಕುಳ ನೀಡುತ್ತಿದ್ದಾರೆಂದು ವರದಿಯಾಗಿರುವ ಬ್ಲಾಗರ್‌ನಿಂದ ಅಮಿತಾಬ್ ಬಚ್ಚನ್ ಅವರ ವೈಯಕ್ತಿಕ ಸಂಖ್ಯೆಗೆ ನಿರಂತರವಾಗಿ ಬೆದರಿಕೆ ಸಂದೇಶಗಳು ಬರುತ್ತಿತ್ತು. ನಂತರ ಈ ವಿಚಾರದಲ್ಲಿ ಬಚ್ಚನ್ ಪೊಲೀಸರ ಸಹಾಯವನ್ನು ಪಡೆಯಬೇಕಾಗಿತ್ತು ಎಂದು ವರದಿಯಾಗಿದೆ.
ಕಂಗನಾ ರಣಾವತ್:
2007 ರಲ್ಲಿ ಕಂಗನಾ ರಣಾವತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ಮೇಲೆ ಆ್ಯಸಿಡ್ ಎರಚಿ ಆಕೆಗೆ ಗಂಭೀರ ಗಾಯಗಳಾಗಿವೆ. ಆ ಅವಧಿಯಲ್ಲಿ ಕಂಗನಾ, ತನ್ನ ಸಹೋದರಿಯ ಮೇಲೆ ಹಲ್ಲೆ ನಡೆಸಿದವನಿಂದ ತನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಕರಣ್ ಜೋಹರ್:
ಈ ಹಿಂದೆ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು. ‘ಧರ್ಮ ಪ್ರೊಡಕ್ಷನ್ಸ್’ ಮಾಲೀಕರಿಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಪೊಲೀಸರು ಹೆಚ್ಚಿಸಿದ್ದರು.
ಸ್ವರಾ ಭಾಸ್ಕರ್:
ನಟಿ ಸ್ವರಾ ಭಾಸ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಾರಿ ಟ್ರೋಲ್ ಆಗಿದ್ದಾರೆ. ಆನ್‌ಲೈನ್ ಟ್ರೋಲಿಂಗ್‌ನ ಹೊರತಾಗಿ, ನಟಿಗೆ ಹಲವಾರು ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಕೊಲೆ ಬೆದರಿಕೆಗಳು ಬಂದಿವೆ ಎಂದು ವರದಿಯಾಗಿದೆ, ನಂತರ ಸ್ವರಾ ಒಮ್ಮೆ ತನ್ನ ಟ್ವಿಟರ್ ಅನ್ನು ಅಳಿಸುತ್ತಿರುವುದಾಗಿ ಹೇಳಿದ್ದರು.