ಅಮಿತಾಬ್‌ ಜೊತೆ ನಟಿಸುವ ಚಾನ್ಸ್ :ಬಾಲಿವುಡ್‌ನಲ್ಲೂ ಕಿರಿಕ್‌ ಚೆಲುವೆಯ ಹವಾ ‌!

First Published Apr 6, 2021, 4:57 PM IST

ಕನ್ನಡದ ನಟಿ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಕೆರಿಯರ್‌ನ ಟಾಪ್‌ನಲ್ಲಿದ್ದಾರೆ. ಕನ್ನಡದ ನಂತರ ತೆಲಗು ಸಿನಿಮಾರಂಗದಲ್ಲಿ ಸಖತ್‌ ಫೇಮಸ್‌ ಆಗಿರುವ ಈ ಕೊಡಿಗನ ಕುವರಿ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಪ್ರಸ್ತುತ ಬಾಲಿವುಡ್‌ನಲ್ಲಿ ತಮ್ಮ ಎರಡನೇ ಚಿತ್ರಕ್ಕೆ ರೆಡಿಯಾಗಿದ್ದಾರೆ ನಟಿ. ಲೆಜೆಂಡ್‌ ಅಮಿತಾಬ್‌ ಬಚ್ಚನ್‌ ಜೊತೆ ಕೆಲಸ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿರುವ ರಶ್ಮಿಕಾ ಖುಷಿಯಿಂದ ಆಕಾಶದಲ್ಲಿ ತೇಲುತ್ತಿದ್ದಾರೆ.