5 ವರ್ಷಗಳ ಬಳಿಕ 'ಬ್ರಹ್ಮಾಸ್ತ್ರ' ಶೂಟಿಂಗ್ ಮುಗಿಸಿದ ರಣಬೀರ್-ಅಲಿಯಾ
ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಕೊನೆಗೂ ಮುಕ್ತಾಯವಾಗಿದೆ. ಬರೋಬ್ಬರಿ 5 ವರ್ಷಗಳ ಬಳಿಕ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಸಿನಿಮಾತಂಡ ಸಂತಸ ಹಂಚಿಕೊಂಡಿದೆ.
ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್(Alia Bhatt) ಮತ್ತು ರಣಬೀರ್ ಕಪೂರ್(Ranbir Kapoor) ನಟನೆಯ ಬ್ರಹ್ಮಾಸ್ತ್ರ(Brahmastra) ಚಿತ್ರದ ಶೂಟಿಂಗ್ ಕೊನೆಗೂ ಮುಕ್ತಾಯವಾಗಿದೆ. ಬರೋಬ್ಬರಿ 5 ವರ್ಷಗಳ ಬಳಿಕ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಚಿತ್ರೀಕರಣ ಸಂಪೂರ್ಣಗೊಂಡಿದೆ. ಈ ಬಗ್ಗೆ ಸ್ವತಃ ಸಿನಿಮಾತಂಡ ಬಹಿರಂಗಗೊಳಿಸಿದೆ. ನಿರ್ದೇಶಕ ಅಯಾನ್ ಮುಖರ್ಜಿ(Ayan Mukerji) ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
'ಕೊನೆಗೂ ಚಿತ್ರೀಕರಣ ಮುಕ್ತಾಯವಾಗಿದೆ. ಬ್ರಹ್ಮಾಸ್ತ್ರ ಚಿತ್ರೀಕರಣ ಪ್ರಾರಂಭ ಮಾಡಿ 5 ವರ್ಷಗಳಾಗಿದೆ. ಕೊನೆಗೂ ನಮ್ಮ ಚಿತ್ರದ ಕೊನೆಯ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಇದು ನಂಬಲಾಗದ, ಸವಾಲಿನ ಲೈಫ್ ಟೈಮ್ ಪಯಣ' ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದಾರೆ. ಅಲಿಯಾ, ರಣಬೀರ್ ಇಬ್ಬರು ಕತ್ತಿಗೆ ಹೂವಿನ ಹಾರ ಹಾಕಿ ದೇವಸ್ತಾನದಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
'ವಾರಾಣಸಿಯಲ್ಲಿ ಪಾರ್ಟ್ ಒಂದು ಶಿವ ಚಿತ್ರೀಕರಣ ಮುಗಿಸಿದ್ದೇವೆ. ಶಿವ ಭಗವಾನ್ ಚೈತನ್ಯಿಂದ ತುಂಬಿದ ನಗರ ಮತ್ತು ಪವಿತ್ರ ಕಾಶಿ ವಿಶ್ವನಾಥ ಮಂದಿರದಲ್ಲಿ' ಚಿತ್ರೀಕರಣ ಮುಗಿಸಿರುವುದಾಗಿ ನಿರ್ದೇಶಕ ಅಯಾನ್ ಮುಖರ್ಜಿ ಬರೆದುಕೊಂಡಿದ್ದಾರೆ.
'RRR' ಚಿತ್ರದ ಬಗ್ಗೆ ಅಲಿಯಾಗೆ ಅಸಮಾಧಾನ; ರಾಜಮೌಳಿಯನ್ನು Unfollow ಮಾಡಿದ ನಟಿ
ಇನ್ನು ಸಿನಿಮಾದ ಬಗ್ಗೆ ಹೇಳವುದಾದರೆ ಬ್ರಹ್ಮಾಸ್ತ್ರ ಪುರಾಣ ಮತ್ತು ವೈಜ್ಞಾನಿಕ ಕಾದಂಬರಿಗಳ ಸಂಯೋಜನೆ. ಈ ಸಿನಿಮಾ ಪ್ಯಾನ್ ಇಂಡಿಯ ಮಟ್ಟದಲ್ಲಿ ತಯಾರಾಗುತ್ತಿದೆ. ಹಿಂದಿ ಜೊತೆಗೆ ದಕ್ಷಿಣ ಭಾರತದ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಅಂದಹಾಗೆ ಬರೋಬ್ಬರಿ 5 ವರ್ಷಗಳಿಂದ ಚಿತ್ರೀಕರಣ ಮಾಡಿದ ಬ್ರಹ್ಮಾಸ್ತ್ರ್ ಸಿನಿಮಾ ಸೆಪ್ಟಂಬರ್ 9ರಂದು ತೆರೆಗೆ ಬರುತ್ತಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಅಲಿಯಾ ಜೊತೆಗೆ ಭಾರತೀಯ ಸಿನಿಮಾರಂಗದ ದೊಡ್ಡ ಕಲಾವಿದರು ಸಹ ಕಾಣಿಸಿಕೊಂಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಮೌನಿ ರಾಯ್, ನಾಗಾರ್ಜುನ್ ಅಕ್ಕಿನೇನಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಆಕ್ಟಿಂಗ್ ಬಗ್ಗೆ ನಟ ರಾಮ್ ಚರಣ್ ಮಾತುಗಳಿದು!
ಈ ನಡುವೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರು ಡೇಟಿಂಗ್ ನಲ್ಲಿದ್ದು ಅನೇಕ ವರ್ಷಗಳಾಗಿದೆ. ಇಬ್ಬರ ಪ್ರೀತಿ-ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಆದರೆ ಅಲಿಯಾ-ರಣಬೀರ್ ಮದುವೆಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಕಳೆದ ವರ್ಷವೇ ಇಬ್ಬರು ಹಸೆಮಣೆ ಏರುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ವರ್ಷ ಮದುವೆಯಾಗುವುದು ಪಕ್ಕಾ ಎನ್ನುತ್ತಿವೆ ಮೂಲಗಳು. ಸದ್ಯ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಅಲಿಯಾ ಮತ್ತು ರಣಬೀರ್ ಇಬ್ಬರು ಮುಂದಿನ ತಿಂಗಳು ಏಪ್ರಿಲ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಲಿಯಾ ಜೋಡಿ ಎಲ್ಲೂ ಬಹಿರಂಗ ಪಡಿಸಿಲ್ಲ.
ಇನ್ನು ಅಲಿಯಾ ಭಟ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಷ್ಟೆ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಬ್ರಹ್ಮಾಸ್ತ್ರ್ ಜೊತೆಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಡಾರ್ಲಿಂಗ್ಸ್ ಸಿನಿಮಾಗಳಿವೆ. ಇನ್ನು ರಣಬೀರ್ ಕಪೂರ್ ಶಂಶೇರಾ, ಅನಿಮಲ್, ನಿರ್ದೇಶಕ ಲವ್ ರಂಜನ್ ಅವರ ಇನ್ನು ಹೆಸರಿಡದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.