'RRR' ಚಿತ್ರದ ಬಗ್ಗೆ ಅಲಿಯಾಗೆ ಅಸಮಾಧಾನ; ರಾಜಮೌಳಿಯನ್ನು Unfollow ಮಾಡಿದ ನಟಿ
ಬಾಲಿವುಡ್ ನಟಿ ಅಲಿಯಾ ಭಟ್ ನಿರ್ದೇಶಕ ರಾಜಮೌಳಿ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಷ್ಟೆಯಲ್ಲ ಇನ್ಸ್ಟಾಗ್ರಾಮ್ ನಲ್ಲಿ ರಾಜಮೌಳಿಯನ್ನು ಅನ್ ಫಾಲೋ ಮಾಡಿದ್ದಾರೆ.
ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿದ್ದ ಆರ್ ಆರ್ ಆರ್(RRR) ಸಿನಿಮಾ ಬಿಡುಗಡೆ 4 ದಿನಗಳೇ ಕಳೆದಿದೆ. ರಾಜಮೌಳಿ(Rajamouli) ಸಾರಥ್ಯದಲ್ಲಿ ಮೂಡಿಬಂದಿರುವ ಆರ್ ಆರ್ ಆರ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದಿಗೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಚಿತ್ರಾಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಕೇವಲ 4 ದಿನಗಳಲ್ಲಿ ಕೋಟಿ ಕೋಟಿ ಕಮಾಯಿ ಮಾಡಿರುವ ಆರ್ ಆರ್ ಆರ್ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾತಂಡದ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಆರ್ ಆರ್ ಆರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಅಲಿಯಾ ಭಟ್(Alia Bhatt), ನಿರ್ದೇಶಕ ರಾಜಮೌಳಿ ಮೇಲೆ ಕೋಪಗೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಆರ್ ಆರ್ ಆರ್ ಮೂಲಕ ಮೊದಲ ಬಾರಿಗೆ ತೆಲುಗು ಸಿನಿಮಾರಂಗದಲ್ಲಿ ಕಾಣಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾ ಅಂದ್ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆಯನ್ನು ರಾಜಮೌಳಿ ಸಿನಿಮಾ ಹುಸಿಗೊಳಿಸಿದ್ದು, ಈ ಸಿನಿಮಾ ಅಲಿಯಾಗೆ ಭಾರಿ ಬೇಸರ ಮೂಡಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ತನ್ನ ಪಾತ್ರದ ಬಗ್ಗೆ ಅಲಿಯಾ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಅಲಿಯಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ, ಅಲಿಯಾಗಿಂತ ಮತ್ತೋರ್ವ ನಾಯಕಿ ಒಲಿವಿಯಾ ಮೋರಿಸ್ ಅವರ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಅಲ್ಲದೆ ನಟಿ ಶ್ರೀಯಾ ಶರಣ್ ಪಾತ್ರವೂ ಪ್ರಭಾವ ಬೀರಿದೆ. ಆದರೆ ಅಲಿಯಾ ಪಾತ್ರಕ್ಕೆ ಹೆಚ್ಚು ತೂಕವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಗಳು ಹರಿದುಬರುತ್ತಿವೆ.
Ram Charan Birthday; ಗೆಳೆಯನಿಗಾಗಿ ಪಾರ್ಟಿ ಆಯೋಜಿಸಿದ್ದ Jr.NTR...ಕನ್ನಡದಲ್ಲಿ ಧನ್ಯವಾದ ತಿಳಿಸಿದ ಚಿರು ಪುತ್ರ
ಅಷ್ಟೆಯಲ್ಲ ಅಲಿಯಾ ತನ್ನ ಪಾತ್ರಕ್ಕೆ ತೆಲುಗಿನಲ್ಲಿ ಡಬ್ ಮಾಡಲು ಉತ್ಸುಕರಾಗಿದ್ದರಂತೆ. ಆದರೆ ಆಲಿಯಾ ಬದಲು ಡಬ್ಬಿಂಗ್ ಕಲಾವಿದರ ಬಳಿ ಡಬ್ ಮಾಡಿಸಿದ್ದು, ಅಲಿಯಾಗೆ ಇಷ್ಟವಾಗಿಲ್ಲ ಹಾಗಾಗಿ ರಾಜಮೌಳಿ ವಿರುದ್ಧ ಕೋಪಗೊಂಡಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನಲ್ಲಿ ಡಬ್ ಮಾಡಲು ಅಲಿಯಾ ಸಾಕಷ್ಟು ತಯಾರಿಯನ್ನು ನಡೆಸಿದ್ದರು. ಆದರೆ ಅವರಿಗೆ ಅವಕಾಶ ನೀಡದಿರುವುದು ಅವರಿಗೆ ನೋವುತಂದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನು ಚಿತ್ರದ ಪ್ರಿ-ರಿಲೀಸ್ ಈವೆಂಟ್ ಬಳಿಕ ಅಲಿಯಾ ಎಲ್ಲಿಯೂ ಆರ್ ಆರ್ ಆರ್ ತಂಡದ ಜೊತೆ ಕಾಣಿಸಿಕೊಂಡಿಲ್ಲ. ಅಷ್ಟೆಯಲ್ಲ ಚಿತ್ರದ ರಿಲೀಸ್ ಬಗ್ಗೆಯೂ ಯಾವುದೇ ಪೋಸ್ಟರ್ ಶೇರ್ ಮಾಡಿಲ್ಲ. ಆರ್ ಆರ್ ಆರ್ ಬಗ್ಗೆ ಹಂಚಿಕೊಂಡಿದ್ದ ಒಂದಿಷ್ಟು ಫೋಟೋಗಳನ್ನು ಡಿಲೀಟ್ ಮಾಡಿದ್ದಾರಂತೆ.
ರಾಜಮೌಳಿ ಮೇಲೆ ಕೋಪಗೊಂಡಿರುವ ಅಲಿಯಾ ಇನ್ಸ್ಟಾಗ್ರಾಮ್ ನಲ್ಲಿ ರಾಜಮೌಳಿಯವರನ್ನು ಅನ್ ಫಾಲೋ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿಜಕ್ಕೂ ಅಲಿಯಾ ಭಟ್ ಸಿನಿಮಾದ ಮೇಲೆ ಮುನಿಸಿಕೊಂಡಿದ್ದಾರಾ, ಏನಾಗಿದೆ ಎನ್ನುವ ಬಗ್ಗೆ ಸ್ವತಃ ಅಳಿಯಾ ಅವರೇ ಬಹಿರಂಗ ಪಡಿಸಬೇಕು. ಆದರೆ ಈ ಬಗ್ಗೆ ಅಲಿಯಾ ಎಲ್ಲೂ ಮಾತನಾಡಿಲ್ಲ.
'RRR' ಕಲೆಕ್ಷನ್; 2ನೇ ದಿನವೂ ಭರ್ಜರಿ ಗಳಿಕೆ ಮಾಡಿದ ರಾಜಮೌಳಿ ಸಿನಿಮಾ
ಇನ್ನು ಆರ್ ಆರ್ ಆರ್ ಸಿನಿಮಾದ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಬಾಲಿವುಡ್ ನಟ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ತಾರಾಬಳಗವಿದ್ದ ಆರ್ ಆರ್ ಆರ್ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.