ರಜಿನಿ ತಲೆಗೂದಲು ಉದುರಿದ್ದೇಗೆ? ತಮಾಷೆ ಉತ್ತರ ನೀಡಿದ ಗೆಳೆಯ ರಾಜ್ ಬಹದ್ದೂರ್
ನಟ ರಜನೀಕಾಂತ್ ಅವರ ಆತ್ಮೀಯ ಗೆಳೆಯ ರಾಜ್ ಬಹದ್ದೂರ್, ಸೂಪರ್‌ಸ್ಟಾರ್ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ರಜನಿಯ ಸ್ಟೈಲ್ ಮತ್ತು ಲುಕ್
ರಜನಿಯ ಆತ್ಮೀಯ ಗೆಳೆಯ
ರಜನಿ ಕಣ್ಣಲ್ಲಿ ಪವರ್ ಇದೆ
ಅವರ ನಟನೆ ನೋಡಿ ನಾನೇ ಬೆರಗಾಗಿದ್ದೆ. ಇವನು ಯಾಕೆ ಸಿನಿಮಾದಲ್ಲಿ ಪ್ರಯತ್ನಿಸಬಾರದು ಅಂತ ಅವನಿಗೆ ಪ್ರೋತ್ಸಾಹ ನೀಡಿದೆ. ಅವರ ನಟನೆ ನೋಡಿ ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆಯುತ್ತಿದ್ದರು. ಅವನಿಗೆ ಸಿನಿಮಾದಲ್ಲಿ ನಟಿಸಲು ಪ್ರಯತ್ನಿಸು ಎಂದು ಹೇಳಿದೆ. ಅದಕ್ಕೆ ಅವನು, ನನಗ್ಯಾರು ಚಾನ್ಸ್ ಕೊಡ್ತಾರೆ ಅಂದ. ನಿನ್ನ ಪ್ರತಿಭೆ ನಿನಗೆ ಗೊತ್ತಿಲ್ಲ, ನಿನ್ನ ಕಣ್ಣಲ್ಲಿ ಒಂದು ಪವರ್ ಇದೆ, ಅದು ನಿನ್ನನ್ನು ಎಲ್ಲೋ ಕರೆದುಕೊಂಡು ಹೋಗುತ್ತದೆ. ಪ್ರಯತ್ನಿಸು ಎಂದು ಹೇಳಿದೆ. ಏನು ಮಾಡಲಿ ಎಂದು ಕೇಳಿದ. ಚೆನ್ನೈಗೆ ಹೋಗಿ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಎರಡು ವರ್ಷ ತರಬೇತಿ ಪಡೆದುಕೋ ಅಂತ ಹೇಳಿದೆ.
ಆಗ ರಜನಿಯ ಕುಟುಂಬ ಬಡತನದಲ್ಲಿತ್ತು, ನಾನು ಅಲ್ಲಿಗೆ ಹೋದರೆ ಕುಟುಂಬ ಯಾರು ನೋಡಿಕೊಳ್ಳುತ್ತಾರೆ ಎಂದು ಕೇಳಿದ. ಆಗ ನಾನು ಸ್ವಲ್ಪ ಸ್ಥಿತಿವಂತನಾಗಿದ್ದರಿಂದ, ನಾನು ನಿನ್ನ ಕುಟುಂಬ ನೋಡಿಕೊಳ್ಳುತ್ತೇನೆ ಅಂತ ಹೇಳಿದೆ.
ಒಂದು ತಿಂಗಳಲ್ಲಿ ತಮಿಳು ಕಲಿತ ರಜನಿ
ಅವನು ಎರಡು ವರ್ಷ ಓದು ಮುಗಿಸಿ ಕನ್ನಡ ನಾಟಕವೊಂದರಲ್ಲಿ ನಟಿಸಿದಾಗ, ಆ ಸಮಯದಲ್ಲಿ ಕೆ. ಬಾಲಚಂದರ್ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಆಗ ರಜನಿಯ ನಟನೆ ನೋಡಿ ಬೆರಗಾದ ಬಾಲಚಂದರ್, ನಾಟಕ ಮುಗಿದ ನಂತರ ರಜನಿಯನ್ನು ಕರೆದು, ನೀನು ತಮಿಳು ಕಲಿ ಅಂತ ಹೇಳಿ ಹೋದರು. ಆಗ ರಜನಿಗೆ ತಮಿಳು ಸರಿಯಾಗಿ ಬರಲ್ಲ. ಬಾಲಚಂದರ್ ಹೇಳಿದ ವಿಷಯ ರಜನಿ ನನಗೆ ಹೇಳಿದ.
ತಕ್ಷಣ ಅವನಿಗೆ ತಮಿಳು ಕಲಿಸಬೇಕು ಅಂತ ನೀನೂ ನಾನೂ ಇನ್ಮೇಲೆ ತಮಿಳಲ್ಲೇ ಮಾತಾಡೋಣ ಅಂತ ಹೇಳಿದೆ. ಅದಾದ ನಂತರ ತಮಿಳಿನಲ್ಲಿ ಒಂದೊಂದಾಗಿ ಹೇಳಿಕೊಟ್ಟೆ. ಒಂದೇ ತಿಂಗಳಲ್ಲಿ ತಮಿಳು ಸರಾಗವಾಗಿ ಮಾತನಾಡಲು ಕಲಿತ. ಇದಾದ ನಂತರ ಬಾಲಚಂದರ್ ಬಳಿ ಹೋಗಿ ಅವಕಾಶ ಕೇಳಿದ. ನಿನಗೆ ತಮಿಳು ಬರಲ್ಲ ಅಂದಾಗ, ಚೆನ್ನಾಗಿ ತಮಿಳು ಮಾತಾಡಿ ತೋರಿಸಿದ್ದಾನೆ. ಇದನ್ನು ನೋಡಿ ಬಾಲಚಂದರ್ ಆಶ್ಚರ್ಯಚಕಿತರಾದರು. ನಂತರ ಅಪೂರ್ವ ರಾಗಗಳು ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು.
ರಜನಿ ಬೋಳಾದದ್ದು ಹೇಗೆ?
ರಜನಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಚೆನ್ನಾಗಿ ಸ್ಟೈಲ್ ಮಾಡ್ತಿದ್ದ. ಬಸ್‌ನಲ್ಲಿ ಎಷ್ಟೇ ಜನ ಇದ್ದರೂ ಫಟಾಫಟ್ ಟಿಕೆಟ್ ಕೊಡ್ತಿದ್ದ. ತಲೆಕೂದಲನ್ನು ಸವರಿಕೊಳ್ಳುತ್ತಲೇ ಇರ್ತಿದ್ದ. ಸಿಗ್ನಲ್‌ನಲ್ಲಿ ಬಸ್ ನಿಂತರೆ, ಕೆಳಗೆ ಇಳಿದು ಸ್ಟೈಲ್ ಆಗಿ ನಿಂತು ಸಿಗರೇಟ್ ಸೇದುತ್ತಿದ್ದ. ಅವನು ತಲೆಕೂದಲನ್ನು ಸ್ಟೈಲ್ ಮಾಡ್ತಿದ್ದದ್ದರಿಂದ ಕೂದಲು ಉದುರಿಹೋಯ್ತು. ಈಗ ಅವನು ಬೋಳಾದದ್ದಕ್ಕೆ ಕಾರಣ ಇದೇ ಎಂದು ತಮಾಷೆಯ ಉತ್ತರ ನೀಡಿದರು.
ರಸ್ತೆಯಲ್ಲಿ ಹೋಗುವಾಗ ಸಿಗರೇಟ್ ಅನ್ನು ಮೇಲೆ ಎಸೆದು ಬಾಯಲ್ಲಿ ಹಿಡಿಯುತ್ತಿದ್ದ. ಡೇಯ್ ನೋಡುವವರು ಹುಚ್ಚ ಅಂತಾರೆ ಅಂತ ಬೈಯ್ಯುತ್ತಿದ್ದೆ. ಇಲ್ಲಮ್ಮ ಸುಮ್ನೆ ಪ್ರಾಕ್ಟೀಸ್ ಮಾಡ್ತಿದ್ದೀನಿ ಅಂತ ಹೇಳ್ತಿದ್ದ. ಆಗ ಪ್ರಯತ್ನಿಸಿದ್ದರಿಂದಲೇ ಇಂದು ಅದನ್ನೆಲ್ಲ ಪರದೆಯ ಮೇಲೆ ಸಲೀಸಾಗಿ ಮಾಡುತ್ತಾನೆ ಎಂದು ರಾಜ್ ಬಹದ್ದೂರ್ ಹೇಳಿದ್ದಾರೆ.