ರಜನಿಕಾಂತ್ 'ಕೂಲಿ' ಸಿನಿಮಾ ರಿಲೀಸ್ ಈ ಕಾರಣಕ್ಕೆ ಮುಂದೂಡಿಕೆ!
ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರ ಚಿನ್ನದ ಕಳ್ಳಸಾಗಣೆಯ ಕಥಾವಸ್ತುವನ್ನ ಹೊಂದಿದೆ. ಈ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಅಂತ ಹೇಳಲಾಗಗಿತ್ತು. ಆದರೆ, ಈ ಕಾರಣದಿಂದಾಗಿ ಇದೀಗ ಈ ದಿನಾಂಕಕ್ಕೆ ಮುಂದೂಡಿಕೆ ಆಗುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್, 'ಜೈಲರ್' ಚಿತ್ರದ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಟಿ. ಜೆ. ಜ್ಞಾನವೇಲ್ ನಿರ್ದೇಶನದ 'ವೇಟೈಯನ್' ಚಿತ್ರ ಹೆಚ್ಚು ಪ್ರಭಾವ ಬೀರಲಿಲ್ಲ. ಈಗ ಎಲ್ಲರ ಕಣ್ಣು 'ಕೂಲಿ' ಮೇಲಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರ ಚಿನ್ನ ಕಳ್ಳಸಾಗಣೆ ಸುತ್ತ ಸುತ್ತುತ್ತದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲಿಗೆ ‘ಕೂಲಿ’ ಮೇ ದಿನದಂದು ಬಿಡುಗಡೆಯಾಗಲಿದೆ ಎಂಬ ವರದಿಗಳು ಬಂದಿದ್ದವು.
ಆದರೆ, ಕೂಲಿ ಚಿತ್ರದ ಕೆಲಸಗಳು ಇನ್ನೂ ಪೂರ್ಣಗೊಳ್ಳದ ಕಾರಣ ದೀಪಾವಳಿಗೆ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ. ಹಬ್ಬದ ಸೀಸನ್ ನಲ್ಲಿ ಕಲೆಕ್ಷನ್ ಜಾಸ್ತಿ ಆಗಿರುವುದರಿಂದ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆಯಂತೆ.
ರಜನಿಕಾಂತ್ ಆರೋಗ್ಯ ಸಮಸ್ಯೆಗಳಿಂದ ಶೂಟಿಂಗ್ ನಿಂತುಹೋಗಿತ್ತು. ಈಗ ಮತ್ತೆ ಶುರುವಾಗಿದೆ. ರಜನಿ ಚಿನ್ನದ ಕಳ್ಳಸಾಗಾಣೆದಾರನ ಪಾತ್ರದಲ್ಲಿ ನಟಿಸ್ತಿದ್ದಾರೆ. ನಾಗಾರ್ಜುನ, ಸತ್ಯರಾಜ್, ಸೌಬಿನ್ ಶಾಹಿರ್ ಕೂಡ ಈ ಚಿತ್ರದಲ್ಲಿದ್ದಾರೆ. ಅನಿರುದ್ ಸಂಗೀತ, ಕಲೈಪುಲಿ ಎಸ್. ಥಾನು ನಿರ್ಮಾಣ.