ರಾಜಮೌಳಿಗೆ ಪೈಪೋಟಿ ನೀಡುವ ಏಕೈಕ ನಿರ್ದೇಶಕ ಇವರೇ ಅಂತೆ: ಕನ್ನಡಿಗ ಡೈರೆಕ್ಟರ್ ಟಫ್ ಕಾಂಪಿಟೇಷನ್ ಕೊಡ್ತಿದ್ದಾರಾ?
ಬಾಹುಬಲಿ ಚಿತ್ರದ ಮೂಲಕ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಎಸ್.ಎಸ್. ರಾಜಮೌಳಿ ಭಾರತದ ದೊಡ್ಡ ನಿರ್ದೇಶಕರಲ್ಲಿ ಒಬ್ಬರು. ಸದ್ಯದ ಭಾರೀ ಫಾರ್ಮ್‌ನಿಂದ ರಾಜಮೌಳಿ ಮೊದಲ ಸ್ಥಾನದಲ್ಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದಾನೊಂದು ಕಾಲದಲ್ಲಿ ತಮಿಳಿನ ಖ್ಯಾತ ಶಂಕರ್ಗೆ ಕೂಡ ಹೀಗೆ ದೇಶಾದ್ಯಂತ ಭಾರೀ ಕ್ರೇಜ್ ಇತ್ತು. ಆದರೆ ಈಗ ಶಂಕರ್ ಹವಾ ಸ್ವಲ್ಪ ಕಡಿಮೆಯಾಗಿದೆ.
ಸದ್ಯ ಫಾರ್ಮ್‌ನಲ್ಲಿರುವ ರಾಜಮೌಳಿ ಅವರಿಗೆ ಪೈಪೋಟಿ ನೀಡುವ ನಿರ್ದೇಶಕರು ಯಾರು ಎಂಬ ಬಗ್ಗೆ ಹಲವು ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಕೆಜಿಎಫ್ ಮೂಲಕ ಭಾರೀ ಹೆಸರು ಮಾಡಿರುವ ಕನ್ನಡಿಗ ಪ್ರಶಾಂತ್ ನೀಲ್, ಸುಕುಮಾರ್, ಕೊರಟಾಲ ಶಿವ, ಬಾಲಿವುಡ್‌ನ ಕೆಲ ನಿರ್ದೇಶಕರು, ಯುವ ನಿರ್ದೇಶಕ ಪ್ರಶಾಂತ್ ವರ್ಮಾ, ಅಟ್ಲಿ ಹೀಗೆ ಕೆಲವರ ಹೆಸರುಗಳು ರಾಜಮೌಳಿಗೆ ಪೈಪೋಟಿಯಾಗಿ ಕೇಳಿ ಬರುತ್ತಿವೆ. ಇವರಲ್ಲಿ ರಾಜಮೌಳಿ ಅವರಿಗೆ ಭಾರೀ ಪೈಪೋಟಿ ನೀಡಲಿರುವ ನಿರ್ದೇಶಕರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ರಾಜಮೌಳಿ ಮಾತ್ರ ತಮಗೆ ನಿಜವಾದ ಸ್ಪರ್ಧಿ ಯಾರು ಎಂದು ಅವರೇ ನಿರ್ಧರಿಸಿದ್ದಾರೆ. ಈಗಲ್ಲ, ಕೆಲ ವರ್ಷಗಳ ಹಿಂದೆ ರಾಜಮೌಳಿ ಅವರಿಗೆ ನಿರ್ದೇಶಕರೊಬ್ಬರು ಪೈಪೋಟಿ ನೀಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಈಗ ಅದು ನಿಜವಾಗಿದೆ.
ನಿರ್ದೇಶಕ ಶಂಕರ್ ಮತ್ತು ರಾಜಮೌಳಿ ನಡುವೆ ಪೈಪೋಟಿ ಇದೆ ಎಂಬುದು ಹಲವರ ಅಭಿಪ್ರಾಯ. ಆದರೆ ನಿರ್ದೇಶಕ ಸುಕುಮಾರ್ ಅವರು ಪೈಪೋಟಿ ನೀಡುವ ನಿರ್ದೇಶಕ ಎಂದು ರಾಜಮೌಳಿ ಈಗಾಗಲೇ ಹೇಳಿದ್ದಾರೆ. ರಾಜಮೌಳಿಗೆ ಸುಕುಮಾರ್ ಎಂದರೆ ತುಂಬಾ ಇಷ್ಟವಂತೆ. ಈ ಬಗ್ಗೆ ಸ್ವತಃ ಜಕಣ್ಣ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ರಾಜಮೌಳಿಯಂತಹ ನಿರ್ದೇಶಕರು ನನ್ನನ್ನು ಇಷ್ಟಪಟ್ಟಿದ್ದು ನನ್ನ ಅದೃಷ್ಟ ಎಂದು ಸುಕುಮಾರ್ ಒಂದು ಸಂದರ್ಭದಲ್ಲಿ ಹೇಳಿದ್ದಾರೆ.
ರಾಜಮೌಳಿ ಹೇಳಿದ್ದು.. ಆರ್ಯ ಸಿನಿಮಾ ನೋಡಿದಾಗ.. ಅವರೇ ನನಗೆ ಪೈಪೋಟಿ ಎಂದು ಫಿಕ್ಸ್ ಆಗಿತ್ತು. ನಿಮ್ಮನ್ನು ದ್ವೇಷಿಸಲು ಅಥವಾ ಸ್ನೇಹಿತರಾಗಲು ಈ ಎರಡು ಆಯ್ಕೆಗಳಿವೆ. ದ್ವೇಷ ಸಾಧಿಸಿ ಸ್ಥಿಮಿತ ಕಳೆದುಕೊಳ್ಳುವುದಕ್ಕಿಂತ ಸ್ನೇಹ ಬೆಳೆಸಿಕೊಂಡು ಖುಷಿ ಪಡುವುದು ಉತ್ತಮ ಎಂದಿದ್ದಾರೆ ರಾಜಮೌಳಿ. ಜಕ್ಕಣ್ಣನ ಮಾತಿಗೆ ಸುಕುಮಾರ್ ನಗೆಗಡಲಲ್ಲಿ ತೇಲಿದ್ದರು.
ಆರಂಭದಲ್ಲಿ ಪ್ರೇಮಕಥೆಗಳಿಂದ ಪ್ರಭಾವಿತರಾದ ಸುಕುಮಾರ್ ನಂತರ ರಂಗಸ್ಥಳಂ ಮತ್ತು ಪುಷ್ಪ ಚಿತ್ರಗಳ ಮೂಲಕ ಭಾರೀ ಜನಪ್ರಿಯತೆಯನ್ನ ಗಳಿಸಿಸಿದ್ದಾರೆ. ಪುಷ್ಪ 2 ಮೂಲಕ ಪಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಂದು ಮೆಟ್ಟಿಲು ಏರಲು ಸುಕುಮಾರ್ ಸಜ್ಜಾಗುತ್ತಿದ್ದಾರೆ.