ಅಕ್ಷಯ್‌ - ರೇಖಾ ಲಿಂಕ್‌ ಅಪ್‌ ಸುದ್ದಿ ಕೇಳಿ ರವೀನಾ ಮಾಡಿದ್ದೇನು?

First Published 12, Jul 2020, 10:58 AM

ಬಾಲಿವುಡ್‌ನ ಸ್ಟಾರ್‌ ನಟರಲ್ಲಿ ಒಬ್ಬರು ಅಕ್ಷಯ್‌ ಕುಮಾರ್‌. ಹಲವು ಹಿಟ್‌ ಚಿತ್ರಗಳ ಜೊತೆ ಸಾಮಾಜಿಕ ಮೌಲ್ಯಗಳನ್ನು ಹೊಂದಿರುವ ಸಿನಿಮಾಗಳನ್ನೂ ಮಾಡಿ, ದೊಡ್ಡ ಫ್ಯಾನ್ಸ್‌ ಕ್ಲಬ್‌ ಹೊಂದಿದ್ದಾರೆ. ಹಲವು ಸಂದರ್ಭಗಳಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುವುದರಲ್ಲೂ ಫೇಮಸ್. ಹಾಗೆ ಸಹನಟಿಯರ ಜೊತೆ ಈ ನಟನ ಲಿಂಕ್‌ಅಪ್‌ಗಳಿಗೇನೂ ಕೊರತೆ ಇಲ್ಲ. ಅದರಲ್ಲಿ ರವೀನಾ ಟಂಡನ್‌ ಕೂಡ ಒಬ್ಬರೂ ಹಾಗೂ ಇವರ ಲವ್‌ಸ್ಟೋರಿ ಸಖತ್‌ ಸೌಂಡ್‌ ಮಾಡಿತ್ತು ಬಿ ಟೌನ್‌ನಲ್ಲಿ.

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈರಂತೆಯೇ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಸಂಬಂಧ ಬಾಲಿವುಡ್‌ನ ಫೇಮಸ್‌ ಪ್ರೇಮಕಥೆಗಳಲ್ಲಿ ಒಂದು.

1994 ರ ಆ್ಯಕ್ಷನ್ ಥ್ರಿಲ್ಲರ್ ಹಿಟ್‌ ಸಿನಿಮಾ ಮೊಹ್ರಾದ ಶೂಟಿಂಗ್ ಸಮಯದಲ್ಲಿ ಅವರ ಪ್ರಣಯ ಸಂಬಂಧ ಪ್ರಾರಂಭವಾಯಿತು. ಇಬ್ಬರೂ ಒಟ್ಟಿಗೆ ಸಾಕಷ್ಟು ಚಲನಚಿತ್ರಗಳನ್ನು ಮಾಡಿದರು, ಜೊತೆಜೊತೆಗೆ  ಪ್ರೀತಿಯೂ ಬೆಳೆಯಿತು.

ನಂತರ, ರೇಖಾ ಹಾಗೂ ಅಕ್ಷಯ್‌ ಲಿಂಕ್‌ಅಪ್‌ ಸುದ್ದಿ ಉದ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದಾಗ, ರವೀನಾ  ಅಕ್ಷಯ್ ರಿಲೆಷನ್‌ಶಿಪ್‌ ಹದಗೆಡುವ ಹಂತಕ್ಕೆ ಹೋಯಿತು. ಆಗ  ರವೀನಾ ಅಕ್ಷಾಯ್‌ನಿಂದ ದೂರವಿರಲು ರೇಖಾಳಿಗೆ ಹೇಳಿದ್ದಳಂತೆ.

ಅಕ್ಷಯ್ ಮತ್ತು ರೇಖಾ ಸಂಬಂಧ 1996ರ ಚಲನಚಿತ್ರ ಖಿಲಾಡಿಯನ್ ಕಾ ಖಿಲಾಡಿ ಚಿತ್ರದ ಶೂಟಿಂಗ್ ಸಮಯದಲ್ಲಿ ಬೆಳೆಯಲು ಪ್ರಾರಂಭಿಸಿತು. ಶೀಘ್ರದಲ್ಲೇ, ಅವರ ರೊಮ್ಯಾನ್ಸ್‌ ಇಂಡಸ್ಟ್ರಿಯಲ್ಲಿ ಕಾಡ್ಗಿಚ್ಚಿನಂತೆ ಹರಡಲು ಪ್ರಾರಂಭಿಸಿತು, ಇದು ರವೀನಾಳಲ್ಲಿ ಸಾಕಷ್ಟು ಅಸುರಕ್ಷಿತ ಭಾವನೆ ಮೂಡಿಸಿತು.

ತನ್ನೊಂದಿಗೆ ಸಂಬಂಧ ಹೊಂದಿದ್ದಾನೆಂದು ತಿಳಿದೂ ಅಕ್ಷಯ್‌ನನ್ನು ರೇಖಾ ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆಂದು ಆರೋಪಿಸಿದ್ದರು ರವೀನಾ.

ರೆಡಿಫ್ ಡಾಟ್ ಕಾಮ್‌ಗೆ ನೀಡಿದ ಹಳೆ ಸಂದರ್ಶನದಲ್ಲಿ ರವೀನಾ, 'ಅಕ್ಷಯ್‌ಗೆ ರೇಖಾ ಜೊತೆ ಯಾವುದೇ ಸಂಬಂಧವಿದೆ ಎಂದು ನಾನು ಭಾವಿಸುವುದಿಲ್ಲ. ವಾಸ್ತವವಾಗಿ, ಅವನು ಅವಳಿಂದ ಓಡಿ ಹೋಗುತ್ತಾನೆ. ಅಕ್ಷಯ್ ಚಿತ್ರದ ಕಾರಣದಿಂದಾಗಿ ರೇಖಾಳನ್ನು ಸಹಿಸಿಕೊಂಡನು. ಒಂದು ಟೈಮ್‌ನಲ್ಲಿ  ಅವಳು ಮನೆಯಿಂದ ಅವನಿಗೆ ಊಟದ ಡಬ್ಬಗಳನ್ನು ತರಲು ಬಯಸುತ್ತಿದ್ದಳು. ಆ ಸಮಯದಲ್ಲಿ ನಾನು ಇಂಟರ್‌ಫಿಯರ್‌ ಆದೆ. ಅದು ಸ್ವಲ್ಪ ದೂರ ಸಾಗುತ್ತಿದೆ ಎಂದು ನಾನು ಭಾವಿಸಿದೆ' ಹೇಳಿದ್ದರು,

ಸಿನಿ ಬ್ಲಿಟ್ಜ್ ಜೊತೆಯ ಮತ್ತೊಂದು ಸಂದರ್ಶನದಲ್ಲಿ, ಆಕೆಯ ಮಿತಿಗಳ ಬಗ್ಗೆ ರೇಖಾಗೆ ಸಹ ಹೇಳುತ್ತೇನೆ ಎಂದು ಹೇಳಿದ್ದರು ರವೀನಾ. 'ನಾವು ಒಟ್ಟಿಗೆ ಇದ್ದೇವೆ ಎಂದು ಈ ನಟಿಗೆ ತಿಳಿದಿದ್ದರೂ ಅಕ್ಷಯ್‌ಗೆ ಹತ್ತಿರವಾಗುತ್ತಿದ್ದಾಳೆ, ನಾನು ಅವಳನ್ನು ಕಂಟ್ರೋಲ್‌ ಮಾಡುತ್ತೇನೆ. ಆದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಅಕ್ಷಯ್‌ಗೆ ತಿಳಿದಿದೆ, ಎಂದು ಕೊಳ್ಳುತ್ತೇನೆ,' ಎಂದು ಅವರು ಹೇಳಿದ್ದಾರೆ.

ಕೊನೆಗೆ ಅಕ್ಷಯ್ ಮತ್ತು ರೇಖಾ ಯಾವುದೇ ಸಂಬಂಧ ಹೊಂದಲಿಲ್ಲ. ಅಕ್ಷಯ್ ಇನ್ನೊಬ್ಬ ನಟಿ ಶಿಲ್ಪಾ ಶೆಟ್ಟಿಗೆ ಕ್ಲೋಸ್‌ ಆಗಿದ್ದು, ರವೀನಾಳ ಚಿಂತೆಗೆ ಕಾರಣವಾಗಿತ್ತು.

ಅಕ್ಷಯ್ ನಂತರ ಶಿಲ್ಪಾ ಶೆಟ್ಟಿಗಾಗಿ ರವೀನಾಗೆ ಮೋಸ ಮಾಡಿದನು ಮತ್ತು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿ ಶಿಲ್ಪಾಳಿಂದಲೂ ದೂರವಾದ.

ಅಂತಿಮವಾಗಿ ಟ್ವಿಂಕಲ್ ಖನ್ನಾಳನ್ನು ಮದುವೆಯಾದ ಅಕ್ಷಯ್‌ ಕುಮಾರ್‌.

loader