ಗರ್ಲ್‌ಫ್ರೆಂಡ್ಸ್‌ಗೆ ಸಹೋದರಿಯ ಬಟ್ಟೆ ಗಿಫ್ಟ್ ಮಾಡುತ್ತಿದ್ದ ರಣಬೀರ್ ಕಪೂರ್!
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ನಡುವೆ ಉತ್ತಮ ಬಾಡಿಂಗ್ ಇದೆ. ಇವರಿಬ್ಬರು ಬಾಲಿವುಡ್‌ನ ಲವ್ಲೀ ಸಿಬ್ಲಿಂಗ್‌ಗಳಲ್ಲಿ ಒಬ್ಬರು. ಇವರ ಸಂಬಂಧದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿವರಗಳು ಇಲ್ಲಿವೆ.
ರಣಬೀರ್ ಕಪೂರ್ ಮತ್ತು ರಿದ್ಧಿಮಾ ಕಪೂರ್ ಸಾಹ್ನಿ ಬಾಲಿವುಡ್ನ ಬೆಸ್ಟ್ ಸಹೋದರ-ಸಹೋದರಿ ಜೋಡಿಗಳಲ್ಲಿ ಒಬ್ಬರು. ಇಬ್ಬರು ತುಂಬಾ ಕ್ಯೂಟ್ ಮತ್ತು ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ. ಇವರ ನಡುವಿನ ಬಾಂಡಿಗ್ ಹೇಗಿದೆ ನೋಡಿ.
ಒಮ್ಮೆ ಕಪಿಲ್ ಶರ್ಮಾ ಶೋನಲ್ಲಿ ನಟ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಾಣಿಸಿಕೊಂಡರು. ತಾಯಿ-ಮಗಳು ಜೋಡಿ ಕಪೂರ್ ಕುಟುಂಬದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಈ ಶೋನ ಸಂಭಾಷಣೆಯ ಸಮಯದಲ್ಲಿ, ಲಂಡನ್‌ನಲ್ಲಿದ್ದಾಗ ರಣಬೀರ್ ತನ್ನ ಗರ್ಲ್‌ಫ್ರೆಂಡ್ಸ್‌ಗೆ ರಿದ್ಧಿಮಾರ ಅನುಮತಿಯಿಲ್ಲದೆ ಹೇಗೆ ಅವರ ವಸ್ತುಗಳನ್ನು ಗಿಫ್ಟ್ ಕೊಡುತ್ತಿದ್ದರು ಎಂದು ಕಪಿಲ್ ರಿದ್ಧಿಮಾರನ್ನು ಕೇಳಿದ್ದರು.
ತಾನು ಲಂಡನ್‌ನಲ್ಲಿ ಓದುತ್ತಿದ್ದಾಗ ರಜಾ ದಿನಗಳಲ್ಲಿ ಮನೆಗೆ ಮರಳಿ ಬಂದ ಸಮಯದ ಅನುಭವಗಳನ್ನು ಹಂಚಿಕೊಂಡರು. ಒಂದು ದಿನ ರಣಬೀರ್‌ನ ಗರ್ಲ್‌ಫ್ರೆಂಡ್ ಒಬ್ಬಳು ಮನೆಗೆ ಬಂದಿದ್ದಳು ಮತ್ತು ಅವಳು ರಿದ್ಧಿಮಾರ ಟಾಪ್ ಧರಿಸಿದ್ದಳು ಎಂದು ರಿದ್ಧಿಮಾ ಹೇಳಿದ್ದರು.
ಅವನ ಪಾಕೆಟ್ ಮನಿ ಉಳಿಸಲು ಅವನು ರಣಬೀರ್ ತನ್ನ ವಸ್ತುಗಳನ್ನು ತನ್ನ ಗರ್ಲ್ ಫ್ರೆಂಡ್‌ಗೆ ಗಿಫ್ಟಾಗಿ ನೀಡುತ್ತಿದ್ದನು ಎಂದು ನಾನು ಅರಿತುಕೊಂಡೆ ಎಂದು ಕಪಿಲ್ ಶರ್ಮ ಶೋನಲ್ಲಿ ರಿದ್ದಿಮಾ ರಿವೀಲ್ ಮಾಡಿದ್ದರು.
ಕೆಲಸದ ವಿಷಯದಲ್ಲಿ, ರಣಬೀರ್ ಕಪೂರ್ ಬ್ರಹ್ಮಾಸ್ತ್ರದಲ್ಲಿ ಆಲಿಯಾ ಭಟ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಕ್ಕಿನೇನಿ ನಾಗಾರ್ಜುನ ಕೂಡ ನಟಿಸಿದ್ದಾರೆ. ಜೊತೆಗೆ ರಣಬೀರ್ ಕಪೂರ್ ವಾಣಿ ಕಪೂರ್‌ನೊಂದಿಗೆ ಶಮ್‌ಶೇರಾ ಮತ್ತು ಶ್ರದ್ಧಾ ಕಪೂರ್ ಜೊತೆ ಲುವ್ ರಂಜನ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.