ಪತಿಗೆ ಅವಮಾನಸಿದ ರಾಜೇಶ್ ಖನ್ನಾರಿಗೆ ಕಪಾಳಮೋಕ್ಷ ಮಾಡಿದ್ದ ಜಯಾ ಬಚ್ಚನ್!
ಬಾಲಿವುಡ್‌ನ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರು ನಿಧನರಾಗಿ 9 ವರ್ಷಗಳು ಕಳೆದಿವೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಾಜೇಶ್ ಖನ್ನಾ 2012 ರ ಜುಲೈ 18 ರಂದು ಮುಂಬೈನಲ್ಲಿ ನಿಧನರಾದರು. 'ಕಾಕಾ' ಎಂದೇ ಫೇಮಸ್ ಆಗಿದ್ದ ನಟ ರಾಜೇಶ್ ಖನ್ನಾ ಪಂಜಾಬ್‌ನ ಅಮೃತಸರದಲ್ಲಿ ಜನಿಸಿದರು. 60 ರ ದಶಕದಲ್ಲಿ 'ಆಖ್ರಿ ಖಾತ್' ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1969 ರ ಚಲನಚಿತ್ರ 'ಆರಾಧನಾ' ಸಿನಿಮಾದ ಮೂಲಕ ಫೇಮಸ್ ಆದ ರಾಜೇಶ್ ಖನ್ನಾ ಮುಟ್ಟಿದ ಎತ್ತರವನ್ನು ಯಾರಿಗೂ ತಲುಪಲು ಸಾಧ್ಯವಾಗಲಿಲ್ಲ. ಒಮ್ಮೆ ಅಮಿತಾಬ್ ಬಗ್ಗೆ ಅವಮಾನ ಮಾಡಿದ ಖನ್ನಾಗೆ ಜಯಾ ಬಚ್ಚನ್ ಕಪಾಳಮೋಕ್ಷ ಮಾಡಿದರು. ಘಟನೆಯ ವಿವರ ಇಲ್ಲಿದೆ.

ಈ ಘಟನೆ ನೆಡೆದಾಗ ಅಮಿತಾಬ್ ಬಚ್ಚನ್ ಮತ್ತು ಜಯ ಇನ್ನೂ ಮದುವೆಯಾಗಿರಲಿಲ್ಲ ಮತ್ತು ಆ ಸಮಯದಲ್ಲಿ ರಾಜೇಶ್ ಖನ್ನಾ ಸೂಪರ್ ಸ್ಟಾರ್ ಆಗಿದ್ದರು.

ರಾಜೇಶ್ ಖನ್ನಾ ವೃತ್ತಿಜೀವನದಲ್ಲಿ ಬ್ಯಾಕ್ ಟು ಬ್ಯಾಕ್ 15 ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದರು. ಅವರ ದಾಖಲೆಯನ್ನು ಇನ್ನೂ ಮುರಿಯಲು ಸಾಧ್ಯವಾಗಿಲ್ಲ.

ಆದರೆ ಅಮಿತಾಬ್ ಬಚ್ಚನ್ ಬಾಲಿವುಡ್‌ಗೆ ಕಾಲಿಟ್ಟ ನಂತರ ಅವರ ಸ್ಟಾರ್‌ಡಮ್ ಕುಸಿಯಲು ಪ್ರಾರಂಭಿಸಿತು.

ಇದರಿಂದ ಅಸಮಾಧಾನಗೊಂಡ ರಾಜೇಶ್ ಒಮ್ಮೆ ಅವರು ಬಿಗ್ ಬಿ ಯನ್ನು ಅವಮಾನಿಸಿದ್ದರು. ಇದರಿಂದ ಜಯಾ ತುಂಬಾ ಕೋಪಗೊಂಡಿದ್ದರು. ಇದು ರಾಜೇಶ್ ಖನ್ನಾ ಅವರ ಜೀವನದ ದೊಡ್ಡ ತಪ್ಪು ಎಂದೂ ಪರಿಗಣಿಸಲಾಗಿದೆ.

ಅಮಿತಾಬ್ ಬಚ್ಚನ್ ಬಾಲಿವುಡ್‌ಗೆ ಕಾಲಿಟ್ಟ ಸಮಯದಲ್ಲಿ ಆಗಲೇ ಹೆಸರು ಮಾಡಿದ ಅನೇಕ ಸ್ಟಾರ್‌ಗಳಿದ್ದರು. ರಾಜೇಶ್ ಖನ್ನಾ ಯಶಸ್ಸಿನ ಉತ್ತುಂಗದಲ್ಲಿದ್ದರು. ಆದರೂ ಆಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ಅಮಿತಾಬ್ ಕಾಣಿಸಿಕೊಂಡಾಗ, ಪ್ರೇಕ್ಷಕರ ಆಯ್ಕೆ ಬದಲಾಗತೊಡಗಿತು ಅಮಿತಾಬ್ ನಿಧಾನವಾಗಿ ಯಶಸ್ಸನ್ನು ಪಡೆಯುತ್ತಿದ್ದರು ಮತ್ತು ಜಯ ಜೊತೆಯ ಸಂಬಂಧದ ಸುದ್ದಿಯೂ ಬರಲಾರಂಭಿಸಿತು.

1972 ರಲ್ಲಿ ಬಾವರ್ಚಿ ಚಿತ್ರದ ಶೂಟಿಂಗ್ ಸಮಯದಲ್ಲಿ, ಅಮಿತಾಬ್ ಜಯಾ ಮತ್ತು ಅವರ ಸ್ನೇಹಿತ ಅಸ್ರಾನಿಯನ್ನು ಭೇಟಿಯಾಗಲು ಸೆಟ್‌ಗಳಿಗೆ ಹೋಗುತ್ತಿದ್ದರು. ಆ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದ ರಾಜೇಶ್ ಖನ್ನಾ ಅಮಿತಾಬ್ ಅವರ ಯಶಸ್ಸನ್ನು ಸಹಿಸಲಿಲ್ಲ ಮತ್ತು ಅಮಿತಾಬ್ ಬಗ್ಗೆ ಅಸೂಯೆ ಪಟ್ಟರು.

ಅಂತಹ ಪರಿಸ್ಥಿತಿಯಲ್ಲಿ ರಾಜೇಶ್ ಖನ್ನಾ ಮತ್ತು ಅಮಿತಾಬ್ ಅವರು ಬಾವಾರ್ಚಿಯ ಸೆಟ್‌ನಲ್ಲಿ ಭೇಟಿಯಾದಾಗ, ಬಿಗ್ ಬಿ ಅವರನ್ನು ದರಿದ್ರ ಎಂದು ಕರೆದರು. ಈ ವಿಷಯದಿಂದ ಕೋಪಗೊಂಡ ಜಯಾ ರಾಜೇಶ್ ಖನ್ನಾರಿಗೆ ಕಪಾಳಮೋಕ್ಷ ಮಾಡಿದರು.

ಅಷ್ಟೇ ಅಲ್ಲ ಒಂದು ದಿನ ಈ ವ್ಯಕ್ತಿ (ಅಮಿತಾಬ್ ಬಚ್ಚನ್) ಎಷ್ಟು ದೊಡ್ಡ ಸ್ಟಾರ್ ಆಗುತ್ತಾರೆ ಎಂಬುದನ್ನು ಜಗತ್ತು ನೋಡುತ್ತದೆ ಎಂದು ಜಯ ಹೇಳಿದರು. ಜಯರ ಮಾತು ನಂತರ ನಿಜವೆಂದು ಸಾಬೀತಾಯಿತು. ಅಮಿತಾಬ್ ದೊಡ್ಡ ಸೂಪರ್‌ಸ್ಟಾರ್ ಆದರು ಮತ್ತು ರಾಜೇಶ್ ಖನ್ನಾ ಅವರ ವೃತ್ತಿಜೀವನ ಇಳಿಯಿತು.

ರಾಜೇಶ್ ಖನ್ನಾರ ಸಿನಿಮಾಗಳು ಫ್ಲಾಪ್ ಆಗಲು ಪ್ರಾರಂಭಿಸಿವು. ವರದಿಗಳ ಪ್ರಕಾರ, ಅಮಿತಾಬ್ ಮೇಲೆ ಅಸೂಯೆಯ ಹಿಂದಿನ ಕಾರಣ ಕಿಶೋರ್ ಕುಮಾರ್. ವಾಸ್ತವವಾಗಿ, ಕಿಶೋರ್ ಕುಮಾರ್ ಫೇಮಸ್ ಹಿನ್ನೆಲೆ ಗಾಯಕರಾಗಿದ್ದರು. ರಾಜೇಶ್ ಖನ್ನಾರಿಗೆ ಕಿಶೋರ್ ಕುಮಾರ್ ಅವರ ಧ್ವನಿ ತುಂಬಾ ಚೆನ್ನಾಗಿ ಸೂಟ್ ಆಗಿತ್ತು. ಅನೇಕ ಚಿತ್ರಗಳಲ್ಲಿ, ಕಿಶೋರ್ ಕುಮಾರ್ ಮಾತ್ರ ರಾಜೇಶ್ ಖನ್ನಾ ಅವರ ಹಾಡುಗಳನ್ನು ಹಾಡುತ್ತಿದ್ದರು.

ಅದೇ ಸಮಯದಲ್ಲಿ, ಅಮಿತಾಬ್ ಬಚ್ಚನ್ ಸಿನಿಮಾಗಳು ಬಂದವು ಮತ್ತು ಕಿಶೋರ್ ಕುಮಾರ್ ಧ್ವನಿ ಬಚ್ಚನ್‌ಗೂ ಹೊಂದಿ ಅಮಿತಾಬ್ ಹಿಟ್ ಆದರು.

ಆದರೆ ಈ ಎಲ್ಲ ವಿಷಯಗಳ ಹೊರತಾಗಿಯೂ ಆನಂದ್ ಚಿತ್ರದಲ್ಲಿ ಅಮಿತಾಬ್ ಮತ್ತು ರಾಜೇಶ್ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರವು ರಾಜೇಶ್ ಮತ್ತು ಅಮಿತಾಬ್ ಅವರ ವೃತ್ತಿಜೀವನದ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದಾಗಿದೆ.