ಮತ್ತೊಂದು ಸ್ಟಾರ್ ಕಿಡ್‌ನ ಲಾಂಚ್ ಮಾಡ್ತಾರಂತೆ ಕರಣ್ ಜೋಹರ್!
ವರದಿಗಳ ಪ್ರಕಾರ, ಕರಣ್ ಜೋಹರ್ (Karan Johar) ಮತ್ತೊಂದು ಸ್ಟಾರ್ ಕಿಡ್ ಅನ್ನು ಲಾಂಚ್ ಮಾಡಲಿದ್ದಾರೆ. ಈ ಸ್ಟಾರ್ ಕಿಡ್ ಬೇರೆ ಯಾರೂ ಅಲ್ಲ, ಸೈಫ್ ಅಲಿ ಖಾನ್ ( SaiF Ali Khan) ಅವರ ಮಗ ಇಬ್ರಾಹಿಂ ಅಲಿ ಖಾನ್ (Ibrahim Ali Khan)2023ರಲ್ಲಿ ಚಿತ್ರ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಇದೀಗ ಮತ್ತೊಬ್ಬ ಸ್ಟಾರ್ ಕಿಡ್ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ತಯಾರಾಗಲಿರುವ ಚಿತ್ರದಿಂದ ಇಬ್ರಾಹಿಂ ಅವರನ್ನು ಲಾಂಚ್ ಮಾಡಲಾಗುವುದು .
ಬೊಮನ್ ಇರಾನಿ ಅವರ ಪುತ್ರ ಕಯೋಜ್ ಇರಾನಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆದಿರನ್ನೂ ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ ಈ ಚಿತ್ರದ ಕೆಲಸವನ್ನು 2023ರ ಆರಂಭದಲ್ಲಿ ಮಾಡಬಹುದು. ಇಬ್ರಾಹಿಂ ಎದುರು ಚಿತ್ರದಲ್ಲಿ ನಾಯಕಿ ಯಾರೆಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಇಬ್ರಾಹಿಂ ಇತ್ತೀಚೆಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಕರಣ್‌ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಶೀಘ್ರದಲ್ಲೇ ಚಿತ್ರದ ಕೆಲಸವನ್ನು ಪ್ರಾರಂಭಿಸಲಿದೆ. ಆದರೆ, ಚಿತ್ರದ ಹೆಸರು ಮತ್ತು ಅದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಚಿತ್ರದ ಪ್ರಮುಖ ಪಾತ್ರವನ್ನು ಇಬ್ರಾಹಿಂ ಅಲಿ ಖಾನ್ ನಿರ್ವಹಿಸಲಿದ್ದಾರೆ ಎಂಬುದು ಸ್ಪಷ್ಟ.
ಕಹೋ ನಾ ಪ್ಯಾರ್ ಹೈ ಚಿತ್ರದೊಂದಿಗೆ ಹೃತಿಕ್ ರೋಷನ್ ಮಾಡಿದಂತೆ ಸೈಫ್ ಅಲಿ ಖಾನ್ ತಮ್ಮ ಚೊಚ್ಚಲ ಪ್ರವೇಶವನ್ನು ಯಾವಾಗಲೂ ಬಯಸುತ್ತಿದ್ದರು. ತಮ್ಮ ಮಗನ ಚೊಚ್ಚಲ ಅಬ್ಬರವನ್ನು ಎಲ್ಲರೂ ನೆನಪಿಸಿಕೊಳ್ಳಬೇಕೆಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಅಷ್ಟೇ ಅಲ್ಲ, ತಮ್ಮ ಮಗ ತೈಮೂರ್ ಅಲಿ ಖಾನ್ ಕೂಡ ಸಿನಿಮಾದಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದಾರೆ.
ಇಬ್ರಾಹಿಂ ಅಲಿ ಖಾನ್ ಜನಮನದಲ್ಲಿ ಉಳಿದಿದ್ದಾರೆ. ಅವರು ಆಗಾಗ ಸ್ನೇಹಿತರೊಂದಿಗೆ ಹ್ಯಾಂಗ್‌ಔಟ್ ಮಾಡುವುದನ್ನು ಕಾಣಬಹುದು. ಸ್ನೇಹಿತರ ಜೊತೆ ಡಿನ್ನರ್ ಡೇಟ್‌ಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಇಬ್ರಾಹಿಂ ತನ್ನ ಅಕ್ಕ ಸಾರಾ ಅಲಿ ಖಾನ್ ಅವರೊಂದಿಗೆ ವಿಶೇಷ ಬಾಂಧವ್ಯವನ್ನು (Special Bonding) ಹಂಚಿಕೊಂಡಿದ್ದಾರೆ. ಸಹೋದರ ಮತ್ತು ಸಹೋದರಿ ಸಾಮಾನ್ಯವಾಗಿ ಚಲನಚಿತ್ರ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಪೋಸ್ ನೀಡುವುದನ್ನು ಕಾಣಬಹುದು.
ಕರಣ್ ಜೋಹರ್ ಅವರು ಸ್ಟಾರ್ ಕಿಡ್ಸ್ ಅನ್ನುಲಾಂಚ್ ಮಾಡುವ ಕೆಲಸಕ್ಕೆ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಗೂ ಸಿನಿಮಾ ಆಫರ್ ಮಾಡಿದ್ದು, ಆರ್ಯನ್ ನಿರಾಕರಿಸಿದ್ದರು. ಆರ್ಯನ್‌ಗೆ ನಟಿಸಲು ಇಷ್ಟವಿಲ್ಲ, ಬದಲಿಗೆ ತೆರೆಮರೆಯಲ್ಲಿ ಕೆಲಸ ಮಾಡಲು ಬಯಸಿದ್ದಾರೆ ಎನ್ನಲಾಗುತ್ತಿದೆ.