Navratri ಮಹಾ ನವಮಿ ಸೆಲೆಬ್ರೆಷನ್‌ನಲ್ಲಿ ರಾಣಿ ಮುಖರ್ಜಿ ಮತ್ತಿತರರು!
ನವರಾತ್ರಿಯ ಕೊನೆಯ ದಿನ, ಮಹಾನವಮಿ ಹಬ್ಬದಂದು, ರಾಣಿ ಮುಖರ್ಜಿ (Rani Mukerji) ಸೇರಿದಂತೆ ಅನೇಕ ಬಾಲಿವುಡ್ (Bollywood) ಸೆಲೆಬ್ರಿಟಿಗಳು ದೇವಿಯ ದರ್ಶನ ಪಡೆಯುತ್ತಿರುವುದು ಕಂಡುಬಂದಿತು. ಈ ಸಮಯದಲ್ಲಿ, ರಾಣಿ ಮುಖರ್ಜಿ ಮಾತಾ ರಾಣಿಯ ಆಶಿರ್ವಾದ ಪಡೆಯಲು ಆಗಮಿಸಿದ್ದರು. ಅವರು ಹಣೆಯ ಮೇಲೆ ದೊಡ್ಡ ಬಿಂದಿ ಮತ್ತು ಅಲಂಕಾರಗಳೊಂದಿಗೆ ಹಳದಿ ಸೀರೆಯಲ್ಲಿ ಕಾಣಿಸಿಕೊಂಡರು. ರಾಣಿ ದುರ್ಗಾ ಮಾತೆ ವಿಗ್ರಹದ ಮುಂದೆ ನಿಂತಿರುವ ಫೋಟೋ ವೈರಲ್ ಆಗಿದೆ.

ರಾಣಿ ಮುಖರ್ಜಿ ಶೀಘ್ರದಲ್ಲೇ 'ಬಂಟಿ ಔರ್ ಬಾಬ್ಲಿ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಣಿ ಕೊನೆಯದಾಗಿ 2019 ರಲ್ಲಿ 'ಮರ್ದಾನಿ 2' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ದೇವಿಯ ದರ್ಶನ ಪಡೆಯಲು ರಾಣಿ ಮುಖರ್ಜಿ ಒಬ್ಬರೇ ತೆರಳಿದ್ದರು.
ಬಾಲಿವುಡ್ ನಟಿ ರಿಯಾ ಸೇನ್ ಅವರು ಗುರುವಾರ ಸಾಂತಾಕ್ರೂಜ್‌ನಲ್ಲಿರುವ ದುರ್ಗಾ ಮಾತೆಯ ಪೆಂಡಲ್ ಬಳಿ ಕಾನಿಸಿಕೊಂಡರು. ರಿಯಾ ಈ ಸಮಯದಲ್ಲಿ ಪಿಂಕ್ ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ರಿಯಾ ಸ್ನೇಹಿತರೊಂದಿಗೆ ಫೋಟೋಗೆ ಪೋಸ್ ನೀಡಿದರು.
ರಾಣಿ ಮುಖರ್ಜಿಯವರ ಸೋದರ ಕಸಿನ್ ಕಾಜೋಲ್ ಕೂಡ ನವರಾತ್ರಿಯ ಕೊನೆಯ ದಿನ ಮಹಾನವಮಿಯಂದು ಸಾಂತಾಕ್ರೂಜ್‌ನಲ್ಲಿರುವ ಪೂಜಾ ಪಂದಳವನ್ನು ತಲುಪಿದರು. ಈ ಸಮಯದಲ್ಲಿ, ಕಾಜೋಲ್ ಹಸಿರು ಬಣ್ಣದ
ಸೀರೆಯಲ್ಲಿ ಕಾಣಿಸಿಕೊಂಡರು.
ಗಾಯಕ ಅಲ್ಕಾ ಯಜ್ಞಿಕ್ ಗುರುವಾರ ತಾಯಿ ಅಂಬೆಯ ದರ್ಶನ ಮಾಡಲು ಬಂದರು. ಈ ಸಮಯದಲ್ಲಿ, ಅಲ್ಕಾ ಕೆಂಪು ಮತ್ತು ಚಿನ್ನದ ಉಡುಪಿನಲ್ಲಿ ಕಾಣಿಸಿಕೊಂಡರು. ಅಲ್ಕಾ ಯಜ್ಞಿಕ್ ದುರ್ಗಾ ಪೂಜೆಯ ಪಂಡಲ್‌ನಲ್ಲಿ ಸ್ನೇಹಿತರೊಂದಿಗೆ ಪೋಸ್ ನೀಡಿದರು. ಆದರೆ, ಈ ಸಮಯದಲ್ಲಿ ಆಕೆಯ ಗಂಡ ಮತ್ತು ಮಗಳು ಕಾಣಲಿಲ್ಲ.
ಮನೀಶ್ ಪಾಲ್ ಕೂಡ ಗುರುವಾರ ಮಹಾ ನವಮಿಯ ದಿನ ಮಾತೆಯನ್ನು ಭೇಟಿ ಮಾಡಲು ಬಂದರು. ಈ ಸಮಯದಲ್ಲಿ, ಮನೀಶ್ ಪಾಲ್ ಪತ್ನಿ ಮತ್ತು ಮಕ್ಕಳೊಂದಿಗೆ ಕಾಣಿಸಿಕೊಂಡರು. ಮನೀಶ್ ಕಪ್ಪು ಬಣ್ಣದ ಕುರ್ತಾ ಧರಿಸಿದ್ದರು.
ಬಪ್ಪಿ ಲಾಹಿರಿಯ ಮಗ, ಸೊಸೆ ತನಿಷಾ ಮತ್ತು ಮೊಮ್ಮಗ ಕ್ರಿಶ್ ಕೂಡ ಗುರುವಾರ ದೇವಿಯ ಸನ್ನಿದ್ಧಿಗೆ ಭೇಟಿ ನೀಡಿದರು. ಈ ಸಮಯದಲ್ಲಿ, ಮೂವರೂ ಟ್ರೆಡಿನಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳಲು ಈ ಮೂವರೂ ಅಮೆರಿಕದ ಲಾಸ್ ಏಂಜಲೀಸ್‌ನಿಂದ ಮುಂಬೈಗೆ ಆಗಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.