ಸೈಫ್ ಅಲಿ ಖಾನ್-ಅಮೃತಾ ಸಿಂಗ್ ಡಿವೋರ್ಸ್: ಬೇರೆಯಾದಾಗ ನಟನ ಕಣ್ಣಲ್ಲಿ ನೀರು!
ಬಿ-ಟೌನ್‌ನ ಫೇಮಸ್ ಕಪಲ್‌ಗಳಲ್ಲಿ ಒಂದಾಗಿದ್ದ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಡಿವೋರ್ಸ್ ನಂತರವೂ ಹೆಚ್ಚು ಚರ್ಚೆಯಲ್ಲಿರುವ ಎಕ್ಸ್ ಕಪಲ್. ಬೇರೆಯಾಗಿ ಇಷ್ಟು ವರ್ಷಗಳ ನಂತರವೂ ಈ ಮಾಜಿ ದಂಪತಿಗೆ ಸಂಬಂಧಿಸಿದ ವಿಷಯಗಳು ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಕಡಿಮೆಯಾಗಿಲ್ಲ. ಸೈಫ್ ತಮ್ಮ ಡಿವೋರ್ಸ್‌ಗೆ ಬಗ್ಗೆ ಮಾತಾನಾಡಿದ್ದು ಮಕ್ಕಳಿಂದು ದೂರವಾಗಿದ್ದು ಹೆಚ್ಚು ನೋವು ಕೊಟ್ಟಿತ್ತು ಎಂದಿದ್ದಾರೆ.
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ ಬೇರ್ಪಟ್ಟರು.
ವಿಚ್ಚೇದನದ ನಂತರದ ತನ್ನ ಜೀವನದ ಬಗ್ಗೆ ಮತ್ತು ಮಕ್ಕಳಾದ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಖಾನ್‌ರನ್ನು ಹೇಗೆ ಮಿಸ್ ಮಾಡಿಕೊಂಡೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ ಸೈಫ್ ಅಲಿ ಖಾನ್.
2004ರಲ್ಲಿ ಸೈಫ್ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು.
ಅಮೃತಾಗೆ 5 ಕೋಟಿ ರೂ.ಗಳ ಜೀವನಾಂಶವನ್ನು ನೀಡಲಾಯಿತು ಮತ್ತು ಸೈಫ್ ತನ್ನ ಮಗ 18 ವರ್ಷ ತುಂಬುವವರೆಗೆ ತಿಂಗಳಿಗೆ 1 ಲಕ್ಷ ಪಾವತಿಸಲು ಒಪ್ಪಿಕೊಂಡರು.
ಡಿವೋರ್ಸ್ ನಂತರ, ಸೈಫ್ ರೋಸಾ ಎಂಬ ಮಾಡೆಲ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆಂದು ಆರೋಪಿಸಲಾಯಿತು ಹಾಗೂ ಮಕ್ಕಳನ್ನು ಭೇಟಿಯಾಗಲು ಅವರಿಗೆ ಅವಕಾಶವಿರಲಿಲ್ಲ. ಅವರನ್ನು ಮಿಸ್ ಮಾಡಿಕೊಂಡಿರುವ ಬಗ್ಗೆ ಮತ್ತು ಅವರ ಫೋಟೋಗಳನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡು ಅದನ್ನು ನೋಡುವುದರ ಬಗ್ಗೆ ಹಂಚಿಕೊಂಡಿದ್ದಾರೆ ನಟ.
'ನನ್ನ ಪರ್ಸ್‌ನಲ್ಲಿ ಇಬ್ರಾಹಿಂನ ಫೋಟೋವಿದೆ ಮತ್ತು ಅದನ್ನು ನೋಡಿದಾಗಲೆಲ್ಲಾ ನಾನು ಅಳುತ್ತೇನೆ. ನನ್ನ ಮಗಳು ಸಾರಾಳನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಅವರನ್ನು ಭೇಟಿ ಮಾಡಲು ನನಗೆ ಏಕೆ ಅವಕಾಶವಿಲ್ಲ ಅಥವಾ ಅವರಿಗೆ ನನ್ನನ್ನು ನೋಡಲು ಅವಕಾಶವಿಲ್ಲ.'
ಏಕೆಂದರೆ ನನ್ನ ಜೀವನದಲ್ಲಿ ನಾನು ಇನ್ನೊಬ್ಬ ಮಹಿಳೆಯನ್ನು ಹೊಂದಿದ್ದರಿಂದ ಮತ್ತು ಅವಳು ನನ್ನ ಮಕ್ಕಳನ್ನು ಅವರ ತಾಯಿಯ ವಿರುದ್ಧ ಬ್ರೈನ್ ವಾಶ್ ಮಾಡುತ್ತಾಳೆ ಎಂದು. ಅದು ನಿಜವಲ್ಲ ಮತ್ತು ಅಮೃತಾಗೆ ಇದರ ಬಗ್ಗೆ ತಿಳಿದಿದೆ' ಎಂದಿದ್ದರು ಸೈಫ್.
ಸೈಫ್ 5 ಕೋಟಿಯಲ್ಲಿ 2.5 ಕೋಟಿ ಕೊಟ್ಟಿರುವ ಬಗ್ಗೆ ಮತ್ತು ಅದು ಅವರಿಗೆ ಹೇಗೆ ಕಷ್ಟವಾಗುತ್ತದೆ ಎಂದು ಹೇಳಿದ್ದರು.
'ನನ್ನ ಮಕ್ಕಳಿಗೆ ಹಣ ಪಾವತಿಸಲು ಬೇಕಾದಲ್ಲಿ ನಾನು ವಿಶ್ರಾಂತಿ ಇಲ್ಲದೆ ದುಡಿಯುತ್ತೇನೆ. ನಾನು ಎಲ್ಲವನ್ನೂ ಮಾಡುತ್ತೇನೆ. ನಾನು ಚಲನಚಿತ್ರಗಳಿಂದ, ಜಾಹೀರಾತುಗಳಿಂದ, ಸ್ಟೇಜ್ ಶೋಗಳಿಂದ ಏನನ್ನು ಸಂಪಾದಿಸುತ್ತೇನೆ, ಅದು ನನ್ನ ಮಕ್ಕಳಿಗಾಗಿ' ಎಂದು ಹೇಳಿದರು.
'ನಮ್ಮ ಬಂಗಲೆ, ಅಮೃತಾ ಹಾಗೂ ಮಕ್ಕಳಿಗಾಗಿ ಮತ್ತು ನಾನು ಬೇರೆಯಾದ ನಂತರ ಅವಳೊಂದಿಗೆ ಸೇರಿಕೊಂಡಿರುವ ಸಂಬಂಧಿಕರಿಗೆ' ಎಂದು ಅವರು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಕರೀನಾ ಕಪೂರ್ ಖಾನ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ ಹಾಗೂ ಪ್ರಸ್ತುತ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.