- Home
- Entertainment
- Cine World
- ನಟಿ ಸೌಂದರ್ಯ ಕಾರಣಕ್ಕೆ ರಮ್ಯ ಕೃಷ್ಣ ಕೆಂಡಾಮಂಡಲ, ಅಲ್ಲಿಂದ ಶುರುವಾಯ್ತು ಗಂಡ ಹೆಂಡತಿ ಜಗಳ
ನಟಿ ಸೌಂದರ್ಯ ಕಾರಣಕ್ಕೆ ರಮ್ಯ ಕೃಷ್ಣ ಕೆಂಡಾಮಂಡಲ, ಅಲ್ಲಿಂದ ಶುರುವಾಯ್ತು ಗಂಡ ಹೆಂಡತಿ ಜಗಳ
ನಟಿ ಸೌಂದರ್ಯ ಕಾರಣದಿಂದ ರಮ್ಯ ಕೃಷ್ಣ ತೀವ್ರ ಅಸಮಾಧಾನಗೊಂಡಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಪತಿ, ನಿರ್ದೇಶಕ ಕೃಷ್ಣ ವಂಶಿ ಜೊತೆ ಜಗಳವಾಡಿದ್ದಾರೆ. ಏನಿದು ಘಟನೆ?

ಸೌಂದರ್ಯ ಅವರ ನಟನೆಯಿಂದ ಸೆಲೆಬ್ರಿಟಿ ದಂಪತಿಗಳ ನಡುವೆ ಜಗಳ ನಡೆದ ಘಟನೆ ಬೆಳಕಿಗೆ ಬಂದಿದೆ. ಟಾಲಿವುಡ್‌ನಲ್ಲಿ ಸೌಂದರ್ಯ ಲೆಜೆಂಡರಿ ನಟಿ ಎಂಬುದರಲ್ಲಿ ಸಂದೇಹವಿಲ್ಲ. ಆಕೆಯ ಜೀವನ ದುರಂತವಾಗಿ ಕೊನೆಗೊಂಡಿತು. ಆದರೆ ಸೌಂದರ್ಯ ಕಾರಣದಿಂದ ನಟಿ ರಮ್ಯ ಕೃಷ್ಣ ಹಾಗೂ ಅವರ ಪತಿ, ನಿರ್ದೇಶಕ ಕೃಷ್ಣ ವಂಶಿ ಜೊತೆ ಜಗಳ ಶುರುವಾದ ಘಟನೆ ಬೆಳಕಿಗೆ ಬಂದಿದೆ.
ಸೌಂದರ್ಯ ಅವರ ವೃತ್ತಿಜೀವನದಲ್ಲಿ 'ಅಂತಃಪುರಂ' ಒಂದು ಸ್ಮರಣೀಯ ಚಿತ್ರ. 1998ರಲ್ಲಿ ಈ ಚಿತ್ರ ಕೃಷ್ಣವಂಶಿ ನಿರ್ದೇಶನದಲ್ಲಿ ತೆರೆಕಂಡಿತು. ಈ ಚಿತ್ರದಲ್ಲಿ ಜಗಪತಿ ಬಾಬು, ಸೌಂದರ್ಯ, ಪ್ರಕಾಶ್ ರಾಜ್ ಪೈಪೋಟಿಯಿಂದ ನಟಿಸಿದ್ದಾರೆ. ಈ ಚಿತ್ರದ ನಿರ್ದೇಶಖ ಕೃಷ್ಣ ವಂಶಿ, ರಮ್ಯ ಕೃಷ್ಣನ್ ಅವರ ಪತಿ. ಆದರೆ ಸೌಂದರ್ಯ, ಈ ಸಿನಿಮಾ ಕಾರಣದಿಂದ ರಮ್ಯ ಕೃಷ್ಣನ್ ಹಾಗೂ ಕೃಷ್ಣ ವಂಶಿ ನಡುವೆ ಜಗಳ ಶುರುವಾಗಿತ್ತು.
ಸೌಂದರ್ಯ ಅವರ ನಟನೆ ನೋಡಿ ರಮ್ಯಕೃಷ್ಣ ಅಚ್ಚರಿಗೊಂಡಿದ್ದರು. ಸೌಂದರ್ಯ ನಟಿಸುತ್ತಿರುವ ಚಿತ್ರದಲ್ಲಿ ತನನ್ನು ಯಾಕೆ ಆಯ್ಕೆ ಮಾಡಿಕೊಂಡಿಲ್ಲ ಎಂದು ನಿರ್ದೇಶಕ, ಪತಿ ಕೃಷ್ಣ ವಂಶಿ ಜೊತೆ ಜಗಳ ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ನಾನು ಇರಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದರು.
ನಟಿ ಸೌಂದರ್ಯಳನ್ನು ಆಯ್ಕೆ ಮಾಡಿಕೊಂಡಾಗ ಪತ್ನಿಯಾಗಿದ್ದ ನನ್ನ ಹೆಸರು ಯಾಕೆ ಕೈಬಿಟ್ಟಿದ್ದೀರಿ ಎಂದು ಕೃಷ್ಣ ವಂಶಿ ಜೊತೆ ರಮ್ಯ ಕೃಷ್ಣ ವಾಗ್ವಾದ ಮಾಡಿದ್ದರು ಎನ್ನಲಾಗುತ್ತಿದೆ. ಈ ವಾಗ್ವಾದ, ಅಸಮಾಧಾನ ಹಲವು ದಿನಗಳ ವರೆಗೆ ಸಾಗಿತ್ತು ಎಂದು ವರದಿಗಳು ಹೇಳುತ್ತಿದೆ.