ಬರೀ ಫ್ಲಾಪ್‌ ಸಿನಿಮಾ ಮಾಡಿದ ರಿಯಾಗೆ ಮುಂಬೈನಲ್ಲಿದೆ 2 ಲಕ್ಷುರಿ ಬಂಗಲೆ

First Published 9, Aug 2020, 6:05 PM

ಜುಲೈ 14ರಂದು ಸುಶಾಂತ್ ಸಿಂಗ್ ರಜಪೂತ್‌ರ ಅನುಮಾನಾಸ್ಪದ ಸಾವಿನ ನಂತರ ರಿಯಾ ಚಕ್ರವರ್ತಿ ಹೆಸರು ಚರ್ಚೆಯಲ್ಲಿದೆ. ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದ ವಿರುದ್ಧ ಸುಶಾಂತ್ ಅವರ ತಂದೆ ಪಾಟ್ನಾದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅಂದಿನಿಂದ, ಮುಂಬೈ ಪೊಲೀಸರ ಹೊರತಾಗಿ, ಬಿಹಾರ ಪೊಲೀಸರ ಎಸ್‌ಐಟಿ, ಇಡಿ ಮತ್ತು ಸಿಬಿಐ ತನಿಖೆ ಆರಂಭಿಸಿವೆ. ಅಂದಹಾಗೆ, ರಿಯಾ ಚಕ್ರವರ್ತಿ ಕೆಲವೇ ಸಿನಿಮಾಗಳಲ್ಲಿ ಮಾಡಿದ್ದರೂ ಅವರು ಮುಂಬೈನಲ್ಲಿ ಕೋಟಿಗಟ್ಟಲೆ ಮೌಲ್ಯದ ಎರಡು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ.

1992 ರ ಜುಲೈ 1 ರಂದು ಬೆಂಗಳೂರಿನಲ್ಲಿ ಜನಿಸಿದ ರಿಯಾ 2012 ರ ತೆಲುಗು ಚಿತ್ರ 'ಟುನಿಗಾ ಟುನಿಗಾ' ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದರು. ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ ಬಂಗಾಳಿ ಹಾಗೂ ತಾಯಿ ಸಂಧ್ಯಾ ಕೊಂಕಣಿ ಮೂಲದವರು.

ರಿಯಾ ತಂದೆ ಸೈನ್ಯದಲ್ಲಿ ವೈದ್ಯರಾಗಿದ್ದರೆ, ತಾಯಿ ಗೃಹಿಣಿ. ರಿಯಾ ಅಂಬಾಲಾ ಕ್ಯಾಂಟ್‌ನ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು. ರಿಯಾ ಅವರಿಗೆ ಶೋವಿಕ್ ಎಂಬ ಸಹೋದರನೂ ಇದ್ದಾನೆ. ಈ ನಾಲ್ವರ ಮೇಲೆ ಸುಶಾಂತ್ ತಂದೆ ಆತ್ಮಹತ್ಯೆಗೆ ಪ್ರೇರಣೆಯ ಪ್ರಕರಣ ದಾಖಲಿಸಿದ್ದಾರೆ.

ಅಂದಹಾಗೆ, ರಿಯಾ ವೃತ್ತಿಜೀವನ 2009 ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಟೀನ್ ದಿವಾದಲ್ಲಿ ಭಾಗವಹಿಸಿ ಮೊದಲ ರನ್ನರ್ ಅಪ್ ಆಗುವ ಮೂಲಕ ಪ್ರಾರಂಭವಾಯಿತು. ನಂತರ ದೆಹಲಿಯಲ್ಲಿ ಎಂಟಿವಿಯ ವಿಡಿಯೋ ಜಾಕಿ ಆಡಿಷನ್‌ನಲ್ಲಿ ಆಯ್ಕೆಯಾದರು.

ವಿಜೆ ಆಗಿದ್ದಾಗ 'ಎಂಟಿವಿ ವಾಸಪ್', 'ಕಾಲೇಜ್ ಬೀಟ್' ಮತ್ತು 'ಟಿಕೆಟಾಕ್' ನಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ರಿಯಾ ಟಿವಿ ಕಾರ್ಯಕ್ರಮವೊಂದನ್ನು ಆಯೋಜಿಸಿದ ನಂತರ ನಟಿಸುವ ಬಗ್ಗೆ ಯೋಚಿಸಿದರು. ಆದರೆ, ಈ ಸಮಯದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು.

ಎಂಜಿನಿಯರಿಂಗ್‌ ಕೈಬಿಟ್ಟು 2012 ರಲ್ಲಿ ತೆಲುಗು ಚಿತ್ರ 'ಟುನಿಗಾ ಟುನಿಗಾ' ಮೂಲಕ ನಟನಾ ಕ್ಷೇತ್ರಕ್ಕೆ ಬಂದರು.

ನಂತರ 2013 ರಲ್ಲಿ ಬಾಲಿವುಡ್ ಚಿತ್ರ ಮೇರೆ ಡ್ಯಾಡ್ ಕಿ ಮಾರುತಿ ಚಿತ್ರದಲ್ಲಿ ನಟಿಸಿದರು. ಚಿತ್ರ ಫ್ಲಾಪ್‌ ಆಯಿತು.

2014 ರಲ್ಲಿ ಮೂರನೇ ಚಿತ್ರ ಸೋನಾಲಿ ಕೇಬಲ್ ಕೂಡ ಸೂಪರ್ ಫ್ಲಾಪ್ ಆದಾಗ ರಿಯಾಗೆ ಸತತ 3 ವರ್ಷಗಳವರೆಗೆ ಯಾವುದೇ ಕೆಲಸ ಸಿಗಲಿಲ್ಲ.

ನಂತರ 2017 ರಲ್ಲಿ, 'ಹಾಫ್ ಗರ್ಲ್ಫ್ರೆಂಡ್' ಮತ್ತು 'ದುಬರಾ: ಸೀ ಯುವರ್ ಇವಿಲ್' ಚಿತ್ರಗಳಲ್ಲಿ ಸಣ್ಣ ಪಾತ್ರ ದೊರೆಯಿತು. ಆದರೆ ಈ ಚಿತ್ರಗಳು ಅಂತಹ ಹೆಸರೇನು ಮಾಡಲಿಲ್ಲ. ಇದರ ನಂತರ  2017 ರಲ್ಲಿ 'ಬ್ಯಾಂಕ್ ಚೋರ್' ಮತ್ತು 2018 ರಲ್ಲಿ 'ಜಲೇಬಿ' ಚಿತ್ರದಲ್ಲಿ ಪ್ರಮುಖ ನಟಿ ಪಾತ್ರ ಸಿಕ್ಕಿತು, ಆದರೆ ಆ ಚಿತ್ರಗಳೂ ನೆಲ ಕಚ್ಚಿದವು.

ರಿಯಾ ಕಳೆದ 8 ವರ್ಷಗಳಲ್ಲಿ (2012 ರಿಂದ 2020 ರವರೆಗೆ) ಒಟ್ಟು 7 ಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಅವರ ಒಂದು ಚಿತ್ರ ಕೂಡ ಯಶಸ್ವಿಯಾಗಲಿಲ್ಲ. ಆದರೆ, ಕಳೆದ ಎರಡು ವರ್ಷಗಳ ರಿಯಾ ಅವರ ಆದಾಯ ತೆರಿಗೆ ರಿಟರ್ನ್ಸ್ ನೋಡಿದರೆ, ಅವರ ವಾರ್ಷಿಕ ಗಳಿಕೆ ಸುಮಾರು 14 ಲಕ್ಷ ರೂ.

ಅವರು ಮುಂಬೈನಲ್ಲಿ  ಕೋಟಿಗಟ್ಟಲೆಯ ಎರಡು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಪ್ರಸ್ತುತ  ಈ ಆಸ್ತಿಯನ್ನು ನಟಿ ಹೇಗೆ ಸಂಪಾದಿಸಿದರು ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಈ ಬಗ್ಗೆ ತನಿಖೆ ನಡೆಸುತ್ತಿದೆ. ರಿಯಾ  ಸುಶಾಂತ್‌ನಿಂದ ಸಹ 15 ಕೋಟಿ ರೂ ಕಬಳಿಸಿದ ಅರೋಪ ಎದುರಿಸುತ್ತಿದ್ದಾರೆ.

loader