ರಜಿನಿಕಾಂತ್ ಹಾಗೂ ಪತ್ನಿ ಲತಾರ ಇಂಟರೆಸ್ಟಿಂಗ್ ಲವ್‌ಸ್ಟೋರಿ!
First Published Dec 14, 2020, 3:15 PM IST
1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದ ದಕ್ಷಿಣದ ಲೆಜೆಂಡ್ ನಟ ತಲೈವಾ ರಜನಿಕಾಂತ್‌ರಿಗೆ 70 ವರ್ಷಗಳ ಸಂಭ್ರಮ. 1975ರಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿದ್ದ ತಮಿಳು ಚಿತ್ರ ಅಪೂರ್ವ ರಾಗಂಗಲ್ ಸಿನಿಮಾದ ಮೂಲಕ ರಜಿನಿ ತಮ್ಮ 25ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಿರ್ದೇಶಕ ಕೆ ಬಾಲಚಂದರ್ ಅವರ ಈ ಚಿತ್ರದಲ್ಲಿ ರಜನಿಕಾಂತ್ ಕೇವಲ 15 ನಿಮಿಷ ನಟಿಸಿದ್ದಾರೆ. ಬಾಲಿವುಡ್ ಸೇರಿ ದಕ್ಷಿಣದ ಅನೇಕ ಹಿಟ್‌ಗಳಲ್ಲಿ ಕೆಲಸ ಮಾಡಿದ ರಜನಿಕಾಂತ್ 1981ರ ಫೆಬ್ರವರಿ 26 ರಂದು ಲತಾ ರಂಗಾಚಾರಿ ಅವರನ್ನು ವಿವಾಹವಾದರು. ರಜನಿಕಾಂತ್ ಮತ್ತು ಲತಾ ಅವರ ಪ್ರೇಮಕಥೆ ಸಾಕಷ್ಟು ಇಂಟರೆಸ್ಟಿಂಗ್ ಆಗಿದೆ. ಇಲ್ಲಿದೆ ವಿವರ.

1981ರಲ್ಲಿ, ರಜನಿಕಾಂತ್ ತಿಲ್ಲು ಮಲ್ಲು ಸಿನಿಮಾದ ಶೂಟಿಂಗ್‌ನಲ್ಲಿದ್ದಾಗ ರಜನಿಕಾಂತ್ ಸಂದರ್ಶನಕ್ಕಾಗಿ ರಿಕ್ವೆಸ್ಟ್‌ವೊಂದು ಬಂದಿತ್ತು. ಆ ಇಂಟರ್‌ವ್ಯೂವ್ ಕಾಲೇಜೊಂದರ ಮ್ಯಾಗಜೀನ್‌ಗಾಗಿ ಅಗಿತ್ತು. ಕಾಲೇಜಿನಿಂದ ಸಂದರ್ಶನ ಮಾಡಲು ಬಂದವರು ಮಹಿಳೆ ಬೇರೆ ಯಾರೂ ಅಲ್ಲ ಲತಾ ರಂಗಾಚಾರಿ.

ಸಂದರ್ಶನ ಮಾಡಲು ತಲುಪಿದ ಲತಾಳನ್ನು ನೋಡಿದ ರಜನಿಕಾಂತ್ ಮನ ಸೋತರು. ಇಬ್ಬರಿಗೂ ಬೆಂಗಳೂರಿನ ಸಂಪರ್ಕವಿದ್ದ ಕಾರಣದಿಂದ ಸಂದರ್ಶನದಲ್ಲಿ ಇಬ್ಬರೂ ತುಂಬಾ ಕಂಫರ್ಟಬಲ್ ಆಗಿದ್ದರು. ಆ ಇಂಟರ್‌ವ್ಯೂವ್‌ನ ಕೊನೆಯಲ್ಲಿ ರಜನಿಕಾಂತ್ ಲತಾರಿಗೆ ಮದುವೆಗೆ ಪ್ರಪೋಸ್ ಮಾಡಿದರು. ಲತಾ ಆಶ್ಚರ್ಯಚಕಿತರಾದರು. ಆದರೂ ಅವರು ನಗುತ್ತಾ ಇದಕ್ಕಾಗಿ ನಾನು ತನ್ನ ಹೆತ್ತವರೊಂದಿಗೆ ಮಾತನಾಡಬೇಕು ಎಂದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?