MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Bollywood Entry: ಸಲ್ಮಾನ್ ಫ್ಯಾಮಿಲಿಯ ಮತ್ತೊಂದು ಕುಡಿ ಚಿತ್ರರಂಗಕ್ಕೆ, ಮುಂದಿನ ತಿಂಗಳು ಲಾಂಚ್!

Bollywood Entry: ಸಲ್ಮಾನ್ ಫ್ಯಾಮಿಲಿಯ ಮತ್ತೊಂದು ಕುಡಿ ಚಿತ್ರರಂಗಕ್ಕೆ, ಮುಂದಿನ ತಿಂಗಳು ಲಾಂಚ್!

ಸಲ್ಮಾನ್ ಖಾನ್ (Salman Khan) ಬಾಲಿವುಡ್‌ನಲ್ಲಿ ಹಲವಾರು ನಟರನ್ನು ಲಾಂಚ್‌ ಮಾಡಿದ್ದಾರೆ ಮತ್ತು ಅವರ ವೃತ್ತಿ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನಟ ತನ್ನ ತಂಗಿಯ ಗಂಡ ಆಯುಷ್ ಶರ್ಮಾ (Aayush Sharma) ಅವರನ್ನೂ ಇತ್ತೀಚಿಗೆ ಲಾಂಚ್ ಮಾಡಿದ್ದರು. ಅವರು ಈಗ ಅವರ ಕುಟುಂಬದ ಇನ್ನೊಬ್ಬ ಸದಸ್ಯರನ್ನು ಸಿನಿಮಾಕ್ಕೆ ತರಲು ಪ್ಲಾನ್‌ ಮಾಡುತ್ತಿದ್ದಾರೆ. ಯಾರದು ಗೊತ್ತಾ? ವಿವರಗಳನ್ನು ತಿಳಿಯಲು ಮುಂದೆ ಓದಿ.

2 Min read
Suvarna News | Asianet News
Published : Nov 30 2021, 05:41 PM IST| Updated : Nov 30 2021, 05:42 PM IST
Share this Photo Gallery
  • FB
  • TW
  • Linkdin
  • Whatsapp
19

ತನ್ನ ತಂಗಿ ಗಂಡ ಆಯುಷ್ ಶರ್ಮಾ ಅವರನ್ನು ಲಾಂಚ್ ಮಾಡಿದ ನಂತರ, ಸಲ್ಮಾನ್ ಖಾನ್ ಮತ್ತೊಮ್ಮೆ ತಮ್ಮ ಕುಟುಂಬದ ಇನ್ನೊಬ್ಬ ಸದಸ್ಯರನ್ನು ಸಿನಿಮಾರಂಗಕ್ಕೆ ಪರಿಚಯಿಸಲು ಸಿದ್ಧರಾಗಿದ್ದಾರೆ. ಈ ಸಮಯದಲ್ಲಿ,  ಅವರ niece ಅಲಿಜ್‌ Alizeh ಅವರನ್ನು ಲಾಂಚ್‌ ಮಾಡಲಿದ್ದಾರೆ. ಅಲಿಜೆ ಅಲ್ವಿರಾ ಮತ್ತು ಅತುಲ್ ಅಗ್ನಿಹೋತ್ರಿ ಅವರ ಪುತ್ರಿ.

29

ಅಲಿಜೆಹ್  ಈಗಾಗಲೇ ಚಿತ್ರರಂಗದಲ್ಲಿ ತನ್ನ ಚೊಚ್ಚಲ ಸಿನಿಮಾಕ್ಕೆ ತಯಾರಿಯನ್ನು ಪ್ರಾರಂಭಿಸಿದ್ದಾಳೆ. ಸಲ್ಮಾನ್ ಖಾನ್ ಅವರ ಕುಟುಂಬ ಈ ಸ್ಟಾರ್ ಕಿಡ್‌  ಗ್ರ್ಯಾಂಡ್ ಲಾಂಚ್‌ಗೆ ರೆಡಿಯಾಗಿದ್ದಾರೆ ಎನ್ನಲಾಗಿದೆ .   
 
39
भांजी एलीजे के साथ सलमान खान।

भांजी एलीजे के साथ सलमान खान।

ಪಿಂಕ್ವಿಲ್ಲಾದಲ್ಲಿನ ವರದಿಯ ಪ್ರಕಾರ, ಅಲಿಜೆಹ್  ಈಗಾಗಲೇ ತನ್ನ ಡೆಬ್ಯೂಗೆ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಎರಡು ವರ್ಷಗಳಿಂದ, ಅಲಿಜೆಹ್  ಅವರು ನಟನೆ ಮತ್ತು ಡ್ಯಾನ್ಸ್‌ ಪಾಠಗಳನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ಈಗ ಅವರ   ಬಿಗ್‌ ಲಾಂಚ್‌ಗೆ  ರೆಡಿಯಾಗಿದ್ದಾರೆ . 

49

ಅಲಿಜೆಹ್  ಅವರ ಚೊಚ್ಚಲ ಚಿತ್ರವು ಸಲ್ಮಾನ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಮತ್ತು ರೀಲ್ ಲೈಫ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಹೊಸ ನಟರನ್ನು ಬಾಲಿವುಡ್‌ನಲ್ಲಿ  ಲಾಂಚ್ ಮಾಡುವ ವಿಚಾರ ಬಂದಾಗಲೆಲ್ಲಾ ಸಲ್ಮಾನ್ ಖಾನ್ ಮುಂಚೂಣಿಯಲ್ಲಿರುತ್ತಾರೆ ಎಂಬುದು ಎಲ್ಲರಿಗೂ  ತಿಳಿದಿದೆ. 

59
Salman Khan to launch another family member in Bollywood next month? Find out here

Salman Khan to launch another family member in Bollywood next month? Find out here

ಈಗಾಗಲೇ ಸಾಕಷ್ಟು ಹೊಸ ಮುಖಗಳನ್ನು ಪರಿಚಯಿಸಿದ ಕೀರ್ತಿ ಸಲ್ಮಾನ್‌ಗೆ ಸೇರುತ್ತದೆ ಮತ್ತು ಈಗ ಅವರು ತಮ್ಮ ಫ್ಯಾಮಿಲಿಯ ಇನ್ನೊಬ್ಬ ಮೆಂಬರ್‌ ಅನ್ನು ಲಾಂಚ್‌ ಮಾಡಲು ರೆಡಿಯಾಗಿದ್ದಾರೆ. ಸಲ್ಮಾನ್‌ ಕಳೆದೆರಡು ವರ್ಷಗಳಿಂದ  ಅಲಿಜೆಹ್  ಅವರ ತರಬೇತಿಯಲ್ಲಿ ಸಂಪೂರ್ಣ ಗಮನವನ್ನು ತೆಗೆದುಕೊಳ್ಳುತ್ತಿದ್ದಾರೆ. 

69
Salman Khan to launch another family member in Bollywood next month? Find out here

Salman Khan to launch another family member in Bollywood next month? Find out here

ವಾಸ್ತವವಾಗಿ, ತಮ್ಮ ಫ್ಯಾಮಿಲಿಯ ಎಲ್ಲಾ ಮಕ್ಕಳನ್ನು  ತುಂಬಾ ಇಷ್ಟಪಡುವ ಸಲ್ಮಾನ್ ಅಲಿಜ್‌ ಅವರ ಡೆಬ್ಯೂ ಬಗ್ಹೆ ಹೆಚ್ಚು ಗಮನ ಹರಿಸಿದ್ದಾರೆ.ಸಲ್ಮಾ ಖಾನ್ ಅವರೇ ತಮ್ಮ ನೀಸ್‌ ಅನ್ನು ಉದ್ಯಮದಲ್ಲಿ ಪ್ರಾರಂಭಿಸುವ ಘೋಷಣೆ ಮಾಡಲಿದ್ದಾರೆ ಎಂದು ವರದಿ ಹೇಳಿದೆ.

79
Salman Khan to launch another family member in Bollywood next month? Find out here

Salman Khan to launch another family member in Bollywood next month? Find out here

ಹಾಗೇ  ನಿರ್ದೇಶಕರಿಂದ ಚಿತ್ರದ ಪಾತ್ರವರ್ಗದವರೆಗೆ ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳುವ ವರದಿಗಳು ಸಹ ಇವೆ. ಆದರೆ ಅದು ಕೂಡ ಸಲ್ಮಾನ್ ಖಾನ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ.

89
Salman Khan to launch another family member in Bollywood next month? Find out here

Salman Khan to launch another family member in Bollywood next month? Find out here

ಈ ಚಿತ್ರವು ಮುಂದಿನ ವರ್ಷ ತನ್ನ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಮತ್ತು 2023 ರಲ್ಲಿ ಬಿಡುಗಡೆಗೆ ಗಮನಹರಿಸಲಿದೆ ಎಂದು ವರದಿಗಳು ಹೇಳಿಕೊಂಡಿವೆ. ಚಿತ್ರಗಳ ಎಲ್ಲಾ ವಿವರಗಳು ಸದ್ಯಕ್ಕೆ ಬಹಿರಂಗ ಪಡಿಸಿಲ್ಲ ಆದರೂ  ಸಿನಿಮಾವು ರೋಮ್ಯಾಂಟಿಕ್ ಡ್ರಾಮಾ ಆಗಿರಬಹುದು ಎಂದು ಹೇಳಲಾಗುತ್ತದೆ.

99
Salman Khan to launch another family member in Bollywood next month? Find out here

Salman Khan to launch another family member in Bollywood next month? Find out here

ಒಂದೆರಡು ವರ್ಷಗಳ ಹಿಂದೆ ತನ್ನ ಚಿಕ್ಕಮ್ಮ ಸೀಮಾ ಖಾನ್ ಅವರ ಬಟ್ಟೆ ಬ್ರಾಂಡ್‌ ಕಲೆಕ್ಷನ್‌ಗಾಗಿ  ರ್ಯಾಂಪ್‌ ವಾಕ್‌ ಮಾಡಿದಾಗ ಅಲಿಜೆಹ್  ಗಮನ ಸೆಳೆದಿದ್ದರು. ಸಲ್ಮಾನ್ ಖಾನ್ ಅವರ ಕ್ಲೋಸ್‌ ಫ್ರೆಂಡ್‌ ಆಗಿರುವ ಆಗಿರುವ  ನಿರ್ಮಾಪಕ ಸೂರಜ್ ಬಡ್ಜಾತಿಯಾ ಅವರು ಮಗನ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಅಲಿಜೆಹ್ ಅನ್ನು ಪ್ರಾರಂಭಿಸುತ್ತಾರೆ ಎಂದು ವದಂತಿಗಳಿತ್ತು. ಆದರೆ  ಅದು ಸಂಭವಿಸಲಿಲ್ಲ ಮತ್ತು ಈಗ ಸಲ್ಮಾನ್ ಖಾನ್ ಸ್ವತಃ ಅಲಿಜೆಹ್ ಅನ್ನು ಲಾಂಚ್‌ ಮಾಡಲಿದ್ದಾರೆ. 

About the Author

SN
Suvarna News
ಬಾಲಿವುಡ್
ಸಲ್ಮಾನ್ ಖಾನ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved