- Home
- Entertainment
- Cine World
- ಮಹಾವತಾರ ಬಾಬಾಜಿ ಗುಹೆಯಲ್ಲಿ ಧ್ಯಾನಸ್ಥರಾದ ರಜನಿಕಾಂತ್: ಸೂಪರ್‌ಸ್ಟಾರ್ ಸರಳ ಬದುಕು ಟ್ರೆಂಡಿಂಗ್!
ಮಹಾವತಾರ ಬಾಬಾಜಿ ಗುಹೆಯಲ್ಲಿ ಧ್ಯಾನಸ್ಥರಾದ ರಜನಿಕಾಂತ್: ಸೂಪರ್‌ಸ್ಟಾರ್ ಸರಳ ಬದುಕು ಟ್ರೆಂಡಿಂಗ್!
ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಮಹಾನ್ ಯೋಗಿ ಬಾಬಾಜಿ ಸಾಧನೆ ಮಾಡುತ್ತಿದ್ದ ಗುಹೆ ಇದೆ. ಮಹಾವತಾರ ಬಾಬಾಜಿ ಅವರನ್ನು ತನ್ನ ಅಧ್ಯಾತ್ಮ ಗುರು ಎಂದು ರಜನಿಕಾಂತ್ ಸ್ವೀಕರಿಸಿದ್ದಾರೆ.
15

Image Credit : Social Media
ಬಾಬಾಜಿ ಗುಹೆಯಲ್ಲಿ ಧ್ಯಾನ
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಹಿಮಾಲಯದ ಕಡಿದಾದ ಬೆಟ್ಟದಲ್ಲಿರುವ ಮಹಾವತಾರ ಬಾಬಾಜಿ ಗುಹೆಯಲ್ಲಿ ಧ್ಯಾನ ನಿರತರಾಗಿದ್ದಾರೆ.
25
Image Credit : Social Media
ಹಿಮಾಲಯ ಪ್ರವಾಸ
ಕಳೆದ ಕೆಲವು ದಿನಗಳಿಂದ ಹಿಮಾಲಯ ಪ್ರವಾಸದಲ್ಲಿರುವ ರಜನಿಕಾಂತ್ ಋಷಿಕೇಶದಲ್ಲಿ ಬೀದಿ ಬದಿಯಲ್ಲಿ ತಿಂಡಿ ತಿಂದು ತಮ್ಮ ಸರಳತನದಿಂದ ಸುದ್ದಿಯಾಗಿದ್ದರು.
35
Image Credit : Social Media
ಬಾಬಾಜಿ ಗುಹೆಗೆ ಭೇಟಿ
ಬಳಿಕ ಅವರು ಪ್ರವಾಸ ಮುಂದುವರಿಸಿ, ಬದರೀನಾಥ ತಲುಪಿದ್ದರು. ಅಲ್ಲಿ ದೇವರ ದರ್ಶನ ಪಡೆದ ಬಳಿಕ ತಮ್ಮ ಅಧ್ಯಾತ್ಮ ಗುರು ಮಹಾವತಾರ ಬಾಬಾಜಿ ಅವರ ಗುಹೆಗೆ ತೆರಳಿದ್ದಾರೆ.
45
Image Credit : Social Media
ಅಧ್ಯಾತ್ಮ ಗುರು
ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಮಹಾನ್ ಯೋಗಿ ಬಾಬಾಜಿ ಸಾಧನೆ ಮಾಡುತ್ತಿದ್ದ ಗುಹೆ ಇದೆ. ಮಹಾವತಾರ ಬಾಬಾಜಿ ಅವರನ್ನು ತನ್ನ ಅಧ್ಯಾತ್ಮ ಗುರು ಎಂದು ರಜನಿಕಾಂತ್ ಸ್ವೀಕರಿಸಿದ್ದಾರೆ.
55
Image Credit : Social Media
ಹೊಸ ಸಿನಿಮಾ ಆರಂಭಕ್ಕೆ ಮುನ್ನ ಭೇಟಿ
ಪ್ರತೀ ಸಿನಿಮಾ ಕೆಲಸ ಸಂಪೂರ್ಣಗೊಂಡ ಬಳಿಕ ಹಾಗೂ ಹೊಸ ಸಿನಿಮಾ ಆರಂಭಕ್ಕೆ ಮುನ್ನ ಬಾಬಾಜಿ ಗುಹೆಗೆ ರಜನಿಕಾಂತ್ ಭೇಟಿ ನೀಡುತ್ತಾರೆ. ಅಲ್ಲಿ ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ.
Latest Videos