Ram Charan ಆದಾಯದ ಮೂಲ ಬರೀ ಸಿನಿಮಾ ವಲ್ಲ, RRR ಸ್ಟಾರ್ networth ಎಷ್ಟು ಗೊತ್ತಾ?
ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ತೇಜಾಗೆ (Ram Charan) ಅವರಿಗೆ ಹುಟ್ಟುಹಬ್ಬದ ಸಂಭ್ರಮ.ಮಾರ್ಚ್ 27, 1985 ರಂದು ಚೆನೈನಲ್ಲಿ ಜನಿಸಿದ ರಾಮ್ ಚರಣ್ ಅವರಿಗೆ 37 ವರ್ಷ ತುಂಬಿದೆ
2007 ರಲ್ಲಿ 'ಚಿರುತ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಮ್ ಚರಣ್ ಅವರು 15 ವರ್ಷಗಳ ವೃತ್ತಿಜೀವನದಲ್ಲಿ ಅಷ್ಟೇ ಸಂಖ್ಯೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಹೊರತಾಗಿಯೂ, ರಾಮಚರಣ್ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ರಾಮ್ ಚರಣ್ ತೇಜಾ ಒಂದು ಚಿತ್ರಕ್ಕೆ ಸುಮಾರು 45 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. RRR ಸಿನಿಮಾಗೂ ಅದೇ ಮೊತ್ತವನ್ನು ಅವರಿಗೆ ನೀಡಲಾಗಿದೆ. ಸಿನಿಮಾಗಳ ಹೊರತಾಗಿ, ರಾಮ್ ಚರಣ್ ತೇಜಾ ಅವರ ಇತರ ಸಂಪಾದನೆಯ ಮೂಲಗಳು ಯಾವುದು ಗೊತ್ತಾ?
ಮಾಧ್ಯಮ ವರದಿಗಳ ಪ್ರಕಾರ, ರಾಮಚರಣ್ ತೇಜಾ ಸುಮಾರು $ 185 ಮಿಲಿಯನ್ ಅಂದರೆ 1387 ಕೋಟಿ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ. ಅವರ ಗಳಿಕೆಯ ಮೂಲ ಕೇವಲ ಚಲನಚಿತ್ರಗಳಿಂದ ಮಾತ್ರವಲ್ಲ, ಇತರ ಹಲವು ಮೂಲಗಳಿಂದ ಸಹ ಅವರು ಗಳಿಸುತ್ತಾರೆ.
ರಾಮ್ ಚರಣ್ ಅವರ ಇತರೆ ಆದಾಯದ ಮುಖ್ಯ ಮೂಲಗಳೆಂದರೆ ಪೋಲೋ ರೈಡಿಂಗ್ ಕ್ಲಬ್, ಒಬ್ಸ್ಟೆಕಲ್ ರನ್ನಿಂಗ್ ಸೀರೀಸ್, ಏರ್‌ಲೈನ್ ಕಂಪನಿ, ಡೆವಿಲ್ಸ್ ಸರ್ಕ್ಯೂಟ್ ಮತ್ತು ಕೊನಿಡೆಲಾ ಪ್ರೊಡಕ್ಷನ್ ಕಂಪನಿ. ಇದಲ್ಲದೇ ಮಾ ಟಿವಿಯಲ್ಲಿಯೂ ಪಾಲು ಹೊಂದಿದ್ದಾರೆ.
ರಾಮ್ ಚರಣ್ ಅವರು ವಿಮಾನಯಾನ ಕಂಪನಿ ಟ್ರೂಜೆಟ್‌ನ ನಿರ್ದೇಶಕರಾಗಿದ್ದಾರೆ. ಇದರ ಕೇಂದ್ರ ಕಛೇರಿ ಹೈದರಾಬಾದ್‌ನಲ್ಲಿದೆ. ದಕ್ಷಿಣದ ಹೊರತಾಗಿ, ಈ ವಿಮಾನಯಾನವು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ತನ್ನ ಸೇವೆಗಳನ್ನು ಒದಗಿಸುತ್ತದೆ. ತೇಜಾ ಅವರು 2013 ರಲ್ಲಿ ಇದನ್ನು ಪ್ರಾರಂಭಿಸಿದರು.
ಫೆಬ್ರವರಿ 2019 ರಲ್ಲಿ ಹೈದರಾಬಾದ್‌ನ ಐಷಾರಾಮಿ ಜುಬಿಲಿ ಹಿಲ್ಸ್‌ನಲ್ಲಿ ಹೊಸ ಬಂಗಲೆಯನ್ನು ಖರೀದಿಸಿದ್ದಾರೆ. ಆಗ ಅದರ ಬೆಲೆ 38 ಕೋಟಿ. ಅಂದಹಾಗೆ, ರಾಮ್ ಚರಣ್ ಈಗಾಗಲೇ 100 ಕೋಟಿಗೂ ಹೆಚ್ಚು ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.
ಚಲನಚಿತ್ರಗಳ ಹೊರತಾಗಿ, ರಾಮ್ ಚರಣ್ ಅನೇಕ ಬ್ರಾಂಡ್‌ಗಳನ್ನು ಜಾಹೀರಾತು ಮಾಡುತ್ತಾರೆ. ಇವುಗಳಲ್ಲಿ ಟಾಟಾ ಡೊಕೊಮೊ, ಪೆಪ್ಸಿ, ವೊಲಾನಾ ಮತ್ತು ಅಪೊಲೊ ಜಿಯೊ ಮುಂತಾದ ಕಂಪನಿಗಳು ಸೇರಿವೆ. ರಾಮಚರಣ್ ಅವರ ಬ್ರಾಂಡ್ ಎಂಡಾರ್ಸ್‌ಮೆಂಟ್ ಶುಲ್ಕ ಸುಮಾರು 2 ಕೋಟಿ ರೂ.
ರಾಮ್ ಹಲವು ಐಷಾರಾಮಿ ಕಾರುಗಳ ಒಡೆಯ. ಆಸ್ಟನ್ ಮಾರ್ಟಿನ್ (58 ಮಿಲಿಯನ್) ಹೊರತುಪಡಿಸಿ, ಅವರು ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್ (2.73 ಮಿಲಿಯನ್), ರೇಂಜ್ ರೋವರ್ ವೋಗ್ (35 ಮಿಲಿಯನ್), ಬಿಎಂಡಬ್ಲ್ಯು-7 (1.32 ಮಿಲಿಯನ್) ನಂತಹ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಈ ವಾಹನಗಳ ಬೆಲೆ 13 ಕೋಟಿಗೂ ಹೆಚ್ಚು.
ರಾಮ್ ಚರಣ್ ತೇಜ ಮೆಗಾ ಸ್ಟಾರ್ ಚಿರಂಜೀವಿ ಅವರ ಮಗ. ಅಪೋಲೋ ಆಸ್ಪತ್ರೆಗಳ ಕಾರ್ಯಕಾರಿ ಅಧ್ಯಕ್ಷ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಕಾಮಿನೇನಿ ಅವರನ್ನು ತೇಜ ಜೂನ್ 14, 2012 ರಂದು ವಿವಾಹವಾದರು. ಅಪೊಲೊ ಆಸ್ಪತ್ರೆಗಳು ದೇಶಾದ್ಯಂತ ಆಸ್ಪತ್ರೆಗಳನ್ನು ಹೊಂದಿವೆ.
ಚಿರುತ, 'ಮಗಧೀರ', 'ಆರೆಂಜ್', 'ನಾಯಕ್', 'ಯೇವಡು', ಧ್ರುವ, ರಂಗಸ್ಥಳಂ, ವಿನಯ್ ವಿಧೇಯ ರಾಮ ಮುಂತಾದ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಮ್ ಚರಣ್ ತೇಜಾ ಶೀಘ್ರದಲ್ಲೇ ಆಚಾರ್ಯ ಮತ್ತು ಆರ್‌ಸಿ 15 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.