ತಮ್ಮನ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಚಂದನವನದ ಈ ಸ್ಟಾರ್ ನಟಿ ಯಾರು ಹೇಳಿ?
ಚಂದನವನದ ಸ್ಟಾರ್ ನಟಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ತಮ್ಮ ಸಹೋದರ ರುದ್ರಾಕ್ಷ ದ್ವಿವೇದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುದ್ದಾದ ಒಂದಷ್ಟು ಫೋಟೊಗಳನ್ನು ಹಾಕಿ ತಮ್ಮನಿಗೆ ವಿಶ್ ಮಾಡಿದ್ದಾರೆ.
ಸ್ಯಾಂಡಲ್’ವುಡ್ ನಲ್ಲಿ ಮಿಂಚುತ್ತಿರುವ ತುಪ್ಪದ ಬೆಡಗಿ ಅಂತಾನೆ ಜನಪ್ರಿಯತೆ ಪಡೆದಿರುವ ನಟಿ ರಾಗಿಣಿ ದ್ವಿವೇದಿ (Ragini Dwivedi). ಸದ್ಯ ಕನ್ನಡದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಗಿಣಿ, ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೊಗಳನ್ನು ಜೊತೆಗೆ ಅಡುಗೆ ವಿಡೀಯೋ, ಫ್ಯಾಮಿಲಿ ಫೋಟೊಗಳನ್ನು ಶೇರ್ ಮಾಡುತ್ತಲಿರುತ್ತಾರೆ.
ಇದೀಗ ನಟಿ ತಮ್ಮ ಸಹೋದರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಾಲ್ಯದ ಫೋಟೊ ಸೇರಿ ಒಂದಷ್ಟು ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಬಾಲ್ಯದಲ್ಲಿ ರಾಗಿಣಿ ತುಂಬಾ ಮುಗ್ಧವಾಗಿ, ಮುದ್ದು ಮುಖ ಹೊಂದಿದೆ ಚೆಲುವೆಯಾಗಿದ್ದರು. ಈಗ ಆ ಸೌಂದರ್ಯ ಮತ್ತೆರಡು ಪಟ್ಟು ಹೆಚ್ಚಾಗಿದೆ ಅಂದ್ರೆ ತಪ್ಪಾಗಲ್ಲ. ಫೋಟೊಗಳ ಜೊತೆಗೆ ನಟಿ ತಮ್ಮನ ಕುರಿತಾಗಿ ಒಂದಷ್ಟು ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.
ನೀನು ಹುಟ್ಟಿದ ಕ್ಷಣದಿಂದ ನಾನು ನನ್ನ ಜೀವನದಲ್ಲಿ ಒಂದು ವಿಶೇಷವಾದದ್ದನ್ನು ಹೊಂದಿದ್ದೇನೆ ಎಂದು ನನಗೆ ತಿಳಿದಿತ್ತು, ನಾನು ಚಿಕ್ಕವಳಿದ್ದಾಗ, ನೀನು ನನ್ನ ಕೈಯನ್ನು ಹಿಡಿದುಕೊಳ್ಳುವುದರಿಂದ ಹಿಡಿದು, ನಿನಗೆ ಮೇಕಪ್ ಹಾಕಲು ನನಗೆ ಅವಕಾಶ ನೀಡುವವರೆಗೂ , ಜೊತೆಗೆ ಪ್ರತಿ ಬಾರಿಯೂ ನನ್ನೊಂದಿಗೆ ಫೋಟೊ ತೆಗೆದುಕೊಳ್ಳಲು ನಿನ್ನನ್ನು ಒತ್ತಾಯಿಸುವುದು, ನಿನ್ನನ್ನು ನನ್ನ ಅನಧಿಕೃತ ಫೋಟೊಗ್ರಾಫರ್ ಆಗಿ ಮಾಡುವವರೆಗೆ ನಾನು ಪ್ರತಿದಿನವೂ ನಿನ್ನನ್ನು ನೆನಪಿಸಿಕೊಳ್ಳುತ್ತೇನೆ.
ಪ್ರತಿದಿನ ನೀನು ಬಯಸುವ ಪ್ರತಿಯೊಂದು ಗುರಿಯನ್ನು ಸಾಧಿಸುವುದನ್ನು ನೋಡಿ ಖುಷಿ ಪಟ್ಟಿದ್ದೇನೆ. ಜೊತೆಗೆ ಕೆಲವೊಮ್ಮೆ ನೀನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರೊಟೆಕ್ಟಿವ್ ಆಗುವ ಮೂಲಕ, ಕೂಲ್ ಬ್ರದರ್ ಆಗಿ, ನನ್ನ ಕಾಳಜಿ ವಹಿಸುವೆ. ನಿನ್ನ ಕಾಳಜಿಯನ್ನು ನಾನು ಇಷ್ಟ ಪಡುತ್ತೇನೆ.
ನೀನೊಬ್ಬ ಉತ್ತಮ ಕೇರ್ ಟೇಕರ್ ಕೂಡ ಹೌದು. ಮಾತನಾಡುವವರಿಗೆ ಉತ್ತಮ ಕೇಳುಗನಾಗಿರುವುದು, ಕುಟುಂಬದ ಜನರಿಗೆ ಮಾತ್ರವಲ್ಲ, ಅಪರಿಚಿತರಿಗೆ ಮತ್ತು ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಲು ಮತ್ತು ನಂತರ ಅದನ್ನು ಪರಿಹರಿಸಲು, ನೀನು ತೋರುವ ಪ್ರೀತಿ, ಕಾಳಜಿಯೇ ಅದ್ಭುತ, ಆದರೆ ನೀನು ಎಲ್ಲವನ್ನೂ ಎಷ್ಟು ಸರಳವಾಗಿ ಮಾಡಿ ಮುಗಿಸುವೆ ಅದನ್ನ ನೆನೆಸಿಕೊಳ್ಳೋದೆ ಖುಷಿ.
ಐ ಲವ್ ಯೂ ಸೋ ಮಚ್, ನಿನಗೆ ತುಂಬಾನೆ ಗೌರವ ನೀಡುತ್ತೇನೆ. ನಾನು ನೋಡಿದ ಇನ್ನೊಬ್ಬ ಅದ್ಭುತ ಮನುಷ್ಯನಾಗಿ ಬದಲಾಗುತ್ತಿರುವ ನಿನಗೆ ಇದೀಗ ಮತ್ತೊಂದು ವರ್ಷ ತುಂಬಿದೆ. ನಿನ್ನ ಪರಿಶ್ರಮದಿಂದ ನೀನು ಮತ್ತಷ್ಟು ಎತ್ತರಕ್ಕೆ ಬೆಳೆ. ನಿನ್ನ ತಂಗಿ ನಿನ್ನನ್ನು ತುಂಬಾನೆ ಪ್ರೀತಿಸುತ್ತಾಳೆ ಎನ್ನುತ್ತಾ ಬ್ರಾಕೆಟ್ ಹಾಕಿ ಅಲ್ಲಿ ನಾನು ಕುಟುಂಬದಲ್ಲಿ ಹಿರಿಯವಳು, ಮತ್ತು ಬುದ್ಧಿವಂತೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಮುನ್ನಾ ಎಂದು ಬರೆದುಕೊಂಡಿದ್ದಾರೆ.
ಇಷ್ಟು ದೊಡ್ಡ ಪೋಸ್ಟ್ ಜೊತೆಗೆ ರಾಗಿಣಿ ಶೇರ್ ಮಾಡಿರುವ ಒಂದೊಂದು ಫೋಟೊಗಳು ಗಮನ ಸೆಳೆಯುತ್ತಿವೆ. ತಮ್ಮನ ಜೊತೆಗಿನ ಬಾಲ್ಯದ ಫೋಟೊದಿಂದ ಹಿಡಿದು, ತಮ್ಮನ ಜೊತೆ ಕಳೆದ ಮಧುರ ಕ್ಷಣಗಳ ಫೋಟೊಗಳನ್ನು ಸೆರೆ ಹಿಡಿದು ಶೇರ್ ಮಾಡಿದ್ದಾರೆ.