ಸಾಯಿ ಪಲ್ಲವಿಯನ್ನ ನಟಿ ಸೌಂದರ್ಯಗೆ ಹೋಲಿಕೆ ಮಾಡಿದ ಫ್ಯಾನ್ಸ್... ಅಂದದಲ್ಲೂ, ಪ್ರತಿಭೆಯಲ್ಲೂ ಪರ್ಫೆಕ್ಟ್ ಮ್ಯಾಚ್ ?!
ಸೋಶಿಯಲ್ ಮೀಡಿಯಾದಲ್ಲಿ ನಟಿ ಸೌಂದರ್ಯ ಮತ್ತು ನಟಿ ಸಾಯಿ ಪಲ್ಲವಿಯ ವಿಡಿಯೋಗಳನ್ನು ಎಡಿಟ್ ಮಾಡಿ ಶೇರ್ ಮಾಡುತ್ತಿದ್ದು, ಇಬ್ಬರಲ್ಲೂ ಸಾಮ್ಯತೆ ಇದೆ ಅಂತಿದ್ದಾರೆ ಜನ.
ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ದಿನಗಳಲ್ಲಿ ನ್ಯಾಚುರಲ್ ಬ್ಯೂಟಿ (Natural Beauty) ಅಂತ ಹೆಸರಾಗಿರೋ ನಟಿ ಅಂದ್ರೆ ಅದು ಸಾಯಿ ಪಲ್ಲವಿ. ಸಾಯಿ ಪಲ್ಲವಿಯ ಸೌಂದರ್ಯ, ಸಿಂಪ್ಲಿಸಿಟಿ ಮತ್ತು ಅಭಿನಯ ಚತುರತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ನಟಿಯನ್ನು ಒಂದು ಕಾಲದಲ್ಲಿ ಮಿಂಚಿ ಮರೆಯಾದ ನಟಿ ಸೌಂದರ್ಯರಿಗೆ ಹೋಲಿಕೆ ಮಾಡ್ತಿದ್ದಾರೆ.
ಸೌಂದರ್ಯ (Actress Soundarya) ಅಂದ್ರೆ ಆ ಕಾಲದಲ್ಲಿ ತಮ್ಮ ಸೌಂದರ್ಯ ಮತ್ತು ಅದ್ಭುತ ನಟನೆಯಿಂದಲೇ ಜನಪ್ರಿಯತೆ ಪಡೆದಿದ್ದರು. ಸೌಂದರ್ಯ ಗ್ಲಾಮರಸ್ ಪಾತ್ರಗಳಿಗಿಂತ ಹೆಚ್ಚಾಗಿ ಪ್ರಾಮುಖ್ಯತೆ ಇರುವಂತಹ ಪಾತ್ರಗಳಲ್ಲೇ ನಟಿ ಸೈ ಎನಿಸಿಕೊಂಡಿದ್ದರು. ಇದೀಗ ಅವರ ಸ್ಥಾನವನ್ನು ನಟಿ ಸಾಯಿ ಪಲ್ಲವಿ ತುಂಬುತ್ತಿದ್ದಾರೆ ಎನ್ನುತ್ತಿದ್ದಾರೆ ಜನರು. ಯಾಕಂದ್ರೆ ಸಾಯಿ ಪಲ್ಲವಿ ಯಾವಾಗ್ಲೂ ಗ್ಲಾಮರಸ್ ರೋಲ್ ಗಳಿಂದ ದೂರವೇ ಉಳಿದಿದ್ದಾರೆ. ಅದರ ಬದಲಾಗಿ ಪ್ರಾಮುಖ್ಯತೆ ಇರುವಂತಹ ಪಾತ್ರಗಳನ್ನೇ ಆಯ್ಕೆ ಮಾಡುತ್ತಾರೆ.
ನಟಿ ಸೌಂದರ್ಯ ಕನ್ನಡ, ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲೂ ನಟಿಸಿ ಎಲ್ಲಾ ಭಾಷೆಯಲ್ಲೂ ಸೈ ಎನಿಸಿಕೊಂಡಿದ್ದರು. ಅದೇ ರೀತಿ ಸಾಯಿ ಪಲ್ಲವಿ (Sai Pallavi) ಕೂಡ ಮಲಯಾಲಂ, ತಮಿಳು, ತೆಲುಗು ಸದ್ಯ ಹಿಂದಿ ಭಾಷೆಯಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ಭಾರತದಾದ್ಯಂತ ಪ್ರೇಕ್ಷಕರ ಮೆಚ್ಚಿನ ನಟಿಯಾಗಿದ್ದಾರೆ.
ನಟಿ ಸೌಂದರ್ಯಗೆ ಯಾವುದೇ ಪಾತ್ರ ನೀಡಿದ್ರೂ ಅದಕ್ಕೆ ನ್ಯಾಯ ಒದಗಿಸುವಂತೆ ನಟಿಸುತ್ತಿದ್ದರು. ಅದು ಗ್ರಾಮದ ಹುಡುಗಿ, ಮಾಡರ್ನ್ ಹುಡುಗಿ, ವಯಸ್ಸಾದ ಪಾತ್ರವಾದರೂ ಸರಿ ಎಲ್ಲವನ್ನೂ ಅದ್ಭುತವಾಗಿ ನಿರ್ವಹಿಸುತ್ತಿದ್ದರು. ಅದ್ಭುತವಾಗಿ ನೃತ್ಯ ಕೂಡ ಮಾಡುತ್ತಿದ್ದರು. ಸಾಯಿ ಪಲ್ಲವಿ ಕೂಡ ಅಷ್ಟೇ ತಾವು ಮಾಡಿದ ಎಲ್ಲಾ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಬೆಸ್ಟ್ ಡ್ಯಾನ್ಸರ್ ಕೂಡ ಹೌದು.
ಸಾಯಿ ಪಲ್ಲವಿ ಮತ್ತು ಸೌಂದರ್ಯ ಇಬ್ಬರ ಮಾತುಗಳ ವಿಡಿಯೋಗಳನ್ನ ಒಮ್ಮೆ ನೋಡಿದ್ರೆ ಗೊತ್ತಾಗುತ್ತೆ ಇಬ್ಬರ ಮಾತಿನಲ್ಲೂ ಸಿಮಿಲಾರಿಟಿ ಇದೆ ಅನ್ನೋದು. ಹಿಂದೆ ಸೌಂದರ್ಯ ವಿವಿಧ ಭಾಷೆಗಳಲ್ಲಿನ ನಟನೆ ಬಗ್ಗೆ ಮಾತನಾಡುತ್ತಾ, ಯಾವ ಭಾಷೆಯಿಂದ ಒಳ್ಳೊಳ್ಳೊ ಅವಕಾಶಗಳು ಬರುತ್ತೋ, ಆ ಭಾಷೆಯಲ್ಲಿ ನಟಿಗೆ ಒಳ್ಳೆಯ ನಟಿಯಾಗಿ ಬೆಳೆಯೋದಕ್ಕೆ ಸಾಧ್ಯ ಎಂದು ಹೇಳಿದ್ದರು. ಅದೇ ರೀತಿ ಸಾಯಿ ಪಲ್ಲವಿ ಕೂಡ, ತಮಿಳಿನಲ್ಲೂ ಅವಕಾಶಗಳು ಬರುತ್ತೆ, ತೆಲುಗಿನಲ್ಲೂ ಅವಕಾಶಗಳು ಬರುತ್ತೆ. ಎಲ್ಲೆಲ್ಲಿ ಅವಕಾಶ ಸಿಗುತ್ತೋ ಅಲ್ಲಿ ಕೆಲಸ ಮಾಡ್ತೇನೆ ಅಂದಿದ್ದರು.
ಇನ್ನು ಫಿಲಂ ಫೇರ್ ಅವಾರ್ಡ್ ಗಳ (Film Fare Awards) ಬಗ್ಗೆ ಮಾತನಾಡೊದಾದರೆ ಸಾಯಿ ಪಲ್ಲವಿ ಮತ್ತು ಸೌಂದರ್ಯ ಇಬ್ಬರೂ ಕೂಡ ಕಡಿಮೆ ಅವಧಿಯಲ್ಲಿ 6 ಫಿಲಂ ಫೇರ್ ಪ್ರಶಸ್ತಿ ಗಳಿಸಿದ್ದರು ಅನ್ನೋದು ನಿಜಾ. ಸೌಂದರ್ಯ ಮತ್ತಷ್ಟು ಸಮಯ ಬದುಕಿದ್ದರೆ, ಆಕೆಗೆ ಇನ್ನೆಷ್ಟೋ ಪ್ರಶಸ್ತಿಗಳು ಮುಡಿಗೇರುತ್ತಿದ್ದವು. ಸೌಂದರ್ಯ ದ್ವೀಪ(ನಟಿ), ದ್ವೀಪ (ನಿರ್ಮಾಪಕಿ) ಅಮ್ಮೋರು, ಅಂತಪುರಂ, ಆಪ್ತಮಿತ್ರ, ರಾಜ, ಪಡೆದಿದ್ದರು. ಇನ್ನು ಸಾಯಿ ಪಲ್ಲವಿ ಪ್ರೇಮಂ, ಗಾರ್ಗಿ, ಫಿದಾ, ಲವ್ ಸ್ಟೋರಿ, ವಿರಾಟ ಪರ್ವಂ, ಶ್ಯಾಂ ಸಿಂಘ ರಾಯ್ ಸಿನಿಮಾಗಳಿಗಾಗಿ ಫಿಲಂಫೇರ್ ಪಡೆದಿದ್ದರು.
ಸಾಯಿ ಪಲ್ಲವಿ ಮತ್ತು ಸೌಂದರ್ಯ ಇಬ್ಬರೂ ಹೆಚ್ಚಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡದ್ದು ಸೀರೆಯಲ್ಲೇ ಅದೊಂದು ಹೋಲಿಕೆ ಇದ್ದೆ ಇದೆ, ಅಷ್ಟೇ ಅಲ್ಲ, ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಸಾಯಿ ಪಲ್ಲವಿ ನಟಿಸೋದು ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು, ಆದರೆ ಮತ್ತೆ ಸಿನಿಮಾದ ಬಗ್ಗೆ ಸುದ್ದಿ ಬರಲೇ ಇಲ್ಲ. ಮುಂದೆ ನಟಿಸ್ತಾರ ಕಾದು ನೋಡಬೇಕು.