Rashmika To Samantha: ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು!
ಪುಷ್ಪಾ (Pushpa) ಬೃಹತ್ ಯಶಸ್ಸಿನ ನಂತರ, ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಂಭಾವನೆ ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಸಮಂತಾ ರುತ್ ಪ್ರಭು (Samantha Ruth Prabhu) ಕಾಜಲ್ ಅಗರ್ವಾಲ್ (Kajal Agaarwal), ಶ್ರುತಿ ಹಾಸನ್ (Shruti Hassan) ಅವರನ್ನು ಹಿಂದೆ ತಳ್ಳಿದ್ದಾರೆ. ದಕ್ಷಿಣ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಇಲ್ಲಿದ್ದಾರೆ ನೋಡಿ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ - ಭಾಗ 1 2021 ರ ಅತಿದೊಡ್ಡ ಹಿಟ್ ಮತ್ತು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಈ ಸಿನಿಮಾ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ಸ್ಟ್ರೀಮ್ ಆಗುತ್ತಿದೆ. ಚಿತ್ರದ ಯಶಸ್ಸಿನ ನಂತರ, ಪುಷ್ಪಾ ಚಿತ್ರದ ನಾಯಕಿ ರಶ್ಮಿಕಾ, ಎರಡನೇ ಭಾಗದ ಶುಲ್ಕವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ರಶ್ಮಿಕಾ ಮಂದಣ್ಣ: ಸುದ್ದಿಯ ಪ್ರಕಾರ, ಪುಷ್ಪಾ ನಿರ್ಮಾಪಕರು ರಶ್ಮಿಕಾಗೆ 1 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲು ಸಿದ್ಧರಿದ್ದಾರೆ. ಪುಷ್ಪಾ ಭಾಗ ಒಂದಕ್ಕೆ, ರಶ್ಮಿಕಾ 2 ಕೋಟಿ ರೂಪಾಯಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ವರದಿಗಳು ನಿಜವಾದಲ್ಲಿ ರಶ್ಮಿಕಾ ಅವರು ಮುಂದಿನ ಭಾಗಕ್ಕೆ 3 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.
ಸಮಂತಾ ರುತ್ ಪ್ರಭು: ವರದಿಯ ಪ್ರಕಾರ ಸಮಂತಾ ರುತ್ ಪ್ರಭು ಚಿತ್ರವೊಂದಕ್ಕೆ 2 ಕೋಟಿ ರೂ ಚಾರ್ಜ್ ಮಾಡುತ್ತಾರೆ. ದಿ ಫ್ಯಾಮಿಲಿ ಮ್ಯಾನ್ 2 ನಂತರ, ಸಮಂತಾ ರುತ್ ಪ್ರಭು ಪ್ಯಾನ್-ಇಂಡಿಯಾ ತಾರೆಯಾಗಿದ್ದಾರೆ ಮತ್ತು ಅನೇಕ ಬಾಲಿವುಡ್ ಚಿತ್ರಗಳ ಆಫರ್ ಸಹ ಪಡೆದಿದ್ದಾರೆ. ಅವರು ಡೌನ್ಟನ್ ಅಬ್ಬೆ ನಿರ್ದೇಶಕ ಫಿಲಿಪ್ ಜಾನ್, ಅರೇಂಜ್ಮೆಂಟ್ಸ್ ಆಫ್ ಲವ್ ಫಿಲ್ಮಂಗಾಗಿ ಹಾಲಿವುಡ್ ಸಿನಿಮಾಕ್ಕೂ ಸಹಿ ಹಾಕಿದ್ದಾರೆ, ಅಲ್ಲಿ ಸಮಂತಾ ದ್ವಿಲಿಂಗಿ ಪಾತ್ರವನ್ನು ನಿರ್ವಹಿಸಲಿದ್ದಾರೆ.
ರಾಕುಲ್ ಪ್ರೀತ್ ಸಿಂಗ್: ರಾಕುಲ್ ಪ್ರೀತ್ ಸಿಂಗ್ ಪ್ರತಿ ಚಿತ್ರಕ್ಕೆ 1.5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ, ರಾಕುಲ್ ಮತ್ತು ನಟ-ನಿರ್ಮಾಪಕ ಜಾಕಿ ಭಗ್ನಾನಿ ತಮ್ಮ ಸಂಬಂಧವನ್ನು Instagram ಮೂಲಕ ಅಧಿಕೃತಗೊಳಿಸಿದರು.
ಶ್ರುತಿ ಹಾಸನ್: ಶ್ರುತಿ ಹಾಸನ್ 1.7 ಕೋಟಿ ರೂ ಫೀಸ್ ಪಡೆಯುತ್ತಾರೆ. ಪ್ರಸ್ತುತ ಈ ನಟಿ 2014 ರ ಡೂಡಲ್ ಆರ್ಟ್ ಸ್ಪರ್ಧೆಯಲ್ಲಿ ಅತ್ಯುತ್ತಮ ಡೂಡಲ್ ಕಲಾವಿದ ಪ್ರಶಸ್ತಿಯನ್ನು ಗೆದ್ದ ಸಂತಾನು ಹಜಾರಿಕಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ತಮನ್ನಾ: ತಮನ್ನಾ ಅವರು ಪ್ರತಿ ಚಿತ್ರಕ್ಕೆ 1 ರಿಂದ 1.3 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಇತ್ತೀಚೆಗೆ ಸೀತಿಮಾರ್ ಸಿನಿಮಾದಲ್ಲಿ ಗೋಪಿಚಂದ್ ಅವರೊಂದಿಗೆ ಕಾಣಿಸಿಕೊಂಡರು ಮತ್ತು ಪ್ರಸ್ತುತ ರಿತೇಶ್ ದೇಶಮುಖ್ ಅವರೊಂದಿಗೆ ಪ್ಲಾನ್ ಎ ಪ್ಲಾನ್ ಬಿ ಎಂಬ ವೆಬ್ ಸರಣಿಯಲ್ಲಿ ನಿರತರಾಗಿದ್ದಾರೆ.
ಕಾಜಲ್ ಅಗರ್ವಾಲ್: ಒಂದು ಸಿನಿಮಾಕ್ಕೆ ಕಾಜಲ್ ಅಗರ್ವಾಲ್ ಪಡೆಯುವ ಸಂಭಾವನೆ 1.8 ಕೋಟಿ ರೂ. ಇತ್ತೀಚಿನ ದಿನಗಳಲ್ಲಿ, ಅವರು ತನ್ನ ಪ್ರೆಗ್ನೆಂಸಿಯ ಕಡೆ ಗಮನಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 1 ರಂದು ಕಾಜಲ್ ಅವರ ಪತಿ ಗೌತಮ್ ಕಿಚ್ಲು ಅವರು ತಾವು ಪೋಷಕರಾಗುತ್ತಿರುವ ವಿಷಯವನ್ನು ಘೋಷಿಸಿದ್ದರು.
ಅನುಷ್ಕಾ ಶೆಟ್ಟಿ: ಬಾಹುಬಲಿ ಮತ್ತು ಬಾಹುಬಲಿ 2 ತಾರೆ ಅನುಷ್ಕಾ ಶೆಟ್ಟಿ ಪ್ರತಿ ಚಿತ್ರದ ಸಂಭಾವನೆ 2 ಕೋಟಿ ರೂ. ಮಹೇಶ್ ಬಾಬು ಪಿ ನಿರ್ದೇಶನದ ಮತ್ತು ಯುವಿ ಕ್ರಿಯೇಷನ್ಸ್ ಬೆಂಬಲಿತ ಚಿತ್ರದ ಚಿತ್ರೀಕರಣವನ್ನು ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ.
ನಯನತಾರಾ : ಲೇಡಿ ಸೂಪರ್ ಸ್ಟಾರ್ ನಯನತಾರಾ ಪ್ರತಿ ಚಿತ್ರಕ್ಕೆ 2.5 ರಿಂದ 3 ಕೋಟಿ ರೂ ಪಡೆಯುತ್ತಾರೆ. ವಿಜಯ್ ಸೇತುಪತಿ ಮತ್ತು ಸಮಂತಾ ರುತ್ ಪ್ರಭು ಅವರ ಜೊತೆ ವಿಘ್ನೇಶ್ ಶಿವನ್ ನಿರ್ದೇಶನದ ಕಾತುವಾಕುಲ ಎರಡು ಕಾದಲ್ ಸಿನಿಮಾದಲ್ಲಿ ನಯನತಾರಾ ಮುಂದಿನ ಬಾರಿ ಕಾಣಿಸಿಕೊಳ್ಳಲಿದ್ದಾರೆ.
ಪೂಜಾ ಹೆಗ್ಡೆ: ಪೂಜಾ ಹೆಗ್ಡೆ ಚಿತ್ರವೊಂದಕ್ಕೆ 3.50 ಕೋಟಿ ರೂ ಗಳಿಸುತ್ತಾರೆ. ಪೂಜಾ ಮುಂದಿನ ಪ್ಯಾನ್-ಇಂಡಿಯಾ ಚಿತ್ರ 'ರಾಧೆ ಶ್ಯಾಮ್' ನಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅವರು ಇತ್ತೀಚೆಗಷ್ಟೇ ಥಲಪತಿ ವಿಜಯ್ ಜೊತೆ ಬೀಸ್ಟ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಅವರ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪೂಜಾ ಸದ್ಯದಲ್ಲೇ ಪ್ರಾರಂಭಿಸಲಿದ್ದಾರೆ.
Keerthy suresh
ಕೀರ್ತಿ ಸುರೇಶ್: ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಕೂಡ ರೂ. 2 ಕೋಟಿ ಫಿಸ್ ಪಡೆಯುತ್ತಾರೆ. ಪರಶುರಾಮ್ ಅವರ ಮುಂಬರುವ ಹಾಸ್ಯ ಚಿತ್ರ ಸರ್ಕಾರ ವಾರಿ ಪಟದಲ್ಲಿ ಕೀರ್ತಿ ಸುರೇಶ್ ಅವರು ಮಹೇಶ್ ಬಾಬು ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ.