- Home
- Entertainment
- Cine World
- ಮೈತ್ರಿ ಮೂವೀ ಮೇಕರ್ಸ್‌ನ ಹೊಸ ಪ್ರಯೋಗ: ಟಾಲಿವುಡ್‌ನಲ್ಲಿ ಉಪೇಂದ್ರಗೆ ವಿಶಿಷ್ಟ ಪಾತ್ರ!
ಮೈತ್ರಿ ಮೂವೀ ಮೇಕರ್ಸ್‌ನ ಹೊಸ ಪ್ರಯೋಗ: ಟಾಲಿವುಡ್‌ನಲ್ಲಿ ಉಪೇಂದ್ರಗೆ ವಿಶಿಷ್ಟ ಪಾತ್ರ!
ಸ್ಯಾಂಡಲ್‌ವುಡ್‌ನ ಉಪೇಂದ್ರ ಅವರು ತೆಲುಗಿನ ರಾಮ್ ಪೋತಿನೇನಿ ನಟನೆಯ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ತೆಲುಗಿನ ರಾಮ್ ಪೋತಿನೇನಿ ನಟನೆಯ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಉಪೇಂದ್ರ ಅವರು ಸೂರ್ಯ ಕುಮಾರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಅಂದನಿವಾಡು ... ಅಂದರಿವಾಡು... ಮನ ಸೂರ್ಯ ಕುಮಾರ್’ ಎನ್ನುವ ಟ್ಯಾಗ್‌ಲೈನ್ ಜತೆಗೆ ಬಿಡುಗಡೆ ಆಗಿರುವ ಈ ಫಸ್ಟ್ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಈ ಚಿತ್ರವನ್ನು ಮಹೇಶ್ ಬಾಬು ಪಿ ನಿರ್ದೇಶಿಸುತ್ತಿದ್ದಾರೆ. ಭಾಗ್ಯಶ್ರೀ ಬೋರ್ಸೆ ಈ ಚಿತ್ರದ ನಾಯಕಿ. ಮೇ 15ಕ್ಕೆ ಚಿತ್ರದ ಶೀರ್ಷಿಕೆ ಅನಾವರಣವಾಗಲಿದೆ.
ಅಲ್ಲು ಅರ್ಜುನ್ ಅಭಿನಯದ 'ಸನ್ ಆಫ್ ಸತ್ಯಮೂರ್ತಿ' ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಉಪ್ಪಿ, ಇದೀಗ ಮತ್ತೆ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಟಿಸುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಉಪೇಂದ್ರ ಅಭಿನಯದ ಈ ಚಿತ್ರಕ್ಕೆ RAPO22 ಅನ್ನುವ ಟೈಟಲ್ ಇದೆ. RAPO22 ಅಂದ್ರೆ, ರಾಮ್ ಪೋತಿನೆನಿ ಅವರ 22ನೇ ಸಿನಿಮಾ ಅಂತಲೇ ಅರ್ಥ ಇದೆ ಎಂದು ತಿಳಿದು ಬಂದಿದೆ.