ಬಾಲಿವುಡ್‌ ಸಿನಿಮಾದ ಶೂಟಿಂಗ್‌ ಶುರು, ಲಕ್ನೋಗೆ ಹಾರಿದ ರಶ್ಮಿಕಾ!

First Published Mar 5, 2021, 5:33 PM IST

ಮೊದಲ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ರಾತ್ರೋರಾತ್ರಿ ಸ್ಟಾರ್‌ ಆದವರು ರಶ್ಮಿಕಾ ಮಂದಣ್ಣ. ನಂತರ ತೆಲಗು ಮತ್ತೆ ತಮಿಳಿಗೆ ಕಾಲಿಟ್ಟ ಇವರು ಪ್ರಸ್ತುತ ಟಾಲಿವುಡ್‌ನಲ್ಲಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಕಿರಿಕ್‌ ಬೆಡಗಿ ಈಗ ಬಾಲಿವಡ್‌ಗೂ ಕಾಲಿಟ್ಟಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್‌ ಮಜ್ನು ಸಿನಿಮಾದ ಮೂಲಕ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕನ್ನಡದ ಈ ನಟಿ. ಈಗ ಈ ಸಿನಿಮಾದ ಶೂಟಿಂಗ್‌ ಫ್ರಾರಂಭವಾಗಿದ್ದು ನಟಿ ಲಕ್ನೋಗೆ ತೆರಳಿದ್ದಾರೆ. ಇವರ ಏರ್‌ಪೋರ್ಟ್ ಫೋಟೋ ವೈರಲ್‌ ಆಗಿದೆ.