- Home
- Entertainment
- Cine World
- ರಾಮಾಯಣದ ಸೀತೆ ಪಾತ್ರಕ್ಕೆ ಸಿಕ್ಕಾಪಟ್ಟೆ ವಿರೋಧ… ಸಾಯಿಪಲ್ಲವಿ ಗ್ಲಾಮರಸ್ ಆಗಿಲ್ಲದಿರೋದೆ ತಪ್ಪಾಯ್ತ?
ರಾಮಾಯಣದ ಸೀತೆ ಪಾತ್ರಕ್ಕೆ ಸಿಕ್ಕಾಪಟ್ಟೆ ವಿರೋಧ… ಸಾಯಿಪಲ್ಲವಿ ಗ್ಲಾಮರಸ್ ಆಗಿಲ್ಲದಿರೋದೆ ತಪ್ಪಾಯ್ತ?
ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದು, ಈ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ನಿತೇಶ್ ತಿವಾರಿ (Nitesh Tiwari) ಅವರ ರಾಮಾಯಣದ ಮೊದಲ ಭಾಗದ ಶೂಟಿಂಗ್ ಈಗಾಗಲೇ ಮುಗಿದಿದೆ. ಈ ಸಿನಿಮಾ ಅತಿ ದೊಡ್ಡ ಬಜೆಟ್ ನ ಸಿನಿಮಾವಾಗಿದ್ದು, ದೊಡ್ಡ ದೊಡ್ಡ ಸ್ಟಾರ್ ಕಾಸ್ಟ್ ನಿಂದಾಗಿ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಟೀಸರ್ ರಿಲೀಸ್ ಆಗಿ ಟ್ರೆಂಡಿಂಗ್ ನಲ್ಲಿತ್ತು.
ನಿತೀಶ್ ತಿವಾರಿ ರಾಮಾಯಣದಲ್ಲಿ ರಣಬೀರ್ ಕಪೂರ್ (Ranbir Kapoor)ರಾಮನ ಪಾತ್ರದಲ್ಲಿ ನಟಿಸಿದರೆ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ, ಹೀಗೆ ದೇಶದ ಹಲವು ನಾಯಕ, ನಾಯಕಿಯರು ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೆ ಇದೀಗ ಸೀತಾ ಮಾತೆಯ ಪಾತ್ರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಹೌದು, ಸೀತಾ ಮಾತೆಯಾಗಿ ಸಾಯಿ ಪಲ್ಲವಿ (Sai Pallavi)ಪಾತ್ರವನ್ನು ಹಲವರು ಒಪ್ಪಿಕೊಂಡಿದ್ದರೆ, ಅರ್ಧದಷ್ಟು ಜನ ಸೀತೆ ಪಾತ್ರಕ್ಕೆ ಆಕೆ ಸರಿಯಾದ ಆಯ್ಕೆ ಅಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಜನ ಕೊಟ್ಟಿರುವ ಕಾರಣ ಏನೆಂದರೆ, ಸಾಯಿ ಪಲ್ಲವಿ ನೋಡೋದಕ್ಕೆ ಚೆಂದ ಇಲ್ಲ, ಗ್ಲಾಮರಸ್ ಆಗಿಲ್ಲ ಅನ್ನೋದು.
ರಾಮಾಯಣದ ಬಗ್ಗೆ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇವುಗಳಿಗೆ ಬಂದ ಕಾಮೆಂಟ್ ನೋಡಿದ್ರೆ ಹಲವು ಜನ ಸಾಯಿ ಪಲ್ಲವಿ ಸರಿಯಾದ ಆಯ್ಕೆ ಅಲ್ಲ, ಅದಕ್ಕಿಂತ ಯಾಮಿ ಗೌತಮಿ (Yaami Goutami), ಮೃಣಾಲ್ ಠಾಕೂರ್, ಶ್ರದ್ಧಾ ಕಪೂರ್, ಕಿಯಾರ ಅಡ್ವಾನಿ, ಅನುಷ್ಕಾ ಶೆಟ್ಟಿ ಈ ಪಾತ್ರಕ್ಕೆ ಬೆಸ್ಟ್ ಆಯ್ಕೆ ಎಂದು ಹೇಳುತ್ತಿದ್ದಾರೆ.
ಇನ್ನೂ ಕೆಲವರು ಕಾಮೆಂಟ್ ಮಾಡಿ ರಾವಣನ ಪತ್ನಿ ಮಂಡೋದರಿಯಾಗಿ ನಟಿಸುತ್ತಿರೋದು ಕಾಜಲ್ ಅಗರ್ವಾಲ್. ಹಾಗಾಗಿ, ಕಾಜಲ್ ನಂತಹ ಪತ್ನಿ ಮನೆಯಲ್ಲಿರುವಾಗ ನಿಜವಾಗಿಯೂ ರಾವಣ ಸಾಯಿಪಲ್ಲವಿಯಂತಹ ಸೀತೆಯನ್ನು ಅಪಹರಿಸುತ್ತಾನೆಯೇ? ಎನ್ನುವ ಪ್ರಶ್ನೆಯನ್ನು ಸಹ ಕೇಳಿದ್ದಾರೆ.
ಹಾಗಿದ್ರೆ ಸಾಯಿಪಲ್ಲವಿ ಗ್ಲಾಮರಸ್ ಆಗಿರದೇ ಇದ್ದುದೇ ಆಕೆಯ ತಪ್ಪೇ? ಸೀತಾ ಮಾತೆಯ ಪಾತ್ರಕ್ಕೆ ಬೇಕಾಗಿರೋದು ಗ್ಲಾಮರಸ್ ಲುಕ್ ಮಾತ್ರವೇ? ಸೀತಾ ಮಾತೆ ಅಂದ್ರೆ ಡಿವೈನಿಟಿ ಕಣ್ಣಲ್ಲಿ ಕಾಣುತ್ತಿರಬೇಕು, ನಿಜವಾದ ಸೀತಾಮಾತೆ ಅಷ್ಟೊಂದು ಸುಂದರಿ ಆಗಿರಲಿಲ್ಲ. ಆದರೆ ಆಕೆಯ ಡಿವೈನ್ ಪವರ್, ಔರ ಹೇಗಿತ್ತೆಂದರೆ, ಇಡೀ ಲೋಕವೇ ಆಕರ್ಷಿತವಾಗುವಂತಿತ್ತು.
ಇನ್ನು ಸಾಯಿ ಪಲ್ಲವಿ ಎಂತಹ ನಟಿ ಅನ್ನೋದು ಆಕೆಯ ಸಿನಿಮಾ ನೋಡಿದವರಿಗೆ ಗೊತ್ತೇ ಇರುತ್ತೆ. ಫಿದಾ, ಶ್ಯಾಮ್ ಸಿಂಗ್ ರಾಯ್, ಗಾರ್ಗಿ, ಅಮರನ್, ಹೀಗೆ ಪ್ರತಿಯೊಂದು ಸಿನಿಮಾದಲ್ಲೂ ತನ್ನ ವಿಭಿನ್ನ ಪಾತ್ರಗಳ ಮೂಲಕ ಜನಮನಗೆದ್ದ ನಟಿ. ಆಕೆ ಕಣ್ಣಲ್ಲೇ ಎಲ್ಲವನ್ನೂ ತಿಳಿಸುವ ಜಾದೂ ಇದೆ. ಸೀತೆ ಪಾತ್ರಕ್ಕೆ ಬೇಕಾದ ಆ ಶಾಂತಯುತ ಕಣ್ಣುಗಳು, ಡಿವೈನಿಟಿ ಖಂಡಿತವಾಗಿಯೂ ಸಾಯಿಪಲ್ಲವಿಯಲ್ಲಿದೆ ಅಂತಾನೆ ಹೇಳಬಹುದು.
ಇನ್ನು ಜನ ಹೇಳುತ್ತಾರೆ ಯಾಕೆ ನಿರ್ದೇಶಕರಿಗೆ ಬೇರೆ ಯಾರೂ ಸಿಕ್ಕಿಲ್ವಾ ಸೀತೆ ಪಾತ್ರಕ್ಕೆ ಎಂದು, ನೆನಪಿರಲಿ ರಾಮಾಯಣ ಸಿನಿಮಾ (Ramayana film) 4000 ಕೋಟಿ ಬಿಗ್ ಬಜೆಟ್ ಸಿನಿಮಾ. ಇಷ್ಟು ಹಣ ಖರ್ಚು ಮಾಡುವ ಸಿನಿಮಾ ತಂಡಕ್ಕೆ ಖಂಡಿತವಾಗಿಯೂ ಯಾವ ನಟಿಯನ್ನೂ ಬೇಕಾದ್ರೂ ಆಯ್ಕೆ ಮಾಡುವ ಶಕ್ತಿ ಇದೆ. ಆದರೆ ಎಲ್ಲರನ್ನೂ ಬಿಟ್ಟು ಸಾಯಿ ಪಲ್ಲವಿಯನ್ನೇ ಆಯ್ಕೆ ಮಾಡಿದ್ದಾರೆ ಅಂದ್ರೆ ಸೀತಾ ಮಾತೆಯ ಪಾತ್ರಕ್ಕೆ ಆಕೆ ಪರ್ಫೆಕ್ಟ್ ಮ್ಯಾಚ್ ಅಂತಾನೆ ಅರ್ಥ ಅಲ್ವಾ?