- Home
- Entertainment
- Cine World
- ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ, ರಟ್ಟಾಯ್ತು ಸೀಕ್ರೆಟ್!
ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ, ರಟ್ಟಾಯ್ತು ಸೀಕ್ರೆಟ್!
ರಶ್ಮಿಕಾ ಮಂದಣ್ಣಗೆ ಈ ಬಾರಿಯ ದೀಪಾವಳಿ ಹಬ್ಬ ಭಾರಿ ಸ್ಪೆಷಲ್. ಕಾರಣ ರಶ್ಮಿಕಾ ಈ ಹಬ್ಬವನ್ನು ವಿಜಯ್ ದೇವರಕೊಂಡ ಮನೆಯಲ್ಲಿ ಆಚರಿಸಿದ್ದಾರೆ. ಖುದ್ದು ರಶ್ಮಿಕಾ ಈ ಕುರಿತು ಸುಳಿವು ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ರಟ್ಟಾಗಿದೆ.

ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಸಿನಿಮಾ ರಂಗದಲ್ಲಿ ಭಾರಿ ಬ್ಯೂಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ನಡುವೆ ಡೇಟಿಂಗ್ ಕುರಿತು ಗಾಸಿಪ್ ಹಲವು ಬಾರಿ ಹರಿದಾಡಿದೆ. ಇದೀಗ ಈ ಸೀಕ್ರೆಟ್ ಬಯಲಾಗಿದೆ. ಈ ಬಾರಿ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬವನ್ನು ವಿಜಯ್ ದೇವರಕೊಂಡ ಮನೆಯಲ್ಲಿ ಆಚರಿಸಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ದೇವರಕೊಂಡ ಕುಟುಂಬದ ಜೊತೆ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಬಳಿಕ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಭಾರಿ ಸದ್ದು ಮಾಡುತ್ತಿದೆ. ಇಷ್ಟೇ ಅಲ್ಲ ರಶ್ಮಿಕಾ ನೀಡಿದ ಕೆಲವು ಸುಳಿವು ದೀಪಾವಳಿ ಹಬ್ಬದ ಆಚರಣೆ ಎಲ್ಲಿ ಅನ್ನೋದು ಖಚಿತಪಡಿಸಿದೆ.
ರಶ್ಮೀಕಾ ಮಂದಣ ದೀಪ ಬೆಳಗಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಇಷ್ಟೇ ಅಲ್ಲ ದೀಪಾವಳಿ ಫೋಟೋಶೂಟ್ ಮುಗಿದಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಫೋಟೋ ಕ್ರಿಕೆಟ್‌ನ್ನು ದೇವರಕೊಂಡ ಸಹೋದರ ಆನಂದ್ ದೇವರಕೊಂಡಾಗೆ ನೀಡಿದ್ದಾರೆ. ಇಷ್ಟೇ ಅಲ್ಲ ಥ್ಯಾಂಕ್ಯೂ ಆನಂದ ಎಂದು ಬರೆದುಕೊಂಡಿದ್ದರು. ಈ ಮೂಲಕ ರಶ್ಮಿಕಾ ಮಂದಣ್ಣ ತಮ್ಮ ದೀಪಾವಳಿ ಹಬ್ಬ ದೇವರಕೊಂಡ ಮನೆಯಲ್ಲಿ ಆಚರಿಸಿದ್ದಾರೆ ಅನ್ನೋ ಸುಳಿವು ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಈ ಸುಳಿವು ನೀಡುತ್ತಿದ್ದಂತೆ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಯಾಗಿತ್ತು. ದೇವರಕೊಂಡ ಮನೆಯಲ್ಲಿ ರಶ್ಮಿಕಾ ದೀಪಾವಳಿ ಆಚರಣೆ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಫೋಟೋ ಕ್ರಿಕೆಟ್ ಹಾಗೂ ಥ್ಯಾಂಕ್ಯೂ ಆನಂದ ಅನ್ನೋ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ. ಆದರೆ ಫೋಟೋಗಳನ್ನು ಉಳಿಸಿಕೊಂಡಿದ್ದಾರೆ.
ಇತ್ತ ವಿಜಯ್ ದೇವರಕೊಂಡ ಕೂಡ ದೀಪಾವಳಿ ಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಶ್ಮೀಕಾ ಹಾಗೂ ದೇವರಕೊಂಡ ಫೋಟೋಗಳನ್ನು ಕೆಲ ಹೋಲಿಕೆಗಳನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ದೇವರಕೊಂಡ ಕುಟುಂಬ ಜೊತೆ ದೀಪಾವಳಿ ಹಬ್ಬ ಆಚರಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ 2 ಚಿತ್ರದಲ್ಲಿ ನಟಿಸಿದ್ದಾರೆ. 2018ರ ಗೀತಾ ಗೋವಿಂದಂ ಹಾಗೂ 2019ರಲ್ಲಿ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಗೋವಿಂದಂ ಚಿತ್ರದ ಬಳಿಕ ರಶ್ಮಿಕಾ ಹಾಗೂ ದೇವರಕೊಂಡ ಆತ್ಮೀಯರಾಗಿದ್ದಾರೆ. ದೇವರಕೊಂಡ ಕುಟುಂಬದ ಜೊತೆಗೆ ರಶ್ಮಿಕಾ ಮಂದಣ್ಣ ಆತ್ಮೀಯರಾಗಿದ್ದಾರೆ.
ಹಲವು ಅಭಿಮಾನಿಗಳು ರಶ್ಮಿಕಾ ಮಂದಣ್ಣ ಫೋಟೋ ಹಂಚಿಕೊಂಡ ಬೆನ್ನಲ್ಲೇ ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ದೀಪಾವಳಿ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಈ ಕುರಿತು ರಶ್ಮಿಕಾ ಅಥವಾ ವಿಜಯ್ ದೇವರಕೊಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಲವು ಬಾರಿ ಇದೇ ರೀತಿ ಇವರಿಬ್ಬರು ಕೆಲ ಸುಳಿವು ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.