16 ವರ್ಷಕ್ಕೆ ಸಿನಿಮಾಕ್ಕೆ ಕಾಲಿಟ್ಟು ಫೇಮಸ್‌ ಆಗಿದ್ದ ರಂಭಾ ಈಗ ಹೇಗಿದ್ದಾರೆ ನೋಡಿ!

First Published Jun 5, 2021, 7:45 PM IST

ಸಲ್ಮಾನ್ ಖಾನ್ ಅವರ ಜುಡ್ವಾ (1997) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಂಭಾ 45ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜೂನ್ 5, 1976ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. 1992ರ ತೆಲುಗು ಚಿತ್ರ ಆ ಒಕ್ಕಿ ಅಡಕ್ಕು ಮೂಲಕ ಅವರು ಸಿನಿಮಾಕ್ಕೆ ಬಂದರು. 17 ಬಾಲಿವುಡ್ ಮತ್ತು 100ಕ್ಕೂ ಹೆಚ್ಚು ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ ರಂಭಾ ಪ್ರಸ್ತುತ ಮಕ್ಕಳನ್ನು ಗ್ಲಾಮರ್ ಪ್ರಪಂಚದಿಂದ ದೂರವಿರಿಸುವಲ್ಲಿ ನಿರತರಾಗಿದ್ದಾರೆ.