ಆರ್‌ಜೆ, ನಟಿ, ನಿರೂಪಕಿ ಸಿರಿ ರವಿಕುಮಾರ್ ಮದುವೆ ಫೋಟೋ ವೈರಲ್
ಆರ್ ಜೆ, ನಿರೂಪಕಿ, ನಟಿ ಸಿರಿ ರವಿಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ. ಆದರೆ ತನ್ನ ಮದುವೆ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.

ಆರ್ ಜೆ, ನಿರೂಪಕಿ, ನಟಿ ಸಿರಿ ರವಿಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟಿರುವ ಸಿರಿ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ. ಆದರೆ ತನ್ನ ಮದುವೆ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.
ಸಿರಿ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೆಂಗಳೂರಿನ ಬನಶಂಕರಿ ಮೂಲದ ನಟಿ, ನಿರೂಪಕಿ ಸಿರಿ ರವಿಕುಮಾರ್ ಕೈಹಿಡಿದ ಹುಡುಗನ ಬಗ್ಗೆ ಹೆಚ್ಚು ಮಾಹಿತಿ ಇನ್ನು ಬಹಿರಂಗವಾಗಿಲ್ಲ.
ಗುಳಿ ಕೆನ್ನೆಯ ಸುಂದರಿ ಸಿರಿ ಮದುವೆಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಜೆರಿ ಸೀರಿಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಆರತಕ್ಷತೆ ಸಮಾರಂಭದಲ್ಲಿ ಮದುಮಗಳು ಸಿರಿ ಲೆಹಂಗದಲ್ಲಿ ಮಿಂಚಿದ್ದಾರೆ.
ಸಿರಿ ರವಿಕುಮಾರ್ ಆರ್ ಜೆ ಮತ್ತು ನಿರೂಪಣೆ ಮಾಡುವ ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2017 ರಲ್ಲಿ ’ಹ್ಯಾಪಿ ನ್ಯೂ ಇಯರ್’ ಹಾಗೂ ಬದ್ಮಾಶ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯ ಸಿರಿ ಸಕುಟುಂಬ ಸಮೇತ ಸಿನಿಮಾದಲ್ಲಿ ನಟಿಸಿದ್ದು ಈಗಾಗಲೇ ರಿಲೀಸ್ ಆಗಿದೆ.
ಇನ್ನು ಕಿರುತೆರೆಯಲ್ಲೂ ಸಿರಿ ಖ್ಯಾತಿ ಗಳಿಸಿದ್ದಾರೆ. ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಸಿರಿ ಕಿರುತೆರೆ ಪಯಣ ಪ್ರಾರಂಭಸಿದರು. ಈ ಶೋ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು.
ಇನ್ನು ಸಂಗೀತ ಹಾಗೂ ನಾಟಕ ಎಂದರೇ ಸಿರಿ ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ. ಹಲವಾರು ನಾಟಕಗಳಲ್ಲಿಯೂ ಸಿರಿ ನಟಿಸಿದ್ದಾರೆ. ಸದ್ಯ ಸಕುಟುಂಬ ಸಮೇತ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.