- Home
- Entertainment
- Cine World
- ದೈವವನ್ನು ರಣವೀರ್ ಸಿಂಗ್ ಮಿಮಿಕ್ರಿ ಮಾಡಿದ್ದು ಸರಿ ಅನಿಸಲಿಲ್ಲ: ಕೊನೆಗೂ ಮೌನ ಮುರಿದ ರಿಷಬ್ ಶೆಟ್ಟಿ
ದೈವವನ್ನು ರಣವೀರ್ ಸಿಂಗ್ ಮಿಮಿಕ್ರಿ ಮಾಡಿದ್ದು ಸರಿ ಅನಿಸಲಿಲ್ಲ: ಕೊನೆಗೂ ಮೌನ ಮುರಿದ ರಿಷಬ್ ಶೆಟ್ಟಿ
ಕಾಂತಾರ ಚಾಪ್ಟರ್ 1ರಲ್ಲಿ ಬರುವ ದೈವದ ಅಂಶ ಅತಿ ಸೂಕ್ಷ್ಮ ಹಾಗೂ ಪವಿತ್ರ. ಅದನ್ನು ಅನುಕರಿಸಬೇಡಿ ಎಂದು ಎಲ್ಲೇ ಹೋದರೂ ಹೇಳುತ್ತೇನೆ. ಆದರೂ ನಟ ರಣವೀರ್ ಸಿಂಗ್ ದೈವವನ್ನು ಮಿಮಿಕ್ರಿ ಮಾಡಿದ್ದು ಸರಿ ಅನಿಸಲಿಲ್ಲ. ಮುಜುಗರ ತರಿಸಿತು ಅಂತಾರೆ ರಿಷಬ್ ಶೆಟ್ಟಿ.

ಮುಜುಗರ ತರಿಸಿತು
ಅಂತಾರಾಷ್ಟ್ರೀಯ ಸಿನಿಮೋತ್ಸವವೊಂದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ದೈವವನ್ನು ಮಿಮಿಕ್ರಿ ಮಾಡಿದ್ದು ಸರಿ ಅನಿಸಲಿಲ್ಲ, ಮುಜುಗರ ತರಿಸಿತು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ದೈವದ ಅಂಶ ಹೆಚ್ಚು ಸೂಕ್ಷ್ಮ
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾಂತಾರ ಚಾಪ್ಟರ್ 1 ಸಿನಿಮಾದ ಅನೇಕ ಭಾಗಗಳಲ್ಲಿ ಬೇರೆ ಬೇರೆ ಬಗೆಯ ಅಭಿನಯ, ಕಥನಗಳಿವೆ. ಆದರೆ ಕೆಲವೇ ದೃಶ್ಯಗಳಲ್ಲಿ ಬರುವ ದೈವದ ಅಂಶ ಹೆಚ್ಚು ಸೂಕ್ಷ್ಮವಾಗಿದೆ ಮತ್ತು ಪವಿತ್ರವಾಗಿದೆ.
ಅದನ್ನು ಅನುಕರಣೆ ಮಾಡಬೇಡಿ
ದಯಮಾಡಿ ಅದನ್ನು ಅನುಕರಣೆ ಮಾಡಬೇಡಿ ಎಂದು ನಾನು ಎಲ್ಲೇ ಹೋದರೂ ಜನರಲ್ಲಿ ವಿನಂತಿಸುತ್ತೇನೆ. ಏಕೆಂದರೆ ದೈವದ ಕುರಿತಾದ ಭಕ್ತಿ ಪ್ರೀತಿ ನಮ್ಮೆಲ್ಲರೊಳಗೆ ಆಳವಾಗಿ ಬೇರೂರಿದೆ. ಈ ಬಗೆಯ ಅನುಕರಣೆ ಆ ಭಾವನೆಯನ್ನು ನೋಯಿಸುತ್ತದೆ ಎಂದಿದ್ದಾರೆ.
ವೇದಿಕೆ ಮೇಲೆ ಪ್ರದರ್ಶನ
ಪಾಪ್ ಕಲ್ಚರ್ನಲ್ಲಿ ಹೇಗಾಗಿ ಬಿಡುತ್ತದೆ ಎಂದರೆ, ಸಿನಿಮಾನಲ್ಲಿ ತೋರಿಸಲಾಗಿದೆ ಎಂದ ಕೂಡಲೇ ಅದನ್ನು ಅನುಕರಣೆ ಮಾಡುವುದು, ವೇದಿಕೆಗೆ ತೆಗೆದುಕೊಂಡು ಹೋಗುವುದು, ವೇದಿಕೆ ಮೇಲೆ ಪ್ರದರ್ಶನ ಮಾಡುವುದು.
ನಮ್ಮ ನಂಬಿಕೆ
ರೀಲ್ಸ್ ಮಾಡುವುದು, ಅನುಕರಣೆ ಮಾಡುವುದು, ಅವಹೇಳನ ಮಾಡುವುದು ಮಾಡಲಾಗುತ್ತದೆ. ಅದು ನನಗೆ ಬೇಸರ ಮೂಡಿಸುತ್ತವೆ. ಏಕೆಂದರೆ ಅದು ಕೇವಲ ಸಿನಿಮಾ ಮಾತ್ರವಲ್ಲ, ನಮ್ಮ ನಂಬಿಕೆ ಸಹ ಎಂದರು.
ನೇಮ ಮಾಡಿ ಸಿನಿಮಾ ಮಾಡಿದ್ದೇವೆ
ಜೊತೆಗೆ ನಾವು ಸಿನಿಮಾ ಮಾಡಬೇಕಾದರೂ ಸಹ ಹಿರಿಯರನ್ನು, ದೈವದ ಬಗ್ಗೆ ಜ್ಞಾನಿಗಳನ್ನು ಆಹ್ವಾನಿಸಿ, ಅವರೊಂದಿಗೆ ಪ್ರತಿ ಹೆಜ್ಜೆಯನ್ನೂ ಚರ್ಚಿಸಿ, ದೈವಕ್ಕೆ, ಆಚರಣೆಗೆ, ನಂಬಿಕೆಗೆ ಎಲ್ಲೂ ಮುಕ್ಕಾಗದ ರೀತಿಯಲ್ಲಿ ನೇಮ ಮಾಡಿ ಸಿನಿಮಾ ಮಾಡಿದ್ದೇವೆ ಎಂದು ರಿಷಬ್ ಶೆಟ್ಟಿ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

