MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮದುವೆಗೂ ಮುನ್ನ ಉದಯ್‌ಪುರದಲ್ಲಿ ವಾಲಿಬಾಲ್‌ ಆಡಿ ಸಂಭ್ರಮಿಸಿದ ವಿಜಯ್‌ ದೇವರಕೊಂಡ!

ಮದುವೆಗೂ ಮುನ್ನ ಉದಯ್‌ಪುರದಲ್ಲಿ ವಾಲಿಬಾಲ್‌ ಆಡಿ ಸಂಭ್ರಮಿಸಿದ ವಿಜಯ್‌ ದೇವರಕೊಂಡ!

ಸೌತ್ ಸಿನಿ ಲೋಕದ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹವು ಫೆಬ್ರವರಿ 26 ರಂದು ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆಯಲಿದೆ. 'ವಿರೋಶ್' ಎಂದು ಖ್ಯಾತರಾದ ಈ ಜೋಡಿಯ ಮದುವೆಯು ಅತ್ಯಂತ ಖಾಸಗಿಯಾಗಿದ್ದು, ಕೇವಲ 100 ಆಪ್ತರು ಮಾತ್ರ ಭಾಗವಹಿಸುತ್ತಿದ್ದಾರೆ.

2 Min read
Author : Santosh Naik
Published : Feb 24 2026, 05:52 PM IST
Share this Photo Gallery
  • FB
  • TW
  • Linkdin
  • Whatsapp
18
ಮೋಸ್ಟ್‌ ಅಡ್ಮೈರ್ಡ್ ಜೋಡಿ ವಿವಾಹ
Image Credit : instagram

ಮೋಸ್ಟ್‌ ಅಡ್ಮೈರ್ಡ್ ಜೋಡಿ ವಿವಾಹ

ಸೌತ್ ಸಿನಿ ಲೋಕದ ಮೋಸ್ಟ್ ಅಡ್ಮೈರ್ಡ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವವು ಇಂದಿನಿಂದ (ಫೆಬ್ರವರಿ 24) ಅಧಿಕೃತವಾಗಿ ಪ್ರಾರಂಭವಾಗಿದೆ. ಅಭಿಮಾನಿಗಳು ಪ್ರೀತಿಯಿಂದ ಕರೆದ 'ವಿರೋಶ್' ಹೆಸರಿನಲ್ಲೇ ಈ ಜೋಡಿ ಹಸೆಮಣೆ ಏರುತ್ತಿದೆ.

28
ವಿವಾಹದ ದಿನಾಂಕ ಮತ್ತು ಸ್ಥಳ
Image Credit : Facebook

ವಿವಾಹದ ದಿನಾಂಕ ಮತ್ತು ಸ್ಥಳ

ಇಂದಿನಿಂದ ವಿವಾಹ ಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ಫೆಬ್ರವರಿ 26 ರಂದು ವಿಜಯ್ ಮತ್ತು ರಶ್ಮಿಕಾ ವಿವಾಹವಾಗಲಿದ್ದಾರೆ. ಉದಯಪುರದಿಂದ 25 ಕಿ.ಮೀ ದೂರದಲ್ಲಿರುವ ಆವಳಿ ಪರ್ವತ ಶ್ರೇಣಿಯ ನಡುವೆ ಇರುವ ಐಷಾರಾಮಿ ಹೋಟೆಲ್ 'ITC ಮೆಮೆಂಟೋಸ್' (ITC Mementos) ಈ ಅದ್ಧೂರಿ ಮದುವೆಗೆ ಸಾಕ್ಷಿಯಾಗುತ್ತಿದೆ.

Related Articles

Related image1
ರಶ್ಮಿಕಾ ಮಂದಣ್ಣ ಮದುವೆಗೆ ಸ್ಯಾಂಡಲ್‌ವುಡ್ ನಟ ನಟಿಯರಿಗಿದೆಯಾ ಆಮಂತ್ರಣ?
Related image2
ರಕ್ಷಿತ್‌ ಶೆಟ್ಟಿ ಜೊತೆಗೆ 13 ವರ್ಷ; ಮದುವೆಯಾಗ್ತಿರೋ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ Age Gap ಎಷ್ಟು?
38
ಖಾಸಗಿ ಕಾರ್ಯಕ್ರಮ
Image Credit : Facebook

ಖಾಸಗಿ ಕಾರ್ಯಕ್ರಮ

ಈ ಮದುವೆಯನ್ನು ಅತ್ಯಂತ ಖಾಸಗಿಯಾಗಿ ಇರಿಸಲಾಗಿದ್ದು, ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿದೆ. ಒಟ್ಟು ಅತಿಥಿಗಳ ಸಂಖ್ಯೆ ಕೇವಲ 100 ಕ್ಕೆ ಸೀಮಿತವಾಗಿದೆ ಎಂದು ವರದಿಯಾಗಿದೆ.

48
ಪೂಲ್ ವಾಲಿಬಾಲ್ ಮತ್ತು ಪಾರ್ಟಿ
Image Credit : X

ಪೂಲ್ ವಾಲಿಬಾಲ್ ಮತ್ತು ಪಾರ್ಟಿ

ವಿಜಯ್ ದೇವರಕೊಂಡ ಅವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಲಿಬಾಲ್ ಆಡುತ್ತಿರುವ ಫೋಟೋ ಮತ್ತು ಪೂಲ್ ಸೈಡ್‌ನಲ್ಲಿ ತೇಲುವ ಡ್ರಿಂಕ್ ಸ್ಟೇಷನ್‌ನ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ 'ರಿಲ್ಯಾಕ್ಸ್ಡ್' ಸಂಭ್ರಮದ ಸುಳಿವು ನೀಡಿದ್ದಾರೆ.

58
ಐಷಾರಾಮಿ ಅಲಂಕಾರ
Image Credit : X

ಐಷಾರಾಮಿ ಅಲಂಕಾರ

ರಶ್ಮಿಕಾ ಅವರು ಮದುವೆಯ ಮಂಟಪದ ಒಳಗಿನ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ. ಗ್ರೀನ್‌ ಆಫಲ್ಸ್‌, ದ್ರಾಕ್ಷಿ ಗೊಂಚಲುಗಳು ಮತ್ತು ಗುಲಾಬಿ ಲಿಲಿ ಹೂವುಗಳಿಂದ ಟೇಬಲ್ ಅನ್ನು ಅತ್ಯಂತ ನೈಸರ್ಗಿಕವಾಗಿ ಮತ್ತು ಐಷಾರಾಮಿಯಾಗಿ ಅಲಂಕರಿಸಲಾಗಿದೆ.

68
ಜಪಾನೀಸ್ ಖಾದ್ಯಗಳ ಔತಣ
Image Credit : X

ಜಪಾನೀಸ್ ಖಾದ್ಯಗಳ ಔತಣ

ಮದುವೆಯ ಅತಿಥಿಗಳಿಗಾಗಿ ವಿಶೇಷವಾಗಿ ಜಪಾನೀಸ್ ಶೈಲಿಯ (Japanese Delicacy) ಊಟವನ್ನು ಸಿದ್ಧಪಡಿಸಲಾಗಿದೆ ಎಂಬುದು ಟೇಬಲ್ ಮೇಲಿದ್ದ ಮೆನು ಕಾರ್ಡ್‌ನಿಂದ ತಿಳಿದುಬಂದಿದೆ.

78
ರೆಸಾರ್ಟ್‌ನ ವಿಶೇಷತೆಗಳು
Image Credit : X

ರೆಸಾರ್ಟ್‌ನ ವಿಶೇಷತೆಗಳು

ಈ ಹೋಟೆಲ್ ಇಡೀ ಬೆಟ್ಟದ ಮೇಲೆಯೇ ಹರಡಿಕೊಂಡಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧವಿದೆ. ಇಲ್ಲಿ 117 ಖಾಸಗಿ ವಿಲ್ಲಾಗಳಿವೆ, ಜೊತೆಗೆ ಹೋಟೆಲ್ ಆವರಣದೊಳಗೆ ನದಿ ಮತ್ತು ಸಣ್ಣ ಸರೋವರವೂ ಇದೆ. ಗಣ್ಯರಿಗಾಗಿ ಪ್ರತ್ಯೇಕ ಹೆಲಿಪ್ಯಾಡ್ ವ್ಯವಸ್ಥೆಯೂ ಇಲ್ಲಿದೆ. ಚಿತ್ರರಂಗದ ದೊಡ್ಡ ತಾರೆಗಳಿಗೆ ಇಲ್ಲಿ ಆಹ್ವಾನವಿಲ್ಲ ಎನ್ನಲಾಗಿದ್ದು, ಕೇವಲ ತೆಲಂಗಾಣದ ಕೆಲ ರಾಜಕಾರಣಿಗಳು ಮತ್ತು ಕೆಲವು ಚಿತ್ರ ನಿರ್ದೇಶಕರು ಮಾತ್ರ ಭಾಗವಹಿಸುತ್ತಿದ್ದಾರೆ.

88
ಕಳೆದ ವರ್ಷ ಎಂಗೇಜ್‌ಮೆಂಟ್‌
Image Credit : Asianet News

ಕಳೆದ ವರ್ಷ ಎಂಗೇಜ್‌ಮೆಂಟ್‌

ಕಳೆದ ವರ್ಷ ಅಕ್ಟೋಬರ್ 3 ರಂದು ಹೈದರಾಬಾದ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಭಾನುವಾರ ಜಂಟಿ ಪ್ರಕಟಣೆ ನೀಡಿದ್ದ ದಂಪತಿ, "ನೀವು ನಮಗಿಂತ ಮೊದಲೇ ನಮಗೊಂದು ಹೆಸರು ಕೊಟ್ಟಿದ್ದೀರಿ, ಅದುವೇ 'ವಿರೋಶ್'. ನಿಮ್ಮ ಪ್ರೀತಿಯ ಹಾರೈಕೆ ನಮ್ಮ ಜೊತೆಗಿರಲಿ" ಎಂದು ಮದುವೆಯನ್ನು ಖಚಿತಪಡಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಮನರಂಜನಾ ಸುದ್ದಿ
ಟಾಲಿವುಡ್
ಸಂಬಂಧಗಳು
ಮದುವೆ
ಮದುವೆ

Latest Videos
Recommended Stories
Recommended image1
Toxic: ವರ್ಷಗಳ ಗಡ್ಡಕ್ಕೆ ಯಶ್​ ಗುಡ್​ಬೈ ಹೇಳೋ ಮುನ್ನ ಪತ್ನಿ ರಾಧಿಕಾ ಪಂಡಿತ್​ ಏನ್​ ಹೇಳಿದ್ರು ನೋಡಿ!
Recommended image2
ಪ್ಯಾನ್‌ ಇಂಡಿಯಾ ನಟಿಯಾದ್ರೂ ಸ್ನೇಹ ಮರೆತಿಲ್ಲ; ಕನ್ನಡ ಸೀರಿಯಲ್‌ ನಟಿಯನ್ನು ಫಾಲೋ ಮಾಡ್ತಿರೋ Rashmika Mandanna
Recommended image3
ಮದುವೆಗೆ ಮೂರೇ ದಿನ ಇರುವಾಗ ಗುಟ್ಟು ರಟ್ಟು ಮಾಡಿದ ರಶ್ಮಿಕಾ-ವಿಜಯ್; ಎಲ್ಲದಕ್ಕೂ ಅದೊಂದೇ ಕಾರಣವೇ?!
Related Stories
Recommended image1
ರಶ್ಮಿಕಾ ಮಂದಣ್ಣ ಮದುವೆಗೆ ಸ್ಯಾಂಡಲ್‌ವುಡ್ ನಟ ನಟಿಯರಿಗಿದೆಯಾ ಆಮಂತ್ರಣ?
Recommended image2
ರಕ್ಷಿತ್‌ ಶೆಟ್ಟಿ ಜೊತೆಗೆ 13 ವರ್ಷ; ಮದುವೆಯಾಗ್ತಿರೋ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ Age Gap ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved