MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Boycott Trend ವಿರುದ್ಧ ಬಾಲಿವುಡ್‌ನಲ್ಲಿ ಒಗ್ಗಟ್ಟಿಲ್ಲ ಕಿಡಿಕಾರಿದ ಸೈಫ್‌ ಆಲಿ ಖಾನ್‌

Boycott Trend ವಿರುದ್ಧ ಬಾಲಿವುಡ್‌ನಲ್ಲಿ ಒಗ್ಗಟ್ಟಿಲ್ಲ ಕಿಡಿಕಾರಿದ ಸೈಫ್‌ ಆಲಿ ಖಾನ್‌

2022 ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ (SaiF Ali Khan) ಪಾಲಿಗೆ ಉತ್ತಮವಾಗಿಲ್ಲ. ಅವರ ಏಕೈಕ ಬಿಡುಗಡೆಯಾದ ವಿಕ್ರಂ ವೇದಾ ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದಾಗಿ ಕುಸಿದಿದೆ. ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಸೈಫ್ ಸಂದರ್ಶನ ನೀಡಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಅವರು ಬಹಿಷ್ಕಾರ ಸಂಸ್ಕೃತಿಯ ಬಗ್ಗೆಯೂ ಮಾತನಾಡಿದ್ದಾರೆ ಮತ್ತು ಈ ಬಗ್ಗೆ ಉದ್ಯಮದಲ್ಲಿ ಒಗ್ಗಟ್ಟು ಇಲ್ಲ ಎಂದು  ತಮ್ಮ ಕೋಪವನ್ನು ಹೊರಹಾಕಿದರು.  ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಚಿತ್ರಗಳು, ನಟರ ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಮತ್ತು ಇತರ ವಿವಾದಗಳ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

2 Min read
Suvarna News
Published : Nov 22 2022, 04:18 PM IST
Share this Photo Gallery
  • FB
  • TW
  • Linkdin
  • Whatsapp
16

ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ಗೆ ಉತ್ತಮವಾಗಿಲ್ಲ. ಒಂದರ ಹಿಂದೆ ಒಂದರಂತೆ ಚಿತ್ರಗಳು ಸೋತವು. ಸೂಪರ್‌ಸ್ಟಾರ್‌ಗಳ ಚಿತ್ರಗಳೂ ಅದ್ಭುತ ಪ್ರದರ್ಶನ ಕಾಣಲಿಲ್ಲ. ಈ ಮಧ್ಯೆ, ಸೈಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಬಾಯ್ಕಾಟ್, ಫ್ಲಾಪ್ ಚಿತ್ರಗಳು ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

26

ಇತರ ವಿಷಯಗಳ ಹೊರತಾಗಿ, ಸೈಫ್ ಅಲಿ ಖಾನ್ ಬಾಲಿವುಡ್‌ನ ಬಹಿಷ್ಕಾರ ಸಂಸ್ಕೃತಿಗೆ ಬಗ್ಗೆ ಹೆಚ್ಚು  ಒತ್ತು ನೀಡಿ ಮಾತನಾಡಿದರು. ಲಾಲ್ ಸಿಂಗ್
ಚಡ್ಡಾ, ಬ್ರಹ್ಮಾಸ್ತ್ರ ಮತ್ತು ಅವರ ಸ್ವಂತ ಚಿತ್ರ ವಿಕ್ರಮ್ ವೇದಾ ಬಿಡುಗಡೆಯ ಸಂದರ್ಭದಲ್ಲಿನ  ಸಾಮಾಜಿಕ ಮಾಧ್ಯಮದಲ್ಲಿ (Social Media) ಬಹಿಷ್ಕಾರದ ಟ್ರೆಂಡಿಂಗ್ ಬಗ್ಗೆ ಮಾತನಾಡಿದರು. 

36

ಚಿತ್ರಗಳನ್ನು ಟಾರ್ಗೆಟ್ ಮಾಡಿ, ಇದೊಂದು ಕೆಟ್ಟ ಸಿನಿಮಾ, ಬ್ಯಾನ್ ಮಾಡಬೇಕು ಅಥವಾ ರದ್ದು ಮಾಡಬೇಕು ಎಂದು ಬೈಕಾಟ್‌ ಮಾಡುತ್ತಿರುವ ಈ ವಿಭಾಗದ ಜನರು, ಇದು ನಿಜವಾದ ಪ್ರೇಕ್ಷಕರಲ್ಲ ಎಂದು ನನಗೆ ಖಾತ್ರಿಯಿದೆ. ಇದು ಸರಿಯಲ್ಲ, ಇದರ ವಿರುದ್ಧ ಬಾಲಿವುಡ್‌ನಲ್ಲಿಯೂ ಒಗ್ಗಟ್ಟು ಇಲ್ಲ ಎಂದು ಬೇಸರವಿದೆ ಎಂದು ಸೈಫ್‌ ಹೇಳಿದ್ದಾರೆ.

46

ಆ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದುವವರೆಗೆ, ಈ ಬಾಯ್‌ಕಟ್‌ ಸಂಸ್ಕೃತಿಯು (Boycott Cutlrure) ಎಷ್ಟು ಪರಿಣಾಮಕಾರಿ ಎಂದು ನಮಗೆ ನಿಜವಾಗಿಯೂ ತಿಳಿದಿರುವುದಿಲ್ಲ. ಬ್ಯಾನ್‌ ಅಥವಾ ಬಾಯ್‌ಕಾಟ್‌ ಸಂಸ್ಕೃತಿ ಭಯಾನಕವಾಗಿದೆ ಮತ್ತು ಇದು ವಿಶ್ವಾದ್ಯಂತ ವಿದ್ಯಮಾನವಾಗಿದೆ ಎಂದು ಅವರು ಹೇಳಿದರು.  

56

ಬಾಯ್‌ಕಾಟ್‌ ಅಥವಾ ಬಹಿಷ್ಕಾರ ಎಂದು ಹೇಳುವವರು ನಿಜವಾಗಿಯೂ ಸಿನಿ ಜಗತ್ತನ್ನು ಪ್ರೀತಿಸುವ, ಗೌರವಿಸುವ ಪ್ರೇಕ್ಷಕರಲ್ಲ. ಜನರು ಮನರಂಜನೆಯನ್ನು ಇಷ್ಟಪಡುತ್ತಾರೆ, ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ, ಆದರೆ ಈ ಬಹಿಷ್ಕಾರದಿಂದಾಗಿ ಅವರು ಚಲನಚಿತ್ರಗಳನ್ನು ನೋಡಲು ಹೋಗುವುದಿಲ್ಲ. ನಮ್ಮ ದೇಶದಲ್ಲಿ ನಿಜವಾಗಿಯೂ ಹೆಚ್ಚಿನ ಆಯ್ಕೆಗಳಿಲ್ಲ. ಪಾರ್ಕ್‌ನಲ್ಲಿ ನಡೆಯಲು ಅಥವಾ ನಿಮ್ಮ ಮಕ್ಕಳೊಂದಿಗೆ ದೋಣಿ ವಿಹಾರಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮ ನಗರಗಳಲ್ಲಿ ಮನರಂಜನೆ ಸೀಮಿತವಾಗಿದೆ, ಆದ್ದರಿಂದ ಚಲನಚಿತ್ರಗಳನ್ನು ನೋಡುವುದು ಮನರಂಜನೆಗೆ ಸರಿಯಾದ ಆಯ್ಕೆಯಾಗಿದೆ ಎಂದು ಸೈಫ್‌ ಹೇಳಿದ್ದಾರೆ.

66

ಸೈಫ್ ಅಲಿ ಖಾನ್  ಅವರಿಗೆ ಈ ವರ್ಷವೂ ಉತ್ತಮವಾಗಿಲ್ಲ. ಅವರ ವಿಕ್ರಮ್ ವೇಧಾ ಚಿತ್ರ ಫ್ಲಾಪ್ ಆಗಿತ್ತು. ಅವರ ಮುಂಬರುವ ಚಿತ್ರ ಅದಿರುಪುರುಷ, ಇದರಲ್ಲಿ ಅವರು ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಮತ್ತು ಕೃತಿ ಸನನ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 16 ಜೂನ್ 2023 ರಂದು ಬಿಡುಗಡೆಯಾಗಲಿದೆ. ಪ್ರಸ್ತುತ, ತಯಾರಕರು ಚಿತ್ರದ VFX ಅನ್ನು ಮರುನಿರ್ಮಾಣ ಮಾಡುತ್ತಿದ್ದಾರೆ.

About the Author

SN
Suvarna News
ಬಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved