ಈ ಹಿರಿಯ ನಟಿ ಕರೀನಾ ಚಿಕ್ಕಮ್ಮ, ಕಷ್ಟದಲ್ಲಿದ್ದಾಗ ನೆರವಿಗ್ಯಾರೂ ಬರಲಿಲ್ಲ
ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಫೇಮಸ್ ನಟಿಯಾಗಿದ್ದ ಸಾಧನ ಅವರ 79ನೇ ಹುಟ್ಟುಹಬ್ಬ ಇಂದು. ಸೆಪ್ಟೆಂಬರ್ 2, 1941ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಸಾಧನಾ ಶಿವದಾಸಾನಿ ಅವರು ಆ ಕಾಲದ ಸ್ಟಾರ್ ನಟಿ. ಸಂಬಂಧದಲ್ಲಿ ಕರೀನಾ ಮತ್ತು ಕರಿಷ್ಮಾರ ಚಿಕ್ಕಮ್ಮ. ವಾಸ್ತವವಾಗಿ, ಕರೀನಾರ ತಾಯಿ ಬಬಿತಾ ಮತ್ತು ಸಾಧನಾ ಕಸಿನ್ಸ್. ಅಂದ ಹಾಗೆ, ಸಾಧನಾರ ಯಶಸ್ಸಿನ ಹಿಂದೆ ಪ್ರಸಿದ್ಧ ನಿರ್ಮಾಪಕ ಸಶಾಧರ್ ಮುಖರ್ಜಿ ಕೈ ಇದೆ. ಮುಖರ್ಜಿರ 'ಲವ್ ಇನ್ ಶಿಮ್ಲಾ' ಸಿನಿಮಾ ಸಾಧನಾರನ್ನು ರಾತ್ರೋ ರಾತ್ರಿ ಸ್ಟಾರ್ ಆಗಿ ಮಾಡಿತು. ಅದೇ ಚಿತ್ರದಲ್ಲಿ, ಸಾಧನಾಳ ಹೇರ್‌ಸ್ಟೈಲ್ ಅವಳ ಹೆಸರಿನಲ್ಲಿಯೇ ಇವತ್ತಿಗೂ ಫೇಮಸ್. ಸಾಧಾನಾರ ಹೆಸರು ಅವರ ತಂದೆಯ ನೆಚ್ಚಿನ ನಟಿ ಮತ್ತು ನರ್ತಕಿ ಸಾಧನಾ ಬೋಸ್ ನೆನಪಿನಲ್ಲಿ ಇಡಲಾಗಿತ್ತು.

ಸಾಧನಾ ಮೊದಲ ಬಾರಿಗೆ 1955ರ ರಾಜ್ ಕಪೂರ್ ಚಿತ್ರ ಶ್ರೀ 420 ನಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಹಾಡು ಇಚಕ್ ದಾನಾ ಬಿಚಕ್ ದಾನಾದಲ್ಲಿದ್ದರು.

ರಾಜ್ ಕಪೂರ್‌ಗೆ ಈ ಚಿತ್ರಕ್ಕಾಗಿ ನರ್ಗಿಸ್ ಹಿಂದೆ ಕುಳಿತುಕೊಳ್ಳಲು ಕೆಲವು ಮಕ್ಕಳ ಅಗತ್ಯವಿತ್ತು. ಇದಕ್ಕಾಗಿ ಅವರು ಮಕ್ಕಳನ್ನು ವ್ಯವಸ್ಥೆ ಮಾಡಲು ಸೆಟ್‌ನಲ್ಲಿ ಹಾಜರಿದ್ದ ಜನರನ್ನು ಕೇಳಿದರು. ಅಲ್ಲಿ ಹಾಜರಿದ್ದ ಕೆಲವರು ಸಾಧನಾ ತಂದೆಗೆ ಪರಿಚಯವಿದ್ದರು. ಆದ್ದರಿಂದ ಅವರನ್ನೂ ಆ ಮಕ್ಕಳ ಜೊತೆ ಸೇರಿಸಲಾಯಿತು.

1958ರಲ್ಲಿ ಸಾಧನಾ ತಮ್ಮ ಚೊಚ್ಚಲ ಚಿತ್ರ ಅಬಾನಾಗೆ (ಸಿಂಧಿ) ಸಹಿ ಹಾಕಿದರು. ಈ ಚಿತ್ರಕ್ಕಾಗಿ ಅವರಿಗೆ ಕೇವಲ ಒಂದು ರೂಪಾಯಿ ಟೋಕನ್ ಅಮೌಂಟ್ ನೀಡಲಾಗಿತ್ತು.

ನಿರ್ಮಾಪಕ ಸಶಾಧರ್ ಮುಖರ್ಜಿ ತಮ್ಮ ಮಗ ಜಾಯ್ ಮುಖರ್ಜಿರನ್ನು ಲಾಂಚ್ ಮಾಡಲು ಬಯಸಿದ್ದರು. ಹೊಸ ಮುಖವನ್ನು ಹುಡುಕುತ್ತಿದ್ದರು. ಈ ಸಮಯದಲ್ಲಿ ಸಾಧನಾ ಅಬಾನಾ ಎಂಬ ಸಿಂಧಿ ಚಲನಚಿತ್ರವನ್ನು ಮಾಡಿದರು ಮತ್ತು ಅವರ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿದ ಸಶಾಧರ್ ತಮ್ಮ 'ಲವ್ ಇನ್ ಶಿಮ್ಲಾ' ಚಿತ್ರದಲ್ಲಿ ಸಾಧನಾರನ್ನು ಪರಿಚಯಿಸಿದರು.

ಸಾಧನದ ಪ್ರತಿಯೊಂದು ಸ್ಟೈಲ್ ಟ್ರೆಂಡ್ ಆಯಿತು. ಚೂಡಿದಾರ್ ಸಲ್ವಾರ್ ಫ್ಯಾಶನ್ ಆಯಿತು. ಅಷ್ಟೇ ಅಲ್ಲ, ಅವರ ಹೇರ್‌ಸ್ಟೈಲ್ ಕೂಡ ಸಖತ್ ಫೇಮಸ್ ಆಯಿತು.

ಸಾಧನಾ 'ಲವ್ ಇನ್ ಶಿಮ್ಲಾ' ಚಿತ್ರದ ನಿರ್ದೇಶಕ ರಾಮ್ ಕೃಷ್ಣ ನಯ್ಯರ್ ಅವರನ್ನು ವಿವಾಹವಾದರು. ಚಿತ್ರದ ಸೆಟ್‌ನಲ್ಲಿ ಇವರು ಭೇಟಿಯಾದರು. ಮದುವೆಯ ಸಮಯದಲ್ಲಿ ಸಾಧನಾಗೆ 16 ವರ್ಷ ಮತ್ತು ನಯ್ಯರ್‌ಗೆ 22 ವರ್ಷ. ಸಾಧನಾ ರ ಕುಟುಂಬ ಮದುವೆಗೆ ಸಿದ್ಧರಿರಲಿಲ್ಲ, ಆದರೆ ರಾಜ್ ಕಪೂರ್ ಸಹಾಯದಿಂದ ಇಬ್ಬರೂ ವಿವಾಹವಾದರು.

ಸಾಧನಾ ಅವರ ಪತಿ ನಾಯರ್ 1995 ರಲ್ಲಿ ನಿಧನರಾದರು. ಮಕ್ಕಳಿಲ್ಲದ ಸಾಧಾನಾ ಪತಿಯ ಮರಣದ ನಂತರ ಸಂಪೂರ್ಣವಾಗಿ ಒಂಟಿಯಾಗಿ, ಅನಾರೋಗ್ಯಕ್ಕೆ ಒಳಗಾದರು.

ಸಾಧನಾ ಥೈರಾಯ್ಡ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹೋಗಿದ್ದರು. ಹಿಂದಿರುಗಿದ ನಂತರ ಮತ್ತೆ ಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಅವರ ಮೊದಲ ಚಿತ್ರ ಇಂತ್ಕಾಮ್ ದೊಡ್ಡ ಹಿಟ್ ಆಯಿತು.

ನಿಧಾನವಾಗಿ, ಥೈರಾಯ್ಡ್ ಸಮಸ್ಯೆಗಳೂ ಹೆಚ್ಚಾದವು. ಒಮ್ಮೆ ಅವರು ಪಬ್ಲಿಕ್ ಈವೆಂಟ್ ಕಾರ್ಯಕ್ರಮಗಳು ಹಾಗೂ ಫೋಟೋ ತೆಗೆದುಕೊಳ್ಳುವುದನ್ನೂ ನಿಲ್ಲಿಸಿದರು.

ತನ್ನ ಕೊನೆಯ ದಿನಗಳಲ್ಲಿ, ಸಾಧನಾ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಕೊನೆಯ ದಿನಗಳಲ್ಲಿ ಆಶಾ ಭೋಸ್ಲೆಗೆ ಸೇರಿದ ಮುಂಬೈನ ಹಳೆಯ ಬಂಗಲೆಯಲ್ಲಿ ವಾಸಿಸುತ್ತಿದ್ದರು. 25 ಡಿಸೆಂಬರ್ 2015 ರಂದು ಸಾಧನಾ ಈ ಜಗತ್ತಿಗೆ ವಿದಾಯ ಹೇಳಿದರು.